Visit Channel

January 22, 2022

akhilesh

ಇದೇ ಪ್ರಥಮ ಬಾರಿಗೆ ಉತ್ತರ ಪ್ರದೇಶದ ಚುನಾವಣೆಯಲ್ಲಿ ಸ್ಪರ್ಧಿಸಲು `ಅಖಿಲೇಶ್ ಯಾದವ್’ ಅಧಿಕೃತ ಘೋಷಣೆ.!

ಈ ಕುರಿತಾಗಿ ಅಖಿಲೇಶ್ ಚಿಕ್ಕಪ್ಪ ರಾಜ್ಯಸಭಾ ಸಂಸದರಾದ ರಾಮ್ ಗೋಪಾಲ್ ಯಾದವ್ ಪ್ರತಿಕ್ರಿಯೆ ನೀಡಿದ್ದು, ಅಖಿಲೇಶ್ ಈ ಬಾರಿಯ ಚುನಾವಣೆಯಲ್ಲಿ ಮೊದಲ ಬಾರಿಗೆ ಸ್ಪರ್ಧಿಸುತ್ತಿರಬಹುದು, ಆದರೆ ಖಂಡಿತವಾಗಿ ದಾಖಲೆ ಮತಗಳನ್ನು ಮೀರಿ ಭಾರಿ ಅಂತರದಿಂದ ಜಯಭೇರಿಯಾಗಲಿದ್ದಾರೆ ಎಂದು ತಮ್ಮ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

flight

ಶಿಫ್ಟ್‌ ಮುಗಿಯಿತೆಂದು ಅರ್ಧದಲ್ಲೇ ವಿಮಾನ ನಿಲ್ಲಿಸಿದ ಪೈಲೆಟ್

ಇಸ್ಲಮಾಬಾದ್‌ನಲ್ಲಿ ಇಳಿಯಬೇಕಿದ್ದ ವಿಮಾನವು ಸೌದಿ ಅರೇಬಿಯಾದ ದಮಾಮ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು. ಹವಾಮಾನ ಸರಿಯಾದ ಮೇಲೆ ವಿಮಾನ ಹಾರಾಟಕ್ಕೆ ಸೌದಿ ಅರೇಬಿಯಾ ಅನುಮತಿ ನೀಡಿದ್ದರೂ ಪೈಲಟ್ ವಿಮಾನವನ್ನು ಹಾರಿಸದೆ ದಿನದ ತನ್ನ ಶಿಫ್ಟ್ ಮುಗಿದಿದೆ ಎಂಬ ಕಾರಣ ನೀಡಿದ್ದಾನೆ.

JDS

ರಾಜ್ಯದಲ್ಲಿ ಮುಗಿಯಿತಾ ಜೆಡಿಎಸ್‌ ಹವಾ? ದಳದ ನಾಯಕರೆಲ್ಲಾ `ಕೈ’ಕೊಡಲು ಕಾರಣ ಏನು?

ದಳದ ಒಂದೊಂದೇ ದಳಗಳು ಉದುರುತ್ತಿವೆ. ದಳದ ನಾಯಕರು ಒಬ್ಬೊಬ್ಬರಾಗಿಯೇ ಪಕ್ಷ ತೊರೆದು ಹೋಗುತ್ತಿರುವ ಬೆಳವಣಿಗೆಯನ್ನು ನೋಡಿದ್ರೆ ಮುಂಬರುವ ವಿಧಾನಸಭಾ ಚುನಾವಣೆಯ ವೇಳೆ ರಾಜ್ಯದ ರಾಜಕೀಯ ಚಿತ್ರಣವೇ ಬದಲಾಗೋ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಬರಬರುತ್ತಾ ರಾಜ್ಯದಲ್ಲಿ ಜೆಡಿಎಸ್‌ ಅಲೆ ನಿಧಾನವಾಗಿ ಕಡಿಮೆಯಾಗುತ್ತಾ ಬರುತ್ತಿದೆ.

ipl2022

2022ರ ಐಪಿಎಲ್ ಕೂಟಕ್ಕೆ ಈ ಎರಡು ಹೊಸ ತಂಡಗಳು ಸೇರ್ಪಡೆ.!

ಅಹಮದಾಬಾದ್ ಫ್ರಾಂಚೈಸಿಯು ಹಾರ್ದಿಕ್ ಪಾಂಡ್ಯ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಿದೆ. ಈ ತಂಡವನ್ನು ಮಾಜಿ ಭಾರತೀಯ ವೇಗದ ಬೌಲರ್ ಆಶಿಶ್ ನೆಹ್ರಾ ಮತ್ತು ಮಾಜಿ ದಕ್ಷಿಣ ಆಫ್ರಿಕಾ ಬ್ಯಾಟ್ಸ್ ಮನ್ ಮತ್ತು ಮುಖ್ಯ ಕೋಚ್ ಗ್ಯಾರಿ ಕಿರ್ಸ್ಟನ್ ನಿರ್ವಹಿಸಲಿದ್ದಾರೆ. ತಂಡದ ನಿರ್ದೇಶಕರಾಗಿ ಇಂಗ್ಲೆಂಡ್ನ ಮಾಜಿ ಆಟಗಾರ ವಿಕ್ರಮ್ ಸೋಲಂಕಿ ಇರಲಿದ್ದಾರೆ.

nagesh bc

ಈ ಬಾರಿ ಎಸ್‌ಎಸ್‌ಎಲ್‌ಸಿಯಲ್ಲಿ ‘ಕೊರೊನಾ ಪಾಸ್‌’ ಇಲ್ಲ

ಈ ಬಾರಿಯ ಎಸ್ಎಸ್ಎಲ್’ಸಿ ಪರೀಕ್ಷೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದ ಬಹುತೇಕ ಎಲ್ಲಾ ಶಾಲೆಗಳು ಶೇಕಡಾ 70 ರಷ್ಟು ಪಠ್ಯಕ್ರಮಗಳನ್ನು ಪೂರ್ಣಗೊಳಿಸಿವೆ, ಇನ್ನು ವಿದ್ಯಾರ್ಥಿಗಳಿಗೆ ಸಹಾಯವಾಗಲು ಶೇಕಡಾ 30 ರಷ್ಟು ಪಠ್ಯಕ್ರಮ ಕಡಿಮೆ ಮಾಡಲಾಗಿದೆ. 2020-21 ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳು ಮತ್ತು ಶಾಲೆಗಳು ಕೋವಿಡ್ ಸಂಬಂಧಿತ ಹಲವಾರು ಸಮಸ್ಯೆಗಳನ್ನು ಎದುರಿಸಿದ್ದಾರೆ.

nikhil kumar

ಜನ್ಮದಿನಕ್ಕೆ ‘ಯದುವೀರ’ ಪೋಸ್ಟರ್ ಜೊತೆಗೆ ಬಂದ ನಿಖಿಲ್ ಕುಮಾರಸ್ವಾಮಿ.!

ಇತ್ತೀಚೆಗೆ ಕಳೆದ ವರ್ಷ ಬಿಡುಗಡೆಗೊಂಡ ರೈಡರ್ಸ್ ಸಿನಿಮಾ ಪ್ರೇಕ್ಷಕರನ್ನು ಮನರಂಜಿಸುವಲ್ಲಿ ಯಶಸ್ವಿಯಾಯಿತು. ಈ ಒಂದು  ಸಿನಿಮಾ ನಿಖಿಲ್ ಅವರಿಗೆ ಚಿತ್ರರಂಗದಲ್ಲಿ ಮುಂದುವರೆಯಲು ಬಲವಾದ  ಮತ್ತೊಂದು ಹೆಜ್ಜೆಗುರುತಾಯಿತು ಎನ್ನಬಹುದು. ಇಂದು ನಿಖಿಲ್ ಕುಮಾರಸ್ವಾಮಿ ಅವರು ತಮ್ಮ 32ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

congress

ಕೊರೊನಾ ಹಾವಳಿ ಕಡಿಮೆಯಾಗಲಿ, ಪಾದಯಾತ್ರೆ ಹೇಗೆ ಮುಂದುವರಿಸಬೇಕು ನಮಗೆ ಗೊತ್ತು ಎಂದ ಕಾಂಗ್ರೆಸ್.!

ಕೊರೊನ ಸೋಂಕು ಇಳಿಕೆ ಕಂಡ ನಂತರವೇ ಮೇಕೆದಾಟು ಪಾದಯಾತ್ರೆಯನ್ನು ಹೇಗೆ ಮುಂದುವರಿಸಬೇಕು, ಈ ಪಾದಯಾತ್ರೆಯ ಪ್ರಭಾವ ಹೇಗೆ ಹೆಚ್ಚು ಮಾಡಬೇಕು ಎಂಬುದನ್ನು ನಾವು ನಿರ್ಧರಿಸದ್ದೇವೆ ಎಂದು ಪ್ರಸಾವನೆಯಲ್ಲಿ ತಿಳಿಸಿದೆ. ಜನರನ್ನು ರಾಜ್ಯದ ನಾನಾ ಭಾಗಗಳಿಂದ ಕಾಲ್ನಡಿಗೆಯಲ್ಲಿ ಹೇಗೆ ಕರೆತರಬೇಕು ಎಂಬುದು ಕೂಡ ಚರ್ಚೆಯಾಗಿದೆ ಎಂದು ತಿಳಿಸಿದೆ.

hd devegowda

ದ್ವಿತೀಯ ಬಾರಿಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರಿಗೆ ಕೊರೊನಾ ಪಾಸಿಟಿವ್.!

ಕೊರೊನಾ ಮೂರನೇ ಅವಧಿಯಲ್ಲಿ ದೇವೇಗೌಡ ಅವರಿಗೆ ಪಾಸಿಟಿವ್ ಕಾಣಿಸಿಕೊಂಡಿದೆ. ನಿನ್ನೆ ರಾತ್ರಿ ಬೆಂಗಳೂರಿನ ಮಣಿಪಾಲ್ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಕಳೆದ ಒಂದೆರಡು ದಿನಗಳಿಂದ ವಿಪರೀತ ಕೆಮ್ಮು ಕಾಣಿಸಿಕೊಂಡ ಬೆನ್ನಲ್ಲೇ ಇನ್ನೂ ದೇವೆಗೌಡ ಅವರು ಮುನ್ನೆಚ್ಚರಿಕೆಯಿಂದ ಆಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿದ್ದರು