vijaya times advertisements
Visit Channel

October 30, 2021

1,999 ರೂ.ಗೆ ವಿಶ್ವದ ಅತ್ಯಂತ ಅಗ್ಗದ 4G ಫೋನ್ !

ಈ ಫೋನ್ ಅನ್ನು ಹೇಗೆ ಖರೀದಿಸಬಹುದು ಎಂಬುದರ ಬಗ್ಗೆ ಈ ಹಿಂದೆ ಕಂಪನಿಯು ಮಾಹಿತಿಯನ್ನು ನೀಡಿತ್ತು. ಸದ್ಯ ಈ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ 6,499 ರೂ.ಗಳಿಗೆ ಬಿಡುಗಡೆಯಾಗುತ್ತಿದ್ದರೂ, ನೀವು ಇದನ್ನು 1,999 ರೂ.ಗೆ ಮನೆಗೆ ಕೊಂಡೊಯ್ಯಬಹುದು. JioPhone Next ಅನ್ನು ದೀಪಾವಳಿ ಹಬ್ಬದಂದು ಅಂದರೆ ನವೆಂಬರ್ 4ರಿಂದ ಖರೀದಿಸಬಹುದು ಎಂದು ಕಂಪನಿ ತಿಳಿಸಿದೆ.  

ಪುನೀತ್ ಬಗ್ಗೆ ಪರಮೇಶ್ವರ್‌ ಗುಂಡ್ಕಲ್‌ ಬಿಚ್ಚಿಟ್ಟ ಸತ್ಯ

‘‘ಕನ್ನಡದ ಕೋಟ್ಯಧಿಪತಿ’ ಕಾರ್ಯಕ್ರಮದ ವೇಳೆ ಸ್ಪರ್ಧಿಗಳು ತಪ್ಪು ಉತ್ತರ ಕೊಟ್ಟು ಯಾರಾದರೂ ದುಡ್ಡು ಸೋತರೆ ಶೂಟಿಂಗ್ ಮುಗಿದ ಮೇಲೆ ಸಿಕ್ಕಾಪಟ್ಟೆ ಬೇಜಾರು ಮಾಡಿಕೊಳ್ಳುತ್ತಿದ್ದರು. ಗೆಲ್ಲದ ಎಷ್ಟೋ ಜನರಿಗೆ ತಾವೇ ದುಡ್ಡು ಕೊಡುತ್ತಿದ್ದರು ಮತ್ತು ಅದು ಎಲ್ಲೂ ಸುದ್ದಿಯಾಗದ ಹಾಗೆ ನೋಡಿಕೊಳ್ಳುತ್ತಿದ್ದರು. ಎಲ್ಲರಿಗೂ ಸಿಕ್ಕಾಪಟ್ಟೆ ದುಡ್ಡು ಸಿಗಬೇಕು, ಯಶಸ್ಸು ಸಿಗಬೇಕು, ಎಲ್ಲರೂ ದೇಶ ಸುತ್ತಬೇಕು, ಖುಷಿಯಾಗಿರಬೇಕು ಅಂತ ಬಹಳ ಪ್ರಾಮಾಣಿಕವಾಗಿ ಆಸೆ ಪಡುತ್ತಿದ್ದ ವ್ಯಕ್ತಿ’’ ಎಂದು ಪುನೀತ್ ರಾಜ್‌ಕುಮಾರ್ ಬಗ್ಗೆ ಪರಮೇಶ್ವರ್ ಗುಂಡ್ಕಲ್ ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ಪೋಪ್‌ ಭೇಟಿಯಾಗಿ ಮಾತುಕತೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ಮೋದಿ ಮತ್ತು ಕ್ಯಾಥೋಲಿಕ್ ಚರ್ಚ್ ಮುಖ್ಯಸ್ಥರಾಗಿರುವ ಪೋಪ್ ಫ್ರಾನ್ಸಿಸ್ ನಡುವಣ ಮೊದಲ ಭೇಟಿ ಇದಾಗಿದೆ. ಪೋಪ್ ಅವರನ್ನು ಪ್ರಧಾನಿ ಭಾರತಕ್ಕೆ ಆಹ್ವಾನಿಸಿದ್ದಾರೆ.

ಕೆಎಸ್‌ಒಯುನಿಂದ ಬೋಧಕ ಹುದ್ದೆಗಳಿಗೆ ನೇಮಕಾತಿ

ಆಯ್ಕೆಯಾದ ಅಭ್ಯರ್ಥಿಗಳು ಮೈಸೂರಿನಲ್ಲಿ ಕೆಲಸ ಮಾಡಬೇಕಿದೆ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ನಿಯಮಗಳ ಅನ್ವಯ ಆಯ್ಕೆಯಾದ ಅಭ್ಯರ್ಥಿಗಳಿಗೆ ವೇತನವನ್ನು ನೀಡಲಾಗುತ್ತದೆ.

ಪುನೀತ್‌ ಸಾವಿನ ಹಿನ್ನಲೆ, ರಾಯಚೂರಲ್ಲಿ ಇಬ್ಬರು ಅಭಿಮಾನಿಗಳಿಂದ ಆತ್ಮಹತ್ಯೆಗೆ ಯತ್ನ

ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದ ಈ ಇಬ್ಬರು ಯುವಕರನ್ನು ಸಿಂಧನೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದೀಗ ಇಬ್ಬರು ಚೇತರಿಸಿಕೊಳ್ಳುತ್ತಿದ್ದು, ಪೊಲೀಸರು ಸಹ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬೆಳ್ಳಿತೆರಗೂ ಸೈ ಕಿರುತೆರೆಗೂ ಜೈ ಅಂದಿದ್ದ ಪುನೀತ್

ಆರು ತಿಂಗಳ ಹಸುಗೂಸು ಆಗಿದ್ದ ಪುನೀತ್, ತಂದೆ ರಾಜಕುಮಾರ್ ಅಭಿನಯಿಸಿದ್ದ ಪ್ರೇಮದ ಕಾಣಿಕ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಅಲ್ಲಿಂದ ಹಿಡಿದುಇಲ್ಲಿಯವರೆಗೂ  ಸಿನಿ ಜರ್ನಿಯಲ್ಲಿ ಅವರು ಹಿಂತಿರುಗಿ ನೋಡಿದ್ದೆಇಲ್ಲ. ಹಾಡುಗಾರನಾಗಿ, ನಟನಾಗಿ ಚಿತ್ರ ನಿರ್ಮಾಪಕನಾಗಿ, ಅನಾಥರು, ವೃದ್ಧರಿಗೆ ಮಿಡಿಯುವ ಹೃದಯವಂತನಾಗಿ, ಗೋವುಗಳ ಆರಾಧಕನಾಗಿ ಹೀಗೆ ಅವರು ತಮ್ಮ 46 ವರ್ಷದ ಜೀವನ ಪಯಣದಲ್ಲಿ ಮಾಡಿದ ಸಾಧನೆಗಳು ಹಲವಾರು.

ರಾಜ್‌ಕುಮಾರ್‌ ಸಮಾಧಿ ಪಕ್ಕದಲ್ಲೇ ಪುನೀತ್‌ ಅಂತ್ಯಕ್ರಿಯೆಗೆ ಸಿದ್ದತೆ

ಈಗಾಗಲೇ ಕಂಠೀರವ ಸ್ಟುಡಿಯೋದಲ್ಲಿ ತಂದೆ ರಾಜಕುಮಾರ್ ಸಮಾಧಿ ಪಕ್ಕದಲ್ಲೇ ಅಂತ್ಯಕ್ರಿಯೆ ನಡೆಸಲು ನಿರ್ಧರಿಸಲಾಗಿದೆ. ಇಂದು ಸಂಜೆ ಅಂತ್ಯಕ್ರಿಯೆ ನಡೆಯಲಿದೆ ಎಂದೇ ಹೇಳಲಾಗಿತ್ತು, ಆದರೆ, ಅಮೆರಿಕದಲ್ಲಿರುವ ಪುನೀತ್ ಪುತ್ರಿ ದೃತಿ ಬೆಂಗಳೂರಿಗೆ ಆಗಮಿಸುವುದು ಸಂಜೆಯಾಗಲಿರುವುದರಿಂದ ರಾತ್ರಿ ವೇಳೆಗೆ ಅಂತ್ಯಕ್ರಿಯೆ ನಡೆಸುವುದು ಬೇಡವೆಂದು ಕುಟುಂಬಸ್ಥರು ನಿರ್ಧರಿಸಿದ್ದಾರೆ. ಹೀಗಾಗಿ ನಾಳೆಯೇ ಅಂತ್ಯಕ್ರಿಯೆ ನಡೆಸಲಾಗುತ್ತದೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ.

ಕೊನೆಗೂ ಜಾಮೀನಿನ ಮೇಲೆ ಬಡುಗಡೆಯಾದ ಆರ್ಯನ್‌ ಖಾನ್

ಮುಂಬೈ ಕರಾವಳಿ ಸಮೀಪ ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಸೇವಿಸಿದ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಆರ್ಯನ್ ಖಾನ್ ಗೆ ಗುರುವಾರ ಬಾಂಬೆ ಹೈಕೋರ್ಟ್ ಜಾಮೀನು ನೀಡಿತ್ತು. ಈ ಹಿನ್ನಲೆಯಲ್ಲಿ ಅಪಾರ ಸಂಖ್ಯೆಯ ಬೆಂಬಲಿಗರು ಜೈಲುಮುಂದೆ ಜಮಾಯಿಸಿದ್ದರು. ಆದರೆ ಜಾಮೀನು ದೊರೆತರೂ ಆರ್ಯನ್ ಖಾನ್ ನಿರಾಳರಾಗುವಂತಿಲ್ಲ. ಜಾಮೀನು ನೀಡುವುದರ ಜೊತೆ ಬಾಂಬೆ ಹೈಕೋರ್ಟ್ 14 ಷರತ್ತುಗಳನ್ನು ವಿಧಿಸಿದೆ.

ನಾಳೆ ನಟ ಪುನೀತ್ ಅಂತ್ಯಕ್ರಿಯೆ – ಬೊಮ್ಮಾಯಿ

ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಂತ್ಯಕ್ರಿಯೆ ನಾಳೆ ನಡೆಸಲಾಗುವುದು ಎಂದು ಸಿಎಂ ಬಸವರಾಜ್ ಬೊಮ್ಮಯಿ ಹೇಳಿದ್ದಾರೆ. ಪುನೀತ್ ಮಗಳು ದೆಹಲಿ ತಲುಪಿದ್ದಾರೆ.‌ಅವರು ಬೆಂಗಳೂರಿಗೆ ಸಂಜೆ 7 ಗಂಟೆಗೆ ಬರುವ ಸಾಧ್ಯತೆ ಇದೆ. ಹೀಗಾಗಿ ಅಂತ್ಯಕ್ರಿಯೆ ನಾಳೆ ಸಂಜೆ ನಡೆಸಲಾಗುವುದು ಎಂದು ಸಿಎಂ ಹಾಗೂ ರಾಘವೇಂದ್ರ ರಾಜ್ ಕುಮಾರ್ ತಿಳಿಸಿದ್ದಾರೆ.