2022ರ ಕೇಂದ್ರ ಬಜೆಟ್ ಮಂಡನೆ ಯಶಸ್ವಿಯಾಗಿ ನಡೆದಿದ್ದು, ಕೇವಲ 90 ನಿಮಿಷಗಳಲ್ಲೇ ಈ ಬಾರಿಯ ಬಜೆಟ್ ಮುಗಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್. ಈ ಬಾರಿಯ ಬಜೆಟ್ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರದ ಹತ್ತನೇ ಬಜೆಟ್ ಇದಾಗಿದ್ದು, ದೇಶದಲ್ಲಿ ಕೊರೊನಾ ಪ್ರಭಾವವಿದ್ದ ಕಾರಣ ಬಜೆಟ್ ನಲ್ಲಿ ಸಾಕಷ್ಟು ಹೊಸ ಬದಲಾವಣೆ ಕಂಡುಬಂದಿವೆ. ಈ ಬಾರಿಯೂ ಡಿಜಿಟಲ್ ವೇಗದಲ್ಲಿ ರೂಪುಗೊಂಡ ಬಜೆಟ್ ಹೇಗಿತ್ತು, ಏನೆಲ್ಲಾ ಲಾಭಂಶಗಳು ಜನಸಾಮಾನ್ಯರಿಗೆ ದೊರೆಯಿತು, ನಷ್ಟಗಳು ಎದುರಾಯಿತು ಎಂಬುದನ್ನು ಕೆಳೆಗೆ ತಿಳಿಸಲಾಗಿದೆ.
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಲೋಕಸಭೆಯಲ್ಲಿ ಬಜೆಟ್ ಮಂಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಹತ್ತನೇ ಬಜೆಟ್ ಮಂಡನೆಯಾಗಿದ್ದು, ಕೇವಲ ತೊಂಬತ್ತು ನಿಮಿಷಗಳ ಅವಧಿಯಲ್ಲೇ ಬಜೆಟ್ ಮಂಡಿಸಿದ್ದಾರೆ ನಿರ್ಮಲಾ ಸೀತಾರಾಮನ್. ಈ ಬಾರಿಯ ಬಜೆಟ್ ಮಂಡನೆಯಲ್ಲಿ ಸಾಕಷ್ಟು ಬದಲಾವಣೆಗೊಂಡಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಎಲ್ಲರನ್ನು ಉದ್ದೇಶಿಸಿ ರಾಜಕೀಯ ಪಕ್ಷಗಳು ಎಲ್ಲ ಸಂಸದರು ಮುಕ್ತ ಮನಸ್ಸಿನಿಂದ ಚರ್ಚೆಯಲ್ಲಿ ಪಾಲ್ಗೊಳ್ಳಿ ನಿಮ್ಮ ನಿರ್ಧಾರಗಳನ್ನು ಅರ್ಥಪೂರ್ಣವಾಗಿ ಮುಂದಿಡಿ ಎಂದು ಸ್ಪಷ್ಟಪಡಿಸಿದರು. ಭಾರತ ವನ್ನು ಅಭಿವೃದ್ಧಿ ಹಾದಿಯಲ್ಲಿ ಮತ್ತಷ್ಟು ಮುನ್ನೆಡೆಸಲು ಪೂರಕವಾಗಿರಲಿ ಎಂದು ಒತ್ತಿ ಹೇಳಿದರು. ಈ ಬಾರಿಯ ಬಜೆಟ್ ನಲ್ಲಿ ಜನಸಾಮಾನ್ಯರಿಗೆ ಸಿಕ್ಕ ಲಾಭಗಳೇನು ನಷ್ಟಗಳೇನು ಎಲ್ಲ ವಿವರ ಇಲ್ಲಿದೆ ಮುಂದೆ ಓದಿ.

೧. ರೈತರ ಕೃಷಿ ಉತ್ಪನ್ನಗಳ ಕನಿಷ್ಠ ಬೆಂಬಲ ಬೆಲೆ ಇಳಿಕೆಯಾಗಿದೆ.
೨. ವಜ್ರದ ಮೇಲೆ ಅಬಕಾರಿ ಶುಲ್ಕ ಇಳಿಕೆ.
೩. ಆದಾಯ ತೆರಿಗೆಯಲ್ಲಿ ಹೊಸ ಪದ್ದತಿ ಹಳೇ ಪದ್ದತಿ ಲೆಕ್ಕಾಚಾರ.
೪. ಆದಾಯ ತೆರಿಗೆ ಪದ್ಧತಿಯಲ್ಲಿ ಯಾವುದೇ ಬದಲಾವಣೆಯಿಲ್ಲ.
೫. ಈ ಬಾರಿಯ ಬಜೆಟ್ ನಲ್ಲಿ ತೆರಿಗೆದಾರರಿಗೆ ನಿರಾಸೆ.
೬. ಕೇಂದ್ರ ಸರ್ಕಾರಿ ನೌಕರರಿಗೆ ಪಿಂಚಣಿ ಯೋಜನೆಯಲ್ಲಿ ಕಹಿ.
೭. ಎಲೆಕ್ಟ್ರಾನಿಕ್ ಉಪಕರಣಗಳ ಬೆಲೆ ಇಳಿಕೆ.
೮. ಮೊಬೈಲ್, ಮೊಬೈಲ್ ಚಾರ್ಜರ್ ಗಳ ಬೆಲೆಯಲ್ಲಿ ಕಡಿತ.
೯. ಬಟ್ಟೆ ಚರ್ಮದ ಉತ್ಪನ್ನಗಳ ಬೆಲೆಯಲ್ಲಿ ಇಳಿಕೆ.
೧೦. ವ್ಯವಹಾರಿಕ ವೆಚ್ಚಕ್ಕೆ ಶಿಕ್ಷಣ ಆರೋಗ್ಯ ಸೆಸ್ ನಿಂದ ವಿನಾಯಿತಿ ದೊರೆತಿದೆ.

೧೧. ಕ್ರಿಪ್ಟೊ ಕರೆನ್ಸಿ ಮೇಲೆ ತೆರಿಗೆ ಶಾಕ್.
೧೨. ಸ್ಟಾರ್ಟಪ್ ಕಂಪನಿಗಳಿಗೆ ಇನ್ನೂ ಒಂದು ವರ್ಷ ತೆರಿಗೆ ವಿನಾಯಿತಿ.
೧೩. ವಿಶೇಷಚೇತನರಿಗೆ ವಿಮೆ ಪಡೆಯುವುದಕ್ಕೆ ಸೂಕ್ತ ಅವಕಾಶ.
೧೪. ಬಂಡವಾಳ ಹೂಡಲು ರಾಜ್ಯಗಳಿಗೆ 1ಲಕ್ಷ ಕೋಟಿ ಅನುದಾನ.
೧೫. ಡಿಜಿಟಲ್ ಕರೆನ್ಸಿ ವಿತರಣೆ ಕೇಂದ್ರ ಸರ್ಕಾರ ತೀರ್ಮಾನ.
16. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ವರ್ಗದ ರೈತರಿಗೆ ಸಹಕಾರ. 17.ಇಂಧನ ಉಳಿತಾಯ ಯೋಜನೆಗಳಿಗೆ ಉತ್ತೇಜಿಸಲು ನೂತನ ಸ್ಕೀಮ್. 18.ಸೋಲಾರ್ ವಿದ್ಯುತ್ ಕ್ಷೇತ್ರಕ್ಕೆ ಈ ಬಾರಿ ಬಜೆಟ್ ನಲ್ಲಿ ಆದ್ಯತೆ. 19.ದೇಶೀಯ ಕೈಗಾರಿಕೆಗಳಿಗೆ ಮತ್ತಷ್ಟು ಅವಕಾಶ. 2025ರೊಳಗೆ ಎಲ್ಲಾ ಹಳಿಯಲ್ಲಿ ಓಎಫ್ ಸಿ ಕೇಬಲ್ ಅಳವಡಿಕೆ.ಈ ವರ್ಷದಲ್ಲೇ ದೇಶದಲ್ಲಿ 5ಜಿ ಸೇವೆ ಆರಂಭವಾಗಲಿದೆ.