Bangalore : ರಾಜ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕೆ (Large and Medium Industry) ಸಚಿವ ಎಂಬಿ ಪಾಟೀಲ್ (MB Patil) ಹಾಗೂ ರಾಜ್ಯ ಸರ್ಕಾರದ ಉನ್ನತ ಅಧಿಕಾರಿಗಳು ಬಂಡವಾಳ ಆಕರ್ಷಿಸಲು (Attract capital) ವಿವಿಧ ದೇಶಗಳಿಗೆ ಪ್ರವಾಸ ಕೈಗೊಂಡಿದ್ದು ಇದಕ್ಕಾಗಿ 20 ಕೋಟಿ ರೂಪಾಯಿ ವೆಚ್ಚವಾಗಿದೆ. ಆದರೆ ಪ್ರವಾಸಗಳಿಂದ ಒಟ್ಟು 64,675 ಕೋಟಿ ರೂಪಾಯಿ ಹೂಡಿಕೆಯ ಭರವಸೆಯನ್ನು ಪಡೆದುಕೊಳ್ಳಲಾಗಿದೆ.
ಯಾವ ದೇಶದ ಪ್ರವಾಸಕ್ಕೆ ಎಷ್ಟು ವೆಚ್ಚ
ಅಮೆರಿಕಾ (America) ಪ್ರವಾಸಕ್ಕೆ 2.15 ಕೋಟಿ (2.15 crore) ಖರ್ಚು
2023 ಸೆಪ್ಟಂಬರ್ 25 ರಿಂದ ಅಕ್ಟೋಬರ್ 6 ರವರೆಗೆ ಸಚಿವ ಎಂಬಿ ಪಾಟೀಲ್ ನೇತೃತ್ವದಲ್ಲಿ ಅಧಿಕಾರಿಗಳ ನಿಯೋಗ (Delegation of officers) ಅಮೆರಿಕಾ ದೇಶಕ್ಕೆ ಪ್ರವಾಸ ಕೈಗೊಂಡಿತ್ತು. ಇದಕ್ಕಾಗಿ 2.15 ಕೋಟಿ ರೂಪಾಯಿ ಖರ್ಚಾಗಿದೆ. ನಂತರ 2024 ಸೆಪ್ಟಂಬರ್ 30 ರಿಂದ ಅಕ್ಟೋಬರ್ 11 ರವರೆಗೆ ಮತ್ತೊಮ್ಮೆ ಸಚಿವ ಎಂಬಿ ಪಾಟೀಲ್ (Minister MB Patil) ಹಾಗೂ ರಾಜ್ಯ ಸರ್ಕಾರದ ಅಧಿಕಾರಿಗಳ ನಿಯೋಗ ಅಮೆರಿಕಾ ಪ್ರವಾಸ ಕೈಗೊಂಡಿತ್ತು. ಈ ಪ್ರವಾಸಕ್ಕೆ 2.59 ಕೋಟಿ ವೆಚ್ಚವಾಗಿದೆ.
ತೈವಾನ್ ಪ್ರವಾಸಕ್ಕೆ (Trip to Taiwan) 8 ಲಕ್ಷ ವೆಚ್ಚ
2024 ಫೆಬ್ರವರಿ 20 ರಿಂದ 22 ವರಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ (Large and Medium Industrial) ಇಲಾಖೆಯ ಆಯುಕ್ತರು ಮತ್ತು ಅಧಿಕಾರಿಗಳ ನಿಯೋಗ ತೈವಾನ್ ಪ್ರವಾಸ ಮಾಡಿತ್ತು. ಇದಕ್ಕಾಗಿ 8 ಲಕ್ಷ ಖರ್ಚಾಗಿದೆ. ಈ ಪ್ರವಾಸದಲ್ಲಿ ಸಚಿವ ಎಂಬಿ ಪಾಟೀಲ್ ಭಾಗಿಯಾಗಿರಲಿಲ್ಲ.
ಜಪಾನ್ ಮತ್ತು ದಕ್ಷಿಣ ಕೊರಿಯಾ ಪ್ರವಾಸ (Tour of Japan and South Korea) 1.29 ಕೋಟಿ ವೆಚ್ಚ
2024 ಜೂನ್ 23 ರಿಂದ ಜುಲೈ 6 ರ ವರೆಗೆ ಸಚಿವ ಎಂಬಿ ಪಾಟೀಲ್ ಹಾಗೂ ಅಧಿಕಾರಿಗಳ ನಿಯೋಗ ಜಪಾನ್ ಮತ್ತು ದಕ್ಷಿಣ ಕೊರಿಯಾ (Japan and South Korea) ದೇಶಗಳಿಗೆ ಪ್ರವಾಸ ಕೈಗೊಂಡಿತ್ತು. ಇದಕ್ಕಾಗಿ 1.29 ಕೋಟಿ ವೆಚ್ಚವಾಗಿದೆ.
ದಾವೋಸ್ ಪ್ರವಾಸಕ್ಕೆ (Trip to Davos) 14 ಕೋಟಿ ವೆಚ್ಚ
2024 ಜನವರಿ 15 ರಿಂದ ಜನವರಿ 19 ರವರೆಗೆ ಯೂರೋಪಿನ ಸ್ವಿಟ್ಜರ್ಲ್ಯಾಂಡ್ (Switzerland of Europe) ದಾವೋಸ್ ನಲ್ಲಿ ನಡೆದ ಶೃಂಗಸಭೆ ಪ್ರವಾಸಕ್ಕೆ ಸಚಿವ ಎಂಬಿ ಪಾಟೀಲ್ ಹಾಗೂ ಅಧಿಕಾರಿಗಳ ನಿಯೋಗದ ಪ್ರವಾಸಕ್ಕೆ 14. 75 ಕೋಟಿ ರೂ ಖರ್ಚಾಗಿದೆ.
ಪ್ರವಾಸದಿಂದ ಹೂಡಿಕೆಯ ಭರವಸೆ ಸಿಕ್ಕಿದ್ದೆಷ್ಟು?
• ಅಮೆರಿಕಾ ಪ್ರವಾಸದ ಸಂದರ್ಭದಲ್ಲಿ 25,000 ಕೋಟಿ ಹೂಡಿಕೆಯ ಭರವಸೆ ಸಿಕ್ಕಿದೆ.
• ದಾವೋಸ್ ಪ್ರವಾಸದ ಸಂದರ್ಭದಲ್ಲಿ 15,000 ಕೋಟಿ ಹೂಡಿಕೆಯ ಭರವಸೆ ಸಿಕ್ಕಿದೆ.
• ತೈವಾನ್ ಪ್ರವಾಸದ ಸಂದರ್ಭದಲ್ಲಿ 1490 ಕೋಟಿ ಹೂಡಿಕೆ ಭರವಸೆ ಸಿಕ್ಕಿದೆ.
• ಒಟ್ಟು 64,675 ಕೋಟಿ ಹೂಡಿಕೆಯ ಭರವಸೆ ಸಿಕ್ಕಿದ್ದು, 22,520 ಉದ್ಯೋಗ ಸೃಷ್ಟಿ ಸಾಧ್ಯತೆ ಇದೆ.