download app

FOLLOW US ON >

Saturday, May 28, 2022
Breaking News
ತೃತೀಯ ರಂಗಕ್ಕೆ ದೇವೇಗೌಡರ ಮಾರ್ಗದರ್ಶನ ; ಕೆಸಿಆರ್ ತಂತ್ರ!ಹಳೇ ಪಠ್ಯಪುಸ್ತಕವನ್ನೇ ಮುಂದುವರೆಸಲು ಕರವೇ ನಾರಾಯಣಗೌಡ ಆಗ್ರಹ!ಹಿಂದಿನ ಸರ್ಕಾರಗಳು ತಂತ್ರಜ್ಞಾನವನ್ನು ಬಡವರ ವಿರೋಧಿ ಎಂದು ಬಿಂಬಿಸಿದ್ದವು : ಮೋದಿ!ಬಿಜೆಪಿಗೆ ಡಿಕೆಶಿ ಅವರಂತ ಕಳ್ಳರ ಅವಶ್ಯಕತೆ ಇಲ್ಲ : ಯತ್ನಾಳ್!ಇಂದಿರಾ ಕ್ಯಾಂಟೀನ್ ನಿರ್ವಹಣೆ ಇಸ್ಕಾನ್‍ಗೆ ವಹಿಸಲು ಚಿಂತನೆ!ಮೋದಿ ಮೂಲಗುರಿ ಪ್ರಾದೇಶಿಕ ಪಕ್ಷಗಳ ಮೂಲೋತ್ಪಾಟನೆ : ಹೆಚ್.ಡಿ ಕುಮಾರಸ್ವಾಮಿ!ಚೆನ್ನಪಟ್ಟಣದಲ್ಲಿ ಡಿಕೆಶಿ ವಿರುದ್ದವೇ ಬಂಡಾಯ ಸಾರಿದ ಭಾವ ಶರತ್‍ಚಂದ್ರ!ಸಂವಿಧಾನಕ್ಕೆ ಶಿರಸಾಷ್ಟಾಂಗ ನಮಸ್ಕಾರ, ಇತ್ತ ‘ಆಪರೇಷನ್ ಕಮಲ’ : ಮೋದಿಗೆ ಹೆಚ್.ಡಿ.ಕೆ ಟಾಂಗ್!ಆರ್‍ಎಸ್‍ಎಸ್‍ನವರು ಮೂಲ ಭಾರತೀಯರಲ್ಲ : ಸಿದ್ದರಾಮಯ್ಯ!ದಾಳಿ ವೇಳೆ ನನ್ನ ಗೌಪ್ಯ ದಾಖಲೆಗಳನ್ನು ವಶಪಡಿಸಿಕೊಂಡಿದೆ ಸಿಬಿಐ : ಕಾರ್ತಿ ಚಿದಂಬರಂ!
English English Kannada Kannada

December 4, 2021

ಕೋವಿಡ್‌ಗೆ ಹೆದರಿ ಪತ್ನಿ ಮತ್ತು ಮಕ್ಕಳನ್ನು ಹತ್ಯೆ ಮಾಡಿದ ವೈದ್ಯ

ಕೊವೀಡ್‌ ಆತಂಕ ಸಮಾಜದಲ್ಲಿ ಎಷ್ಟರ ಮಟ್ಟಿಗೆ ಇದೆ ಎಂದರೆ ಸ್ವತಃ ವೈದ್ಯರೆ ಕೋವಿಡ್‌ಗೆ ಹೆದರಿ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಕೊಂದಿರುವ ಘಟನೆನಡೆದಿದೆ.  ಕೋವಿಡ್-19ನಿಂದ ಖಿನ್ನತೆಗೆ ಒಳಗಾದ ವೈದ್ಯನೊಬ್ಬ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳ ಹತ್ಯೆ ಮಾಡಿ ಪರಾರಿಯಾದ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.

ಗುಜರಾತ್‌ನಲ್ಲಿ ಒಮಿಕ್ರಾನ್‌ ಪ್ರಕರಣ ಪತ್ತೆ

ಕರ್ನಾಟಕದಲ್ಲಿ 2  ಒಮಿಕ್ರಾನ್‌ ಪ್ರಕರಣ ಕಂಡುಬಂದ ಬೆನ್ನಲ್ಲೇ ಇತ್ತ ಗುಜರಾತ್‌ನಲ್ಲಿ ಕೊರೊನಾವೈರಸ್‌ನ (Coronavirus) ಹೊಸ ರೂಪಾಂತರ ಓಮಿಕ್ರಾನ್ (Omicron) ಪತ್ತೆಯಾಗಿದೆ. ಗುಜರಾತ್‌ನ ಜಾಮ್‌ನಗರದಲ್ಲಿ ಒಮಿಕ್ರಾನ್‌ನ ಮೊದಲ ಪ್ರಕರಣ ಬೆಳಕಿಗೆ ಬಂದಿದೆ. ದಕ್ಷಿಣ ಆಫ್ರಿಕಾದಿಂದ ಬಂದ ವ್ಯಕ್ತಿಯೊಬ್ಬರು  ಓಮಿಕ್ರಾನ್ ಸೋಂಕಿಗೆ ಒಳಗಾಗಿದ್ದಾರೆ.

ಜಿಮ್‌ನಲ್ಲಿ ಹೃದಯಾಘಾತ ಸಾವಿನ ದವಡೆಯಿಂದ ಪಾರಾದ ಉದ್ಯಮಿ

ಜಿಮ್‌ ಮಾಡುವಾಗ ಉದ್ಯಮಿಯೊಬ್ಬರಿಗೆ  ಹೃದಯಾಘಾತವಾಗಿದ್ದು ಜಿಮ್ ಟ್ರೇನರ್‌ ಅವರ ಸಮಯ ಪ್ರಜ್ಞೆಯಿಂದಾಗಿ ಉದ್ಯಮಿ ಸಾವಿನ ದವಡೆಯಿಂದ ಪಾರಾಗಿದ್ದಾರೆ.  ಜಿಮ್‌ನಲ್ಲಿ ಕಸರತ್ತು ಮಾಡುತ್ತಿದ್ದ ಉದ್ಯಮಿ ಗುರುದತ್‌ (49) ಎಂಬುವವರಿಗೆ ಹೃದಯಾಘಾತವಾಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಪಾಕಶಾಸ್ತ್ರ : ಸುಲಭವಾಗಿ ತಯಾರಿಸಬಹುದಾದ ಬೆಲ್ಲದ ಬರ್ಫಿ

ಬರ್ಫಿ ಅಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ ಅತೀ ಕಡಿಮೆ ಸಮಯದಲ್ಲಿ ಹಾಗೂ ಕಡಿಮೆ ಖರ್ಚಿನಲ್ಲಿ ತಯಾರಿಸಬಹುದಾದ ಅದ್ಬುತ ಸಿಹಿ ತಿಂಡಿಯನ್ನು ಹೇಗೆ ಮಾಡುವುದು ಎಂದು ನೀವೂ ತಿಳಿದುಕೊಳ್ಳಬೇಕಾ ಹಾಗಾದ್ರೆ ನೋಡಿ

ಕಳಚಿದ ಕನ್ನಡ ಚಿತ್ರರಂಗದ ಮತ್ತೊಂದು ಕೊಂಡಿ : ಚಿತ್ರನಟ ಶಿವರಾಂ ವಿಧಿವಶ

 1958 ರಿಂದ 1965 ರ ವರೆಗೆ ಸಹಾಯಕ ನಿರ್ದೇಶಕರಾಗಿ (Director) ದುಡಿದ ನಂತರ, ಅವರಿಗೆ ಕಲ್ಯಾಣ್ ಕುಮಾರ್ ನಟಿಸಿದ ಕು. ರಾ. ಸೀತಾರಾಮ ಶಾಸ್ತ್ರಿ ಅವರ ಬೆರೆತ ಜೀವ ಚಿತ್ರದಲ್ಲಿ ಪೋಷಕ ಪಾತ್ರದ ಮೂಲಕ ನಟನೆಗೆ (Acting) ಬ್ರೆ ಕ್ ಸಿಕ್ಕಿತು. ಆಗಿನಿಂದ ಅವರು 2000 ದ ದಶಕದವರೆಗೆ ಅನೇಕ ನಿರ್ದೇಶಕರ ನಿರ್ದೇಶನದಲ್ಲಿ ನಟಿಸಿದರು. ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದ ಶರಪಂಜರ , ನಾಗರಹಾವು , ಶುಭಮಂಗಳ ಚಿತ್ರಗಳಲ್ಲಿಯೂ ನಟಿಸಿದ್ದಾರೆ. 

ಒಂದೇ ಇನ್ನಿಂಗ್ಸ್‌ನಲ್ಲಿ 10 ವಿಕೆಟ್ ಕಿತ್ತ ಅಜಾಜ್‌ ಪಟೇಲ್

ಈ ಮೂಲಕ, ಒಂದು ಇನ್ನಿಂಗ್ಸ್‌ನಲ್ಲಿ ಹತ್ತು ವಿಕೆಟ್‌ ಪಡೆದ ಇಂಗ್ಲೆಂಡಿನ ಜಿಮ್‌ ಲೇಕರ್‌(1956), ಭಾರತದ ಮಾಜಿ ಸ್ಪಿನ್‌ ದಂತಕತೆ ಕರ್ನಾಟಕದ ಅನಿಲ್‌ ಕುಂಬ್ಳೆ (1999) ಸಾಲಿಗೆ ಏಜಾಜ್‌ ಪಟೇಲ್ ಸೇರ್ಪಡೆಯಾದರು. ಕುಂಬ್ಳೆ ಪಾಕಿಸ್ತಾನದ ವಿರುದ್ದ ಈ ಸಾಧನೆ ಮಾಡಿದ್ದರು.

ಸಿ. ಆರ್‌. ಮನೋಹರ್‌ ಜೆಡಿಎಸ್‌ಗೆ ರಾಜೀನಾಮೆ

ಸೋಮವಾರ ರಾತ್ರಿ ವಿಧಾನಪರಿಷತ್‌ನ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಮನೋಹರ್ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ವೈಯಕ್ತಿಕ ಕಾರಣ ಮತ್ತು ಸ್ವ ಇಚ್ಛೆಯಿಂದ ರಾಜೀನಾಮೆ ನೀಡಿರುವುದಾಗಿ ಮನೋಹರ್ ಹೇಳಿದ್ದಾರೆ. ರಾಜೀನಾಮೆ ಪತ್ರವನ್ನು ಅಂಗೀಕರಿಸಿರುವ ಸಭಾಪತಿಗಳು ಮುಂದಿನ ಕ್ರಮಕ್ಕಾಗಿ ಕಾರ್ಯದರ್ಶಿಗೆ ಕಳುಹಿಸಿರುವುದಾಗಿ ತಿಳಿಸಿದ್ದಾರೆ.

ಅಂಬೇಡ್ಕರ್‌ ಪ್ರತಿಮೆಗೆ ಪೊಲೀಸರಿಂದ ತಡೆ ಹಿನ್ನಲೆ ಕತ್ತು ಕೊಯ್ದುಕೊಂಡ ಯುವಕ

ಶುಕ್ರವಾರ ತಡರಾತ್ರಿ ಕೆಲ ಯುವಕರು ಅನುಮತಿ ಇಲ್ಲದೆ ಮಾತೃ ಮಂಡಳಿ ವೃತ್ತದಲ್ಲಿ ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಮಾಡಲು ಮುಂದಾಗಿದ್ದರು. ಯಾವುದೇ ಅನುಮತಿ ಇಲ್ಲದ ಕಾರಣ ಪೊಲೀಸರು ಯುವಕರನ್ನು ತಡೆದಿದ್ದಾರೆ. ಪಾಲಿಕೆ ಸಿಬ್ಬಂದಿ ಪ್ರತಿಮೆಯನ್ನು ವಶಕ್ಕೆ ಪಡೆದಿದ್ದಾರೆ.

ಕರ್ನಾಟಕದ ಮಾಜಿ ರಾಜ್ಯಪಾಲ ಕೆ. ರೋಸಯ್ಯ ನಿಧನ

ರೋಸಯ್ಯ ಅವರು ಕಾಂಗ್ರೆಸ್ ನ ಅತ್ಯಂತ ಹಿರಿಯ ನಾಯಕರಲ್ಲಿ ಒಬ್ಬರಾಗಿದ್ದರು. ಕೆ. ವಿಜಯ ಭಾಸ್ಕರ್ ರೆಡ್ಡಿ ಸೇರಿದಂತೆ ಹಲವಾರು ಮುಖ್ಯಮಂತ್ರಿಗಳ ಸಂಪುಟಗಳಲ್ಲಿ ಸೇವೆ ಸಲ್ಲಿಸಿದ್ದರು. ಕೆಲವು ದಿನಗಳಿಂದ ವಯೋಸಹಜ ಅನಾರೋಗ್ಯಕ್ಕೆ ತುತ್ತಾಗಿದ್ದ ರೋಸಯ್ಯ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಕರ್ನಾಟಕದ ಹಂಗಾಮಿ ರಾಜ್ಯಪಾಲರಾಗಿ ಮಾತ್ರವಲ್ಲದೇ ತಮಿಳುನಾಡಿನಲ್ಲಿ 5 ವರ್ಷಗಳ ಕಾಲ ರಾಜ್ಯಪಾಲರಾಗಿ ರೋಸಯ್ಯ ಕಾರ್ಯ ನಿರ್ವಹಿಸಿದ್ದರು.ಹಲವು ದಶಕಗಳ ಕಾಲ ಕಾಂಗ್ರೆಸ್‌ನಲ್ಲಿದ್ದ ಅವರು ಹಲವು ಹುದ್ದೆಗಳನ್ನು ಅವರು ಅಲಂಕರಿಸಿದ್ದರು

ದೆಹಲಿಯಲ್ಲಿ ಸ್ಕ್ರಾಪ್ ಪದ್ದತಿ ಜಾರಿಗೆ

15 ವರ್ಷಕ್ಕಿಂತ ಹಳೆಯದಾದ ಕಾರುಗಳನ್ನು (Old vehicle) ರಸ್ತೆಗಳಲ್ಲಿಯೂ ನಿಲ್ಲಿಸುವಂತಿಲ್ಲ. ಒಂದು ವೇಳೆ ಇಂಥಹ ವಾಹನವನ್ನು ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ್ದರೂ, ಕಾರು ಮಾಲೀಕರಿಗೆ ದಂಡ ವಿಧಿಸಲಾಗುತ್ತದೆ. ರಾಜ್ಯದಿಂದ ಅಧಿಕಾರ ಪಡೆದ ಸ್ಕ್ರಾಪರ್ ಮೂಲಕ ಈ ವಾಹನದ ಮಾರುಕಟ್ಟೆ ಮೌಲ್ಯವನ್ನು ಲೆಕ್ಕಹಾಕಿ, ಅದರ ಮೊತ್ತವನ್ನು ಮಾಲೀಕರಿಗೆ ನೀಡಲಾಗುತ್ತದೆ.  ಸ್ಕ್ರಾಪರ್ ಮತ್ತು ವಾಹನ ಮಾಲೀಕರ ನಡುವೆ ಏನಾದರೂ ವಿವಾದಗಳಿದ್ದರೆ, ಅದನ್ನು ಸ್ಥಳೀಯ ಪೊಲೀಸರು ಬಗೆಹರಿಸುತ್ತಾರೆ. ಡಿಸೆಂಬರ್ 3 ರಿಂದ ದೆಹಲಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಪ್ರವೇಶವನ್ನು ರಾಜ್ಯ ಸರ್ಕಾರ ನಿಷೇಧಿಸಿಸ್ಸು, ಈ ನಿರ್ಧಾರವು ಮುನ್ನೆಲೆಗೆ ಬಂದಿದೆ.

error: Content is protected !!

Submit Your Article