vijaya times advertisements
Visit Channel

January 6, 2022

ಪಂಜಾಬ್‌ನಲ್ಲಿ ನೈಟ್ ಕರ್ಫ್ಯೂ ಜಾರಿ: ಶಾಲಾ ಕಾಲೇಜು ಬಂದ್.

ಕೆಲವು ದಿನಗಳಿಂದ ಪಂಜಾಬ್ನಲ್ಲಿ ಸೋಂಕಿತರ ಸಂಖ್ಯೆಯು ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಸರ್ಕಾರಿ ಮತ್ತು ಖಾಸಗಿ ಕಚೇರಿಗಳು, ಕಾರ್ಖಾನೆಗಳು ಇತರೆ ಯಾವುದೇ ಕೈಗಾರಿಕೆಗಳಿಗೆ ಹಾಜರಾಗಲು ಎರಡು  ಡೋಸ್‌ ಲಸಿಕೆ ಹಾಕಿಸಿಕೊಂಡಿರಬೇಕು ಇಲ್ಲದಿದರೆ ಪ್ರವೇಶಕ್ಕೆ ಅವಕಾಶವಿರುವುದಿಲ್ಲ.

ಮನೋಹರ್‌ ಪರಿಕ್ಕರ್ ಪುತ್ರನಿಗೆ ಟಿಕೆಟ್‌ ಡೌಟ್

ಉತ್ಪಲ್ ಪರಿಕ್ಕರ್ ರವರು ಪಣಜಿ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ಸಿದ್ಧತೆ ನಡೆಸುತ್ತಿದ್ದು, ಕ್ಷೇತ್ರದಿಂದ ಹಾಲಿ ಶಾಸಕ ಬಾಬೂಶ್ ಮೊನ್ನೆರಾತ್ ರವರಿಗೆ ಬಿಜೆಪಿ ಟಿಕೆಟ್ ನೀಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಬಿಜೆಪಿ ಟಿಕೆಟ್ ಪಡೆಯುವ ಕಸರತ್ತು ಆರಂಭಿಸಿರುವ ಉತ್ಪಲ್ ಪರಿಕ್ಕರ್ ರವರು ಇತ್ತೀಚೆಗೆ ದೆಹಲಿಗೆ ಹೋಗಿ ಬಂದಿದ್ದರು

ಕಮಲಿ ಕಣ್ಣೀರು

ಇದು ಕರುನಾಡಿನ ಮನೆ ಮಾತಾಗಿರುವ ಝೀ ಕನ್ನಡ ಚಾನೆಲ್‌ನಲ್ಲಿ ಪ್ರಸಾರವಾಗುತ್ತಿರುವ ಕಮಲಿ ಧಾರವಾಹಿಯ ನಿರ್ಮಾಪಕನಾಗಿದ್ದ ರೋಹಿತ್‌ ಎಸ್‌ನ ಕಣ್ಣೀರ ಕತೆ. ಸೀರಿಯಲ್ ನಿರ್ದೇಶಕ ಅರವಿಂದ್‌ ಕೌಶಿಕ್‌ ಅವರೇ ಇವರಿಗೆ ಮೋಸ ಮಾಡಿದ್ರು.ರೋಹಿತ್‌ ಇವತ್ತು ಈ ದುಸ್ಥಿತಿಗೆ ಬರಲು ಸೀರಿಯಲ್‌ ಮಾಫಿಯಾವೇ ಕಾರಣ ಅಂತ ನೇರವಾಗಿ ಆರೋಪಿಸುತ್ತಾರೆ.

ನಿಮಗೂ ಅಂದವಾದ ಕೂದಲು ಬೇಕಾ ? ಹಾಗದ್ರೆ ನೀವು ಈ ಟಿಪ್ಸ್ ಅನುಸರಿಸಲೇಬೇಕು

ಮಲಗುವ ಸಮಯದಲ್ಲಿ ಕೂದಲನ್ನು ಕಟ್ಟಿ ಮಲಗುವ ಅಭ್ಯಾಸ ರೂಢಿಸಿಕೊಳ್ಳಿ, ಯಾವಾಗಲೂ ಕೂಡ ನಿದ್ದೆ ಮಾಡುವಾಗ ಕೂದಲನ್ನು ಬಿಟ್ಟು ಮಲಗಬಾರದು ಏಕೆಂದರೆ ಕೂದಲು ಕಟ್ಟದೆ ಮಲಗಿದಲ್ಲಿ ಅದು ಅಧಿಕ ಗಂಟುಗಳಾಗಿ  ಕೂದಲಿನಲ್ಲಿ ಹೆಚ್ಚಾಗಿ ಸಿಕ್ಕುಗಳಾಗಿ ಬಿಡುತ್ತವೆ, ಅದೂ ಅಲ್ಲದೆ ಕೂದಲು ಕೂಡ ಉದುರುವ ಸಾಧ್ಯತೆ ಇರುತ್ತದೆ. 

ನೊವಾಕ್‌ ಜೊಕೊವಿಕ್‌ ಅವರನ್ನು ನಿರ್ಬಂಧಿಸಿದ ಆಸ್ಟ್ರೇಲಿಯಾ

ಆಸ್ಟ್ರೇಲಿಯಾಗೆ ತೆರಳುವ ಮೊದಲು ವ್ಯಾಕ್ಸಿನೇಷನ್ ನಿಯಮಗಳಿಂದ ವಿನಾಯಿತಿ ದೊರೆತಿದೆ ಎಂದಿದ್ದ ನೊವಾಕ್ ಜೊಕೊವಿಕ್ ಅವರು ಬುಧವಾರ ಸಂಜೆ ಮೆಲ್ಬೋರ್ನ್​ನಲ್ಲಿ ಬಂದಿಳಿದ ನಂತರ ಅವರು ಸೂಕ್ತ ಪುರಾವೆ ಒದಗಿಸಲು ವಿಫಲರಾಗಿದ್ದಾರೆ ಎಂಬ ಆರೋಪ ಮೇಲೆ ವೀಸಾವನ್ನು ರದ್ದುಗೊಳಿಸಿ, ಆಸ್ಟ್ರೇಲಿಯಾದೊಳಗೆ ಪ್ರವೇಶ ನಿರ್ಬಂಧಿಸಲಾಗಿದೆ.

ಬೆಂಗಳೂರಿನಲ್ಲಿ 144 ಸೆಕ್ಷನ್‌ ಜಾರಿ

ಜನವರಿ 19ರ ವರೆಗೆ ನೈಟ್ ಕರ್ಪ್ಯೂ ಜೊತೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಇದರ ಪ್ರಕಾರ, ಯಾರು ಸಹ ಗುಂಪು ಸೇರುವಂತಿಲ್ಲ. ರಸ್ತೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸಂಭ್ರಮಾಚರಣೆ ಮಾಡಲು ಅವಕಾಶವಿಲ್ಲ. ಪಾರ್ಕ್, ಮೈದಾನ ಹಾಗೂ ಇತರ ಸಾರ್ವಜನಿಕ ಸ್ಥಳಗಳಲ್ಲಿ ಗುಂಪುಗೂಡುವಂತಿಲ್ಲ

ರಕ್ಷಣೆ ನೀಡದ ಸರ್ಕಾರವನ್ನು ವಜಾಗೊಳಿಸಬೇಕು – ಬೊಮ್ಮಾಯಿ

ಮಂಡ್ಯ ಜಿಲ್ಲೆಯ ಆದಿಚುಂಚನಗಿರಿ ಕ್ಷೇತ್ರದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿ ಈ ವಿಷಯ ತಿಳಿಸಿದರು. ಪಂಜಾಬ್ ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಭದ್ರತಾ ಲೋಪವಾಗಿರುವ ಕುರಿತು ಸುದ್ದಿದಾರರ ಪ್ರಶ್ನೆಗಳಿಗೆ ಉತ್ತರಿಸಿದರು. ಪಂಜಾಬ್ ಗಡಿಯಲ್ಲಿ ಪಂಜಾಬ್ ಸರ್ಕಾರ ಪ್ರಧಾನಮಂತ್ರಿಗಳಿಗೆ ಭದ್ರತೆ ಕೊಡಲು ವಿಫಲವಾಗಿದೆ.

ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಭಾನುಕಾ

ಕೌಟುಂಬಿಕ ಸಮಸ್ಯೆಗಳ ಕಾರಣ 30 ವರ್ಷದ ಅನುಭವಿ ಎಡಗೈ ಬ್ಯಾಟ್ಸ್‌ಮನ್‌ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸುತ್ತಿರುವುದಾಗಿ ತಿಳಿಸಿದ್ದಾರೆ. ಶ್ರೀಲಂಕಾ ತಂಡದ ಪರ ಈವರೆಗೆ 5 ಏಕದಿನ ಕ್ರಿಕೆಟ್‌ ಪಂದ್ಯಗಳನ್ನು ಆಡಿರುವ ಭಾನುಕಾ ರಾಜಪಕ್ಷ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ ನಲ್ಲಿ 18 ಪಂದ್ಯಗಳನ್ನು ಆಡಿ ತಂಡದ ಮಧ್ಯಮ ಕ್ರಮಾಂಕದ ಭರವಸೆಯ ಬ್ಯಾಟ್ಸ್‌ಮನ್‌ ಆಗಿದ್ದರು.