
ಕಳೆದ ವರ್ಷ ಬೆಂಗಳೂರಿನಲ್ಲಿ ಸಂಭವಿಸಿರುವ ರಸ್ತೆ ಅಪಘಾತದಲ್ಲಿ ಸಾವಿಗೀಡಾದವರಲ್ಲಿ 21-30 ವರ್ಷದವರೇ ಹೆಚ್ಚು !
ಕಳೆದ ವರ್ಷ 21 ರಿಂದ 30 ವರ್ಷದೊಳಗಿನ ಒಟ್ಟು 207 ಜನರು ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪಿದ್ದರೆ, ಅದೇ ಅವಧಿಯಲ್ಲಿ ಅದೇ ವಯೋಮಾನದ 245 ಜನರನ್ನು ಮಾರಣಾಂತಿಕ ಅಪಘಾತ ಪ್ರಕರಣಗಳಲ್ಲಿ ಆರೋಪಿಗಳೆಂದು ಹೆಸರಿಸಲಾಗಿದೆ ಎಂದು ಬೆಂಗಳೂರು ಟ್ರಾಫಿಕ್ ಬಿಡುಗಡೆ ಮಾಡಿದ ಅಪಘಾತ ವಿಶ್ಲೇಷಣೆ ವರದಿ ತಿಳಿಸಿದೆ.