Visit Channel

December 11, 2021

ಖ್ಯಾತ ನಿರ್ದೇಶಕ ಹಿಂದೂ ಧರ್ಮಕ್ಕೆ ಮತಾಂತರ ಆಗಲು ನಿರ್ಧಾರ

ಅಲಿ ಅಕ್ಟರ್‌ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು ಮುಸ್ಲಿಂ ಸಮುದಾಯದವರಿಂದ ವಿರೋಧ ವ್ಯಕ್ತವಾಗಿದೆ. ಹಲವಾರು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲಿ ಅಕ್ಚರ್ 90ರ ದಶಕದಿಂದ ಮಲಯಾಳಂ ಚಿತ್ರರಂಗದಲ್ಲಿದ್ದು, ಖ್ಯಾತ ನಿರ್ದೇಶಕರಾಗಿ ಗುರುತಿಸಲ್ಪಟ್ಟಿದ್ದಾರೆ. 12ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿ, ರಾಜ್ಯ, ರಾಷ್ಟ್ರ ಮಟ್ಟದ ಪ್ರಶಸ್ತಿಗಳನ್ನು ಗಳಿಸಿದ್ದಾರೆ.

ಗೋಹತ್ಯೆ ಮತಾಂತರ ಎರಡನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ – ಕೆ.ಎಸ್. ಈಶ್ವರಪ್ಪ

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತಾಂತರ ನಿಷೇಧ ಹಾಗೂ ಗೋ ಹತ್ಯೆ ನಿಷೇಧ ಎರಡನ್ನು ಬಹಳ ಗಂಭೀರವಾಗಿ ಬಿಜೆಪಿ ತೆಗೆದುಕೊಂಡಿದೆ. ಹಿಂದೂ ಸಮಾಜವನ್ನು ರಕ್ಷಣೆ ಮಾಡಬೇಕಿರುವುದು ಸರ್ಕಾರದ ಕರ್ತವ್ಯವಾಗಿದೆ. ಈ ಸಂಬಂಧ ಅಗತ್ಯ ಇರುವ ಕಾನೂನುನ್ನು ಜಾರಿಗೆ ತರುತ್ತೇವೆ.

4.28 ಕೋಟಿ ಪಡಿತರ ಚೀಟಿ ರದ್ದುಪಡಿಸಿದ ಕೇಂದ್ರ ಸರ್ಕಾರ

“ಪಡಿತರ ಕಾರ್ಡ್‌ಗಳ ಸೇರ್ಪಡೆ ಮತ್ತು ಅಳಿಸುವಿಕೆಯು ನಿರಂತರ ಪ್ರಕ್ರಿಯೆಯಾಗಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತಮ್ಮ ಪಡಿತರ ಚೀಟಿಗಳ ಫಲಾನುಭವಿಗಳ ಪಟ್ಟಿಯನ್ನು ನಿಯಮಿತವಾಗಿ ಪರಿಶೀಲಿಸುತ್ತವೆ ಮತ್ತು ಸರಿಯಾದ ಪರಿಶೀಲನೆಯ ನಂತರ ಸಂಭಾವ್ಯ ಅನರ್ಹ,  ನಕಲಿ ಪಡಿತರ ಚೀಟಿಗಳನ್ನು ಗುರುತಿಸಲಾಗುತ್ತದೆ ಮತ್ತು ರದ್ದುಪಡಿಸಲಾಗುತ್ತದೆ.  ನಿಜವಾದ ಅರ್ಹತೆ ಮತ್ತು ಬಿಟ್ಟುಹೋದ ಮನೆಗಳು ಮತ್ತು ಫಲಾನುಭವಿಗಳನ್ನು ಸೇರಿಸುವ ಕಾರ್ಯವೂ ನಡೆಯುತ್ತದೆ” ಎಂದು ಸಚಿವರು ಹೇಳಿದ್ದಾರೆ.

ಕರ್ನಾಟಕದಲ್ಲಿ ಒಟ್ಟು 15,000 ಶಿಕ್ಷಕರ ಭರ್ತಿಗೆ ಸರ್ಕಾರ ನಿರ್ಧಾರ

2021-22ರ ಶೈಕ್ಷಣಿಕ ವರ್ಷದಲ್ಲಿ ಒಟ್ಟು 15,000 ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಮ್ಮ ಟ್ವಿಟರ್ ಪೋಸ್ಟ್ ಮೂಲಕ ತಿಳಿಸಿದ್ದಾರೆ. ಅವರು ಮಾಡಿರುವ ಟ್ವೀಟ್ ಪ್ರಕಾರ, ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ ಉಳಿಕೆ ಮೂಲ ವೃಂದದ ಪದವೀಧರ ಪ್ರಾಥಮಿಕ ಶಾಲಾ (6 ರಿಂದ 8 ) ಶಿಕ್ಷಕರ 10 ಸಾವಿರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುವುದು.

ಮತಾಂತರ ನಿಷೇಧ ಕಾಯ್ದೆಗೆ ಕಾಂಗ್ರೆಸ್‌ ತೀವ್ರ ವಿರೋಧ

ಒಂದು ಸಮುದಾಯವನ್ನು ಗುರಿಯಾಗಿಟ್ಟುಕೊಂಡು ದ್ವೇಷದ ರಾಜಕಾರಣ ಮಾಡುತ್ತಿದೆ. ಯಾವುದೇ ಸಮುದಾಯದ ಭಾವನೆಗಳಿಗೆ ಧಕ್ಕೆ ತರುವುದು ಸರಿಯಲ್ಲ, ಬಿಜೆಪಿ ಸರ್ಕಾರರ ಇಂತಹ ದುಸ್ಸಾಹಸಕ್ಕೆ ಮುಂದಾಗಬಾರದು.

Zoom ಮೀಟಿಂಗ್‌ನಲ್ಲೇ 900 ಉದ್ಯೋಗಿಗಳನ್ನು ವಜಾಗೊಳಿಸಿದ better.com

ಇದು ನೀವು ಕೇಳಲು ಬಯಸುವ ಸುದ್ದಿಯಲ್ಲ. ನೀವು ಈ ಕರೆಯಲ್ಲಿದ್ದರೆ, ನೀವು ವಜಾಗೊಳಿಸುತ್ತಿರುವ ದುರಾದೃಷ್ಟಕರ ಗುಂಪಿನ ಭಾಗವಾಗಿದ್ದೀರಿ, ನಿಮ್ಮ ಉದ್ಯೋಗವನ್ನು ತಕ್ಷಣವೇ ಕೊನೆಗೊಳಿಸಲಾಗುತ್ತಿದೆ ಎಂದು ವಿಶಾಲ್ ಗಾರ್ಗ್ ಝೂಮ್ ಕರೆಯ ಮುಖೇನ ಕಂಪನಿಯ ಉದ್ಯೋಗಿಗಳಿಗೆ ಹೇಳಿದ್ದಾರೆ.

ಜಾತ್ಯತೀತ ಶಕ್ತಿಗಳನ್ನು ಮುಗಿಸುವುದೇ ಕಾಂಗ್ರೆಸ್‌ ಉದ್ದೇಶ – ಹೆಚ್‌ಡಿಕೆ

ದೇವೇಗೌಡರು ಪ್ರಧಾನಿ ಆಗಿದ್ದು ಕಾಂಗ್ರೆಸ್ ನಿಂದ ಎನ್ನುತ್ತಾರೆ. ಆದರೆ  ದೇವೇಗೌಡರು ಪ್ರಧಾನಿ ಮಾಡಿ ಎಂದು ಅರ್ಜಿ‌ ಇಟ್ಟುಕೊಂಡು ಹೋಗಿದ್ರಾ. ನಾನು ಮುಖ್ಯಮಂತ್ರಿ ಆದಾಗ ಕಾಂಗ್ರೆಸ್ ಮುಂದೆ ಅರ್ಜಿ ಇಟ್ಟುಕೊಂಡು ಹೋಗಿದನ್ನಾ. ನಮ್ಮನ್ನ ಬೆಂಬಲ ಕೊಟ್ಟಾಗೆ ಮಾಡಿ ಕುತ್ತಿಗೆ ಕುಯ್ಯುವುದೇ ಇವರ ಕೆಲಸ ಎಂದು ಹೆಚ್.ಡಿಕೆ ಆಕ್ರೋಶ ವ್ಯೆಕ್ತಪಡಿಸಿದರು.

ಕೃಷಿ ಕಾಯ್ದೆ ಹೋರಾಟಕ್ಕೆ ರೈತರು ಬಲಿಯಾಗಿಲ್ಲ – ನರೇಂದ್ರ ಸಿಂಗ್ ತೋಮರ್

ಕೇಂದ್ರ ಸರ್ಕಾರವು ಜಾರಿಗೊಳಿಸಿದ್ದ 3 ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕಳೆದೊಂದು ವರ್ಷದಿಂದ ರೈತರು ಪ್ರತಿಭಟನೆ ನಡೆಸಿದ್ದರು. ‘ಅನ್ನದಾತ’ರ ಪ್ರತಿಭಟನೆಗೆ ಕೊನೆಗೂ ಮಣಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು 3 ಕೃಷಿ ಕಾಯ್ದೆಗಳನ್ನು ವಾಪಸ್ ತೆಗೆದುಕೊಳ್ಳುವುದಾಗಿ ಘೋಷಿಸಿತ್ತು. ಕೃಷಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಸುಮಾರು 700ಕ್ಕೂ ಹೆಚ್ಚು ರೈತರು ಸಾವನ್ನಪ್ಪಿದ್ದಾರೆ ಎಂದು ರೈತ ಮುಖಂಡರು ತಿಳಿಸಿದ್ದರು.