Visit Channel

January 11, 2022

hd revanna

ಕಾಂಗ್ರೆಸ್‌ಗೆ ಜೆಡಿಎಸ್‌ ಕಂಡರೆ ಭಯ – ಹೆಚ್‌.ಡಿ. ರೇವಣ್ಣ

ರಾಜ್ಯದ ನೀರಾವರಿ ಯೋಜನೆಗಳಿಗೆ ಜೆಡಿಎಸ್‌ ಪಕ್ಷ ಎಂದೂ ಅಡ್ಡಿ
ಮಾಡಿಲ್ಲ. ನೀರಾವರಿ ಯೋಜನೆಗಳು ಅನುಷ್ಠಾನವಾಗಬೇಕು ಎಂಬುದು ಜೆಡಿಎಸ್‌ ಪಕ್ಷದ ಕನಸು ಆಗಿದೆ. ಹಾಗಂತ ಕಾಂಗ್ರೆಸ್‌ ಪಕ್ಷದ ಮುಖಂಡರ ಹಿಂದೆ ಹೋಗಬೇಕೇ? ಎಂದು ಪ್ರಶ್ನಿಸಿದರು ದೇವೇಗೌಡರು ಈ ರಾಜ್ಯದಲ್ಲಿ ನೀರಾವರಿ ಯೋಜನೆಗಾಗಿ ಎಷ್ಟು ಹೋರಾಟವನ್ನು ಮಾಡಿದ್ದಾರೆ.

basanagowda

ಪಾವಿತ್ರ್ಯತೆ ಕಳೆದುಕೊಂಡ ಕಾಂಗ್ರೆಸ್ ಪಾದಯಾತ್ರೆ.

ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ ಅವರು ಈ ಪಾದಯಾತ್ರೆ ಕುರಿತು ವ್ಯಂಗ್ಯವಾಗಿ ಮಾತನಾಡಿದ್ದಾರೆ. ಕೊರೊನ ಹೆಚ್ಚುತ್ತಿರುವ ಸಮಯದಲ್ಲಿ ರಾಜಕೀಯ ಬದಿಗೊತ್ತಿ ಪಾದಯಾತ್ರೆ ಬಿಡೋದು ಒಳ್ಳೆಯದು ಎಂದು ಹೇಳಿದ್ದರು.ಅದು ಅಲ್ಲದೇ ರಾತ್ರಿ ಆದ ಮೇಲೆ ತೊರಾಡುತ್ತಾ ನಡೆಯೋದು, ರಸ್ತೆಯ ಆ ದಂಡೆಯಿಂದ ಈ ದಂಡೆಗೆ ಹೋಗೋದು ಪಾದಯಾತ್ರೆಯಲ್ಲ ಅಂತಾ ಕುಟುಕಿದ್ದಾರೆ.

covid

ರಾಜಕಾರಣಿಗಳಿಗೂ ವಕ್ಕರಿಸುತ್ತಿರುವ ಕೊರೊನಾ

ನಿನ್ನೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕೋವಿಡ್-19 ದೃಢಪಟ್ಟಿತ್ತು. ಇಂದು ಅವರ ಸಂಪುಟದ ಮತ್ತೊಬ್ಬ ಹಿರಿಯ ಪ್ರಮುಖ ಸಚಿವ ಜೆ ಸಿ ಮಾಧುಸ್ವಾಮಿಗೆ ಸಹ ಕೊರೋನಾ ಪಾಸಿಟಿವ್ ಬಂದಿದ್ದು ಅವರು ಮತ್ತು ಅವರ ಪುತ್ರಿಗೆ ಪಾಸಿಟಿವ್ ಕಂಡುಬಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಗಾಗಿದ್ದಾರೆ.

vaccine

ರಾಜ್ಯದಲ್ಲಿ 15 ವರ್ಷ ಮೇಲ್ಪಟ್ಟವರ 50% ಲಸಿಕೆ ಪೂರ್ಣ

ಕೊಡಗು ಅತಿ ಹೆಚ್ಚು ಲಸಿಕೆ ಅಂದರೆ 70% ಮಕ್ಕಳಿಗೆ ಲಸಿಕೆಯನ್ನು ನೀಡಿದೆ. ರಾಜ್ಯದ ಹದಿನೆಂಟು ಜಿಲ್ಲೆಗಳು  50% ಕ್ಕಿಂತ ಹೆಚ್ಚು ಲಸಿಕೆ ವ್ಯಾಪ್ತಿಯನ್ನು ಹೊಂದಿವೆ. ಬೆಂಗಳೂರು 153,458 ಮಕ್ಕಳಿಗೆ ಅಥವಾ  ಒಟ್ಟು 35% ಮಂದಿಗೆ ಲಸಿಕೆ ನೀಡಿದೆ. ಯಾದಗಿರಿ ಕಡಿಮೆ ಅಂದರೆ 29% ಮಂದಿಗೆ ಲಸಿಕೆ ನೀಡಿದೆ. ಸರ್ಕಾರದ ಅಂಕಿಅಂಶಗಳ ಪ್ರಕಾರ  ರಾಜ್ಯದಾದ್ಯಂತ 15-17 ವಯೋಮಾನದ 3,175,010 ಜನರಿದ್ದಾರೆ.

chetan

ಇದು ಪಾದಯಾತ್ರೆ ಅಲ್ಲ ಕಾರು ಯಾತ್ರೆ : ನಟ ಚೇತನ್‌ ವ್ಯಂಗ್ಯ

ಜನವರಿ 14 2022 ರಂದು ಪರಿಸರ ಹೋರಾಟಗಾರ್ತಿ ಎಂದು ಹೆಸರುವಾಸಿಯಾದ ಮೇಧಾ ಪಾಟ್ಕರ್ ಅವರ ಸಮ್ಮುಖದಲ್ಲಿ ಮೇಕೆದಾಟು ಯೋಜನೆಯ ವಿರುದ್ಧ ಪ್ರತಿಭಟನೆ ಮಾಡುತ್ತೇವೆ.   ಈ ಸಂದರ್ಭದಲ್ಲಿ ನಾವು ಈ ಯೋಜನೆಯನ್ನು ನಿಲ್ಲಿಸಬೇಕು ಎಂದು ರಾಜ್ಯಸರ್ಕಾರಕ್ಕೆ ಒತ್ತಡವನ್ನು ಹೇರುತ್ತವೆ ಎಂದು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಭೀಕರ ಅಪಘಾತ : 6 ಮಂದಿ ಸಾವು

ಜ 10ರ ಸಂಜೆ 6:30 ರ ವೇಳೆಗೆ ಮೈಸೂರ್ ರೋಡಿನಿಂದ ಬೆಂಗಳೂರಿಗೆ ಬರುತ್ತಿದ್ದ ಜಲ್ಲಿ ತುಂಬಿದ ಲಾರಿವೊಂದು, ಕುಂಬಳಗೋಡು ಕಡಿಮಿಡಿಕೆ ಬಳಿ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಆಯತಪ್ಪಿ ಪಕ್ಕದ ಸರ್ವಿಸ್ ರಸ್ತೆಯಲ್ಲಿ ಹೋಗುತ್ತಿದ್ದ ಕಾರು ಮತ್ತು ಬೈಕಿನ ಮೇಲೆ ಬಿದ್ದ ಪರಿಣಾಮ 6 ಮಂದಿ ಸ್ಥಳದಲ್ಲೇ ಮೃತ ಪಟ್ಟಿದ್ದು ಇಬ್ಬರು ಗಂಭೀರ ಗಾಯಗೊಂಡಿದ್ದಾರೆ.

ಹದ್ದು ಮೀರಿ ವರ್ತಿಸುತ್ತಿರುವ ಸರ್ಕಾರಿ ಅಧಿಕಾರಿ

ವಿಜಯಟೈಮ್ಸ್ಗೆ ಸಿಕ್ಕಿದ ದಾಖಲೆಗಳನ್ನು ಅವಲೋಕಿಸಿದಾಗ ಕೆಎಎಸ್ ಅಧಿಕಾರಿ  ಶ್ರೀರೂಪ ಅವರು ಕರ್ತವ್ಯ ಲೋಪ ಮಾಡಿರುವುದು ಸ್ಪಷ್ಟವಾಗಿ ಗೊತ್ತಾಗುತ್ತೆ.  ಕಾನೂನು ಮಾಪನ ಶಾಸ್ತ್ರ ನಿಯಂತ್ರಕಿಯಾಗಿ ಶ್ರೀರೂಪ ಅವರಿಗೆ ಹೆಚ್ಚುವರಿ ಜವಾಬ್ದಾರಿಯನ್ನೇನಾದ್ರೂ ನೀಡಲಾಗಿದೆಯಾ ಅಂತ ನಾವು ಆರ್‌ಟಿಐಯಲ್ಲಿ ಕೇಳಿದಾಗ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಅಧಿಕಾರಿಗಳು ಇಲ್ಲ ಅಂತ ಸ್ಪಷ್ಟವಾಗಿ ಹೇಳಿದ್ದಾರೆ.

KSCAಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ವೆಬ್‌ಸೈಟ್‌ನಲ್ಲಿ ನೀಡಲಾಗಿರುವ ನಿಗದಿತ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಂಡು ಅರ್ಜಿಯಲ್ಲಿ ಕೇಳಿರುವ ಮಾಹಿತಿಯನ್ನು ಭರ್ತಿ ಮಾಡಿ, ಭರ್ತಿ ಮಾಡಿದ ಅರ್ಜಿ ಹಾಗೂ ದಾಖಲೆಗಳನ್ನು ಇಮೇಲ್ ಮೂಲಕ ಜನವರಿ 12 2022ರ ಒಳಗೆ ಅರ್ಜಿಯನ್ನು KSCA ಕಚೇರಿಗೆ ಸಲ್ಲಿಸಬಹುದು.

ಸೈನಾ ವಿರುದ್ಧ ಆಕ್ಷೇಪಾರ್ಹ ಟ್ವೀಟ್‌

ನಟನಾಗಿ ಸಿದ್ಧಾರ್ಥ್ ಅವರನ್ನು ಗೌರವಿಸುತ್ತಿದ್ದೆ. ಆದರೆ ಅವರ ಇಂತಹ ಮನಸ್ಥಿತಿಯ ಬಗ್ಗೆ ನಿರೀಕ್ಷಿಸಿರಲಿಲ್ಲ. ಈ ವಿಚಾರವಾಗಿ ಪ್ರತಿಕ್ರಿಯಿ ಸಲು ಅವರು ಉತ್ತಮವಾದ ಪದಗಳನ್ನು ಬಳಸಬಹು ದಿತ್ತು ಎಂದು ಸೈನಾ ಹೇಳಿದ್ದಾರೆ. ಅವರು ಯಾವ ಅರ್ಥದಲ್ಲಿ ಹಾಗೆ ಪ್ರತಿಕ್ರಿಯಿಸಿದ್ದಾರೋ ನನಗೆ ತಿಳಿದಿಲ್ಲ. ನಾನವರನ್ನು ನಟನಾಗಿ ಮಾತ್ರ ಇಷ್ಟಪಟ್ಟಿದ್ದೆ. ಆದರೆ ಇದು ಸರಿಯಲ್ಲ. ಇನ್ನಷ್ಟು ಉತ್ತಮ ಪದಗಳೊಂದಿಗೆ ಅವರು ಪ್ರತಿಕ್ರಿಯಿಸಬಹುದಾಗಿತ್ತು. ಉಳಿದದ್ದನ್ನು ಟ್ವಿಟರ್ ಮತ್ತು ನೀವೆಲ್ಲ ಗಮನಿಸಿದ್ದೀರಿ. ಎಂದು ಭಾವಿಸುತ್ತೇನೆ ಎಂದು ತಿಳಿಸಿದ್ದಾರೆ.  ಪ್ರಧಾನಿಯವರ ಭದ್ರತೆಯೇ ಸಮಸ್ಯೆಯಾಗಿದ್ದರೆ ಮತ್ತೆ ಈ ದೇಶದಲ್ಲಿ ಯಾವುದು ಸುರಕ್ಷಿತವಾಗಿದೆ ಎಂಬುದು ನನಗೆ ತಿಳಿದಿಲ್ಲ ಎಂದು ಸೈನಾ ತಮ್ಮ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಸಿದ್ದಾರ್ಥ್, ವಿಶ್ವದ ಸಬ್ಬಲ್ ಕಾಕ್ ಚಾಂಪಿಯನ್  ಧನ್ಯವಾದಗಳು ದೇವರೇ, ನಮ್ಮಲ್ಲೂ ಭಾರತದ ರಕ್ಷಕರಿದ್ದಾರೆ ಎಂದು ಟ್ವೀಟ್‌ ಮಾಡಿದ್ದರು. ಸೈನಾ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಲು ಸಿದ್ದಾರ್ಥ್ ಬಳಸಿದ ಪದಗಳ ಬಗ್ಗೆ ವ್ಯಾಪಕ ಆಕ್ಷೇಪ ವ್ಯಕ್ತವಾಗಿದೆ. ಅವರ ಟ್ವಿಟರ್ ಖಾತೆಯನ್ನೇ ಬ್ಲಾಕ್‌ ಮಾಡಬೇಕು ಎಂದು ರಾಷ್ಟ್ರೀಯ ಮಹಿಳಾ ಆಯೋಗ ಭಾರತೀಯ ಟ್ವಿಟ್ಟರ್ ಸಂಸ್ಥೆಗೆ ಆಗ್ರಹ ವ್ಯಕ್ತವಾಗಿದೆ.  

ಬೊಮ್ಮಾಯಿ, ನಡ್ಡಾ ಸೇರಿ ಹಲವರಿಗೆ ಕೊರೊನಾ ಪಾಸಿಟಿವ್

ಸಿಎಂಗೆ ಮಾತ್ರವಲ್ಲದೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌ ಹಾಗೂ ಮೂರು ದಿನಗಳ ಹಿಂದಷ್ಟೇ ಕಂದಾಯ ಸಚಿವ ಆರ್‌.ಅಶೋಕ್‌, ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್‌ ಅವರಿಗೂ ಕೊರೊನಾ ಪಾಸಿಟಿವ್‌ ಬಂದಿತ್ತು. ಇದರ ಬೆನ್ನಲ್ಲೇ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೂ ಸೋಂಕು ದೃಢಪಟ್ಟಿದೆ.