
ವಾಹನ ಖರೀದಿದಾರರೇ ಎಚ್ಚರ! ವಾಹನ ಶೋರೂಂಗಳಿಂದ ಹಗಲು ದರೋಡೆ. ಆರ್‌ಟಿ ಓ ಹೆಸರಲ್ಲಿ ಶೋ ರೂಂಗಳಿಂದ ಹೆಚ್ಚುವರಿ ಹಣ ಲೂಟಿ. ಇದಕ್ಕೆ ಆರ್‌ಟಿಓ ಅಧಿಕಾರಿಗಳೇ ಕೊಡ್ತಿದ್ದಾರಾ ಸಾಥ್?
ನೋಡಿದ್ರಾ ಸ್ನೇಹಿತ್ರೆ, ಹೇಗೆ ಇವರು ಲಂಚವನ್ನ ಅಧಿಕೃತವಾಗಿ ಬಿಲ್ ಮುಖಾಂತರವೇ ಸಂಗ್ರಹಿಸ್ತಿದ್ದಾರೆ ನೋಡಿ. ಈ ರೀತಿ ಪ್ರತಿ ಗ್ರಾಹಕನಿಂದ ಹೆಚ್ಚುವರಿ ಹಣ ಸಂಗ್ರಹಿಸಿ ಕೋಟ್ಯಾಂತರ ರೂಪಾಯಿ ಲೂಟಿ ಹೊಡೀತ್ತಿದ್ದಾರೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರಿಂದ ಹಿಡಿದು ಸಾರಿಗೆ ಸಚಿವರು, ಸಾರಿಗೆ ಅಧಿಕಾರಿಗಳಿಗೆ ಪ್ರತಿಯೊಬ್ಬರಿರೂ ದೂರು ನೀಡಲಾಗಿದೆ. ಆದ್ರೆ ಯಾರೂ ಇದನ್ನು ಸರಿಪಡಿಸುವ ಗೋಜಿಗೇ ಹೋಗ್ತಿಲ್ಲ.