- ಮೆಟ್ರೋದಲ್ಲಿ ಬಿಇ ಪಾಸಾದವರಿಗೆ ಜಾಬ್.
- 35 ಇಂಜಿನಿಯರ್‌ಗಳ ನೇಮಕ.
- ವೇತನ ಮಾಸಿಕ ರೂ.44,000.
Bengaluru: ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ – ಬಿಎಂಆರ್‌ಸಿಎಲ್ (2025 jobs in bmrc) ತನ್ನ ಸಿವಿಲ್ ಇಂಜಿನಿಯರಿಂಗ್ ಸೆಕ್ಷನ್‌ನ ಪ್ರಾಜೆಕ್ಟ್ ವಿಭಾಗದಲ್ಲಿ ಅಗತ್ಯ ಇರುವ ಇಂಜಿನಿಯರಿಂಗ್ ಪದವೀಧರರನ್ನು ನೇಮಕ ಮಾಡಲು ಇದೀಗ ಅಧಿಸೂಚನೆ ಬಿಡುಗಡೆ ಮಾಡಿದೆ. ಈ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಿದ್ದು, ಅರ್ಹ ಮತ್ತು ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ.

ನೇಮಕಾತಿ ಪ್ರಾಧಿಕಾರ: ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ
ಹುದ್ದೆ ಹೆಸರು: ಗ್ರಾಜುಯೇಟ್ ಇಂಜಿನಿಯರ್ (ಸಿವಿಲ್)
ಹುದ್ದೆಗಳ ಸಂಖ್ಯೆ: 35
ವೇತನ ಶ್ರೇಣಿ : ರೂ.44,000 ಮಾಸಿಕ.
ಭತ್ಯೆಗಳು: ಬಿಎಂಆರ್‌ಸಿಎಲ್ ಒ ಅಂಡ್ ಎಂ ವಲಯದ ನಿಯಮಗಳ ಪ್ರಕಾರ ಅನ್ವಯ.
ಸೇವೆ ಅವಧಿ: ಗುತ್ತಿಗೆ ಆಧಾರಿತ ಹುದ್ದೆಗಳು ಇವಾಗಿದ್ದು, ಮೊದಲಿಗೆ 3 ವರ್ಷದ ಅವಧಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ನಂತರ ಕಾರ್ಯಕ್ಷಮತೆ ಆಧರಿಸಿ ಸೇವೆ ಅವಧಿ ವಿಸ್ತರಣೆ ಮಾಡಲಾಗುತ್ತದೆ.
ಹುದ್ದೆಗಳಿಗೆ ಅರ್ಹತೆಗಳು ಹೀಗಿವೆ
- ಬಿಇ ಅಥವಾ ಬಿ.ಟೆಕ್ ಶಿಕ್ಷಣವನ್ನು ಸಿವಿಲ್ ಇಂಜಿನಿಯರಿಂಗ್ ಬ್ರ್ಯಾಂಚ್‌ನಲ್ಲಿ ಓದಿ ಪಾಸ್ ಮಾಡಿರಬೇಕು.
- ಅಧಿಸೂಚನೆ ದಿನಾಂಕಕ್ಕೆ ವ್ಯಾಲಿಡ್ ಗೇಟ್ ಸ್ಕೋರ್ ಇರಬೇಕು.
- ಕನಿಷ್ಠ ಶೇಕಡ.60 ಅಂಕಗಳೊಂದಿಗೆ ಬಿಇ ಪಾಸ್ ಮಾಡಿರಬೇಕು.
- ನೋಟಿಫಿಕೇಶನ್ ಬಿಡುಗಡೆ ಮಾಡಿದ ದಿನಾಂಕಕ್ಕೆ ಗರಿಷ್ಠ 3 ವರ್ಷ ಮೀರಿರಬಾರದು.
- ಕನ್ನಡ ಓದಲು, ಬರೆಯಲು, ಮಾತನಾಡಲು ತಿಳಿದಿರಬೇಕು.
ಆಯ್ಕೆ ವಿಧಾನ:
ಅರ್ಜಿ ಸಲ್ಲಿಸಿದವರನ್ನು ಗೇಟ್ ಸ್ಕೋರ್ ಆಧಾರದಲ್ಲಿ ಮೊದಲಿಗೆ ಆಯ್ಕೆ ಮಾಡಲಾಗುತ್ತದೆ. ನಂತರ (2025 jobs in bmrc) ಅವರನ್ನು ದಾಖಲೆಗಳ ಪರಿಶೀಲನೆ ಮತ್ತು ಸಂದರ್ಶನಕ್ಕೆ ಕರೆದು ಅಂತಿಮ ಆಯ್ಕೆ ಮಾಡಲಾಗುತ್ತದೆ.
ಪ್ರಮುಖ ದಿನಾಂಕಗಳು:
- ಆನ್‌ಲೈನ್ ಅರ್ಜಿಗಳನ್ನು ಸ್ವೀಕರಿಸಲು ಕೊನೆಯ ದಿನಾಂಕ: 03-05-2025
- ಅರ್ಜಿಗಳ ಸಹಿಮಾಡಲಾದ ಪ್ರಿಂಟ್‌ಔಟ್‌ಗಳನ್ನು ಸ್ವೀಕರಿಸಲು ಕೊನೆಯ ದಿನಾಂಕ: 07-05-2025ರ ಸಂಜೆ 4.00 ಗಂಟೆವರೆಗೆ.
ಇಂಜಿನಿಯರ್ ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಸಲ್ಲಿಸುವ ವಿಧಾನ :
- ಬಿಎಂಆರ್‌ಸಿಎಲ್ ವೆಬ್ ವಿಳಾಸ https://www.bmrc.co.in/career/ ಕ್ಕೆ ಭೇಟಿ ನೀಡಿ.
- ಓಪನ್ ಆದ ವೆಬ್‌ಪೇಜ್‌ನಲ್ಲಿ ಗ್ರಾಜುಯೇಟ್ ಇಂಜಿನಿಯರ್ ಅಧಿಸೂಚನೆ ಅಡಿಯಲ್ಲಿ ‘ Click Here to Apply Online’ ಎಂದಿರುವಲ್ಲಿ ಕ್ಲಿಕ್ ಮಾಡಿ.
- ಓಪನ್ ಆಗುವ ಮತ್ತೊಂದು ವೆಬ್‌ಪೇಜ್‌ನಲ್ಲಿ ಕೇಳಲಾದ ಮಾಹಿತಿಗಳನ್ನು ನೀಡಿ ಅರ್ಜಿ ಸಲ್ಲಿಸಿ.
- ನಂತರ ಭರ್ತಿ ಮಾಡಿದ ಅರ್ಜಿ ಪ್ರಿಂಟ್ ತೆಗೆದುಕೊಂಡು ಕೆಳಗಿನ ವಿಳಾಸಕ್ಕೆ ಸಲ್ಲಿಸಿ.
ಅರ್ಜಿಗಳ ಪ್ರಿಂಟ್ಔಟ್‌ಗಳನ್ನು ಕಳುಹಿಸಬೇಕಾದ ವಿಳಾಸ:
ಜೆನೆರಲ್ ಮ್ಯಾನೇಜರ್ (HR), ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್, 3ನೇ ಮಹಡಿ, ಬಿಎಂಟಿಸಿ ಕಾಂಪ್ಲೆಕ್ಸ್, ಕೆ ಹೆಚ್ ರಸ್ತೆ, ಶಾಂತಿನಗರ, ಬೆಂಗಳೂರು – 560027.
ಹೆಚ್ಚಿನ ಅರ್ಹತಾ ಅಗತ್ಯತೆ, ವೇತನ, ಅರ್ಜಿಗಳ ಪ್ರಕ್ರಿಯೆ ಮತ್ತು ಇತರೆ ಮಾಹಿತಿಗಳಿಗೆ ಬಿಎಂಆರ್‌ಸಿಎಲ್ ವೆಬ್‌ಸೈಟ್ www.bmrc.co.in/Career Section ನಲ್ಲಿ ಅಧಿಸೂಚನೆ ಓದಿ ಅರ್ಜಿ ಸಲ್ಲಿಸಬಹುದಾಗಿದೆ.
ಸಂಪರ್ಕಕ್ಕಾಗಿ ಇಮೇಲ್: helpdesk@bmrc.co.in
ಇದನ್ನು ಓದಿ : ಬೆಲೆ ಏರಿಕೆಗೆ ಕೇಂದ್ರದ ನೀತಿಗಳೇ ಕಾರಣ: ಕರ್ನಾಟಕದಲ್ಲಿ ಮಾತ್ರವಲ್ಲ ದೇಶದೆಲ್ಲೆಡೆ ಇದೇ ರೀತಿಯಿದೆ- ರಾಜ್ಯ ಸರ್ಕಾರ ಸಮರ್ಥನೆ