vijaya times advertisements
Visit Channel

December 1, 2021

ಸಮಾನ ಮನಸ್ಸಿನ ಪಕ್ಷಗಳು ಒಗ್ಗಟ್ಟಾಗಬೇಕು – ಮಮತಾ ಬ್ಯಾನರ್ಜಿ

ಮುಂಬೈನಲ್ಲಿ ನಾಗರಿಕ ಸಮಾಜದ ಸದಸ್ಯರೊಂದಿಗೆ ಸಂವಾದ ನಡೆಸಿದ ಬ್ಯಾನರ್ಜಿ,”ನೀವು ಹೆಚ್ಚಿನ ಸಮಯ ವಿದೇಶದಲ್ಲಿದ್ದರೆ, ರಾಜಕೀಯವನ್ನು ಹೇಗೆ ಮಾಡಲಾಗುತ್ತದೆ? ರಾಜಕೀಯವು ನಿರಂತರ ಪ್ರಯತ್ನವನ್ನು ಬಯಸುತ್ತದೆ. ಫೆಡರಲ್ ರಚನೆಯು ಬಲವಾಗಿರಬೇಕೆಂದು ನಾನು ಬಯಸುತ್ತೇನೆ.ಮತ್ತು ಎಲ್ಲಾ ಪ್ರಾದೇಶಿಕ ಪಕ್ಷಗಳು ಇದ್ದರೆ ಅದು ಉತ್ತಮವಾಗುತ್ತದೆ,ಎಲ್ಲಾ ಪ್ರಾದೇಶಿಕ ಪಕ್ಷಗಳು ಒಟ್ಟಾಗಿದ್ದರೆ, ಬಿಜೆಪಿಯನ್ನು ಸೋಲಿಸುವುದು ಅತ್ಯಂತ ಸುಲಭದ ಆಟ”ಎಂದು ಹೇಳಿದ್ದಾರೆ.

ವನ್ಯ ಜೀವಗಳ ಜೀವಂತ ಸಮಾಧಿ. ಮಂಡ್ಯದ ಕೆ.ಆರ್‌ ಪೇಟೆಯಲ್ಲಿ ನಡೆಯುತ್ತಿದೆ ವಿಕೃತ ಕೃತ್ಯ. ವನ್ಯಜೀವಿ ವಲಯದೊಳಗೆ ನುಗ್ಗಿ, ಕಾಡನ್ನು ಸರ್ವನಾಶ ಮಾಡಿದ್ರು ಸಣ್ಣ ನೀರಾವರಿ ಇಲಾಖೆ ಗುತ್ತಿಗೆದಾರರು !

ಸರ್ವ ನಾಶ……ಸಂಪೂರ್ಣ ನಾಶ. ಪ್ರಾಣಿ ಪಕ್ಷಿಗಳಿಂದ ತುಂಬಿದ್ದ ಈ ಅರಣ್ಯವನ್ನು ನಿರ್ದಾಕ್ಷಿಣ್ಯವಾಗಿ ನಾಶ ಮಾಡ್ತಿದ್ದಾರೆ ಸರ್ಕಾರಿ ಕಟುಕರು.
ಈ ನಾಡಿನ ಅಮೂಲ್ಯ ಅರಣ್ಯ ಸಂಪತ್ತನ್ನು ಉಳಿಸಿ ಬೆಳೆಸಬೇಕಾದ ಅಧಿಕಾರಿಗಳೇ ವನ್ಯಜೀವಿ ಅರಣ್ಯ ಪ್ರದೇಶದೊಳಗೆ ನುಗ್ಗಿ ಇಡೀ ಕಾಡನ್ನೇ ಸರ್ವನಾಶ ಮಾಡಿದ್ದಾರೆ.

ಟ್ಟಿಟರ್ CEO ಆಗಿ ಭಾರತೀಯ ಮೂಲದ ಪರಾಗ್ ಅಗರವಾಲ್ ನೇಮಕ

ಭಾರತೀಯ ಮೂಲದ ಅಗರವಾಲ್, ಬಾಂಬೆಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್‌ನಲ್ಲಿ ತಮ್ಮ ಪದವಿಯನ್ನು ಪೂರ್ಣಗೊಳಿಸಿದ್ದಾರೆ ಮತ್ತು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಪಿಎಚ್‌ಡಿ ಪಡೆದಿದ್ದಾರೆ. 2011ರಲ್ಲಿ ಟ್ವಿಟ್ಟರ್ ‌ಗೆ ಸೇರಿದ್ದ ಅವರು 2017ರಿಂದ ಟ್ವಿಟ್ಟರ್‌ನ CTO ಆಗಿದ್ದರು. ಡಾರ್ಸೆ ಅವರ ನಿರ್ಗಮನದ ನಂತರ ಮಂಡಳಿಯ ಸದಸ್ಯರೂ ಆಗಲಿದ್ದಾರೆ.

ಪುಲ್ವಾಮಾದಲ್ಲಿ ಉಗ್ರರ ಸದೆಬಡಿದ ಭಾರತೀಯ ಸೇನೆ

ಈ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿರುವ ಕಾಶ್ಮೀರದ ಪೊಲೀಸ್ ಮಹಾ ನಿರೀಕ್ಷಕ ವಿಜಯ್ ಕುಮಾರ್, “ಪುಲ್ವಾಮಾ ಎನ್‌ಕೌಂಟರ್‌ನಲ್ಲಿ ಜೆಇಎಂ ಉನ್ನತ ಭಯೋತ್ಪಾದಕ ಕಮಾಂಡರ್ ಯಾಸಿರ್ ಪರ್ರೆ, ಐಇಡಿ ತಜ್ಞ ಮತ್ತು ವಿದೇಶಿ ಭಯೋತ್ಪಾದಕ ಫುರ್ಖಾನ್ ಅನ್ನು ಹತ್ಯೆ ಮಾಡಲಾಗಿದೆ. ಇಬ್ಬರೂ ಹಲವಾರು ಭಯೋತ್ಪಾದಕ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದರು” ಎಂದು ಹೇಳಿದ್ದಾರೆ.

ಶಾಸಕ ಎಸ್. ಆರ್. ವಿಶ್ವನಾಥ್ ಅವರ ಹತ್ಯೆಗೆ ಸಂಚು ಹಿನ್ನಲೆ, ಸೂಕ್ತ ತನಿಖೆಗೆ ಆರಗ ಆದೇಶ

ರಾಜ್ಯ ರಾಜಕಾರಣದಲ್ಲೇ ಬೆಚ್ಚಿ ಬೀಳುವಂತಹ ಘಟನೆ ನಡೆದಿದೆ. ಶಾಸಕ ಎಸ್ ಆರ್ ವಿಶ್ವನಾಥ್ ಅವರ ಹತ್ಯೆಗೆ ಸಂಚು ರೂಪಿಸಲಾಗಿತ್ತು ಎಂಬ ವಿಷಯವನ್ನು ಸರಕಾರ ಗಂಭೀರವಾಗಿ ಪರಿಗಣಿಸಿದ್ದು ಈ ಬಗ್ಗೆ, ಸೂಕ್ತ ತನಿಖೆ ನಡೆಸಲಾಗುವುದು ಎಂದು, ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ರೈತರ ಆತ್ಮಹತ್ಯೆ ಪ್ರಕರಣ : ದೇಶದಲ್ಲಿ ಕರ್ನಾಟಕಕ್ಕೆ ಎರಡನೇ ಸ್ಥಾನ

ಮೊದಲನೇ ಸ್ಥಾನದಲ್ಲಿರುವ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಅಂದರೆ 2567 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಎರಡನೇ‌ ಸ್ಥಾನದಲ್ಲಿರುವ ಕರ್ನಾಟಕದಲ್ಲಿ 1072, ಆಂಧ್ರಪ್ರದೇಶದಲ್ಲಿ 564, ತೆಲಂಗಾಣದಲ್ಲಿ 466 ಹಾಗೂ ಮಧ್ಯಪ್ರದೇಶದಲ್ಲಿ 235 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಮಾಹಿತಿ‌ ನೀಡಿದ್ದಾರೆ.
ರಸಗೊಬ್ಬರ ಸಮಸ್ಯೆಯಿಂದ ರೈತರು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ವರದಿ ಸ್ವೀಕರಿಸಿಲ್ಲ. ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ಪರಿಹಾರ ನೀಡಲಾಗುತ್ತಿದೆ

ಪರಪ್ಪನ ಅಗ್ರಹಾರದ ಮೇಲೆ ಸಿಸಿಬಿ ದಾಳಿ, ಅಪಾರ ಪ್ರಮಾಣದ ಗಾಂಜಾ ವಶ

ಜೈಲಿನಲ್ಲಿ ಅಕ್ರಮ ಚಟುವಟಿಕೆಗಳು ಅತಿಯಾಗಿ ನಡೆಯುತ್ತಿದೆ ಎಂಬ ಮಾಹಿತಿಯ ಮೇರೆಗೆ ಸಿಸಿಬಿ ಅಧಿಕಾರಿಗಳು ದಾಳಿಯನ್ನು ನಡೆಸಿದ್ದಾರೆ. ಅನೇಕ ಆರೋಪಿಗಳು ಜೈಲಿನಲ್ಲಿ ಇದ್ದುಕೊಂಡೆ ಎಲ್ಲಾ ಅಕ್ರಮ ಚಟುವಟಿಕೆಯನ್ನು ನಡೆಸಲು ಜೈಲನ್ನು ಅಡ್ಡೆಯಾಗಿಸಿಕೊಂಡು ಕೃತ್ಯ ಎಸಗುತ್ತಿದ್ದಾರೆ. ಹಾಗೂ ವೈಭೋಗ ಜೀವನವನ್ನು ನಡೆಸುವ ತಾಣವನ್ನಾಗಿ ಮಾರ್ಪಡಿಸಿಕೊಂಡಿರುವುದು ಖಚಿತವಾಗಿದೆ.

ಸುಧಾರಾಣಿಗೆ ಗೌರವ ಡಾಕ್ಟರೇಟ್

ನಿಮ್ಮೆಲ್ಲರೊಂದಿಗೆ ಸಂತೋಷದ ಸುದ್ದಿಯನ್ನು ಹಂಚಿಕೊಳ್ಳಲು ಬಯಸುತ್ತೇನೆ. ಇಂಡಿಯನ್ ಎಂಪೈರ್ ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಯೂನಿವರ್ಸಲ್ ಡೆವಲಪ್‍ಮೆಂಟ್ ಕೌನ್ಸಿಲ್‍ನಿಂದ ನನಗೆ ಕಲಾ ಕ್ಷೇತ್ರದಲ್ಲಿ ಗೌರವ ಡಾಕ್ಟರೇಟ್ ನೀಡಲಾಗಿದೆ – ಸುಧಾರಾಣಿ, ನಟಿ

ಶಾಸಕ ಎಸ್.ಆರ್ ವಿಶ್ವನಾಥ್ ಹತ್ಯೆಗೆ ಸಂಚು

ಯಲಹಂಕ ಬಿಜೆಪಿ ಶಾಸಕ ಎಸ್.ಆರ್ ವಿಶ್ವನಾಥ್ ಹತ್ಯೆಗೆ ಸಂಚು ಹಾಕಲಾಗಿತ್ತು ಎಂಬ ಆತಂಕಕಾರಿ ವಿಷಯ ಬೆಳಕಿಗೆ ಬಂದಿದ್ದು, ಈ ಸಂಬಂಧ ಸಿಸಿಬಿ ಕುಳ್ಳ ದೇವರಾಜ ಮತ್ತು ಗೋಪಾಲಕೃಷ್ಣ ಎಂಬುವವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

LPG ದರ ಮತ್ತೆ ಏರಿಕೆ

ಈ ಹಿಂದೆ ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ಸಹ ಪೆಟ್ರೋಲಿಯಂ ಕಂಪನಿಗಳು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಹೆಚ್ಚಿಸಿದ್ದವು. 19 ಕೆಜಿಯ ವಾಣಿಜ್ಯ ಗ್ಯಾಸ್ ಸಿಲಿಂಡರ್ ಸೆಪ್ಟೆಂಬರ್ 1 ರಂದು 43 ಮತ್ತು ಅಕ್ಟೋಬರ್ 1 ರಂದು 75 ರೂ.ಯಷ್ಟು ಹೆಚ್ಚಿಸಲಾಗಿತ್ತು. ವಾಣಿಜ್ಯ ಸಿಲಿಂಡರ್‌ನ ದರದಲ್ಲಿ ಮಾತ್ರ ಹೆಚ್ಚಳವಾಗಿದ್ದು, ಗೃಹಬಳಕೆಯ LPG ಸಿಲಿಂಡರ್‌ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂಬುದು ಇಲ್ಲಿ ಸಮಾಧಾನದ ಸಂಗತಿ.