ಕರೋನಾ ವೈರಸ್ ವಿಶ್ವದೆಲ್ಲೆಡೆ ರುದ್ರನರ್ತನವಾಡುತ್ತಿದ್ದು ಲಕ್ಷಾಂತರ ಜನರ ಜೀವ ತೆಗೆದಿದೆ. ಇದರ ಮಧ್ಯೆ ಇದೀಗ ಭಾರತಕ್ಕೂ ಕರೋನಾ ಮಾರಕ ವೈಸರ್ ಅಂಟಿಕೊಂಡಿದ್ದು ದಿನದಿಂದ ದಿನಕ್ಕೆ ಸೋಂಕು ಹೆಚ್ಚಾಗುತ್ತಿದೆ . ಇದರ ಬೆನ್ನಲೆ ಇದೀಗ ದೇಶದ ಪ್ರಧಾನಿ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ .
ಮಂಗಳವಾರ ರಾತ್ರಿ ದೇಶದ ಜನತೆಯನ್ನುದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಕೊರೋನ ತಡೆಗಟ್ಟಲು ಮುನ್ನೆಚ್ಚರಿಕಾ ಕ್ರಮವಾಗಿ ಇಂದು ರಾತ್ರಿ 12 ಗಂಟೆಯಿಂದ ದೇಶದಾದ್ಯಂತ ಸಂಪೂರ್ಣ ಲಾಕ್ ಡೌನ್ ಮಾಡಲಾಗುವುದು ಎಂದು ಘೋಷಿಸಿದ್ದಾರೆ.
ಇನ್ನು ಭಾರತವನ್ನು ರಕ್ಷಿಸಲು ಇದು ಅಗತ್ಯ ಕ್ರಮವಾಗಿದ್ದು; ರಾಜ್ಯಗಳಿಗೆ, ಕೇಂದ್ರಡಳಿತ ಪ್ರದೇಶಗಳು, ಜಿಲ್ಲೆಗಳು ಲಾಕ್ ಡೌನ್ ಆಗಲಿದೆ. ಜೊತೆಗೆ ಯತಾಸ್ಥಿತಿಯಲ್ಲಿ ಕರ್ಫ್ಯೂ ಪರಿಸ್ಥಿತಿ ಇರಲಿದೆ. 21 ದಿನಗಳ ಕಾಲ ಈ ಲಾಕ್ ಡೌನ್ ಇರಲಿದೆ ಎಂದು ಪ್ರಧಾನಿ ತಿಳಿಸಿದ್ದಾರೆ. ದೇಶದಲ್ಲಿ ಈಗ ಎಲ್ಲಿದ್ದೀರೋ ಅಲ್ಲಿಯೇ ಇರಿ, ಎಲ್ಲಿಗೂ ಹೋಗಬೇಡಿ. ಈ ಲಾಕ್ ಡೌನ್ 21 ದಿನಗಳ ಕಾಲ ಇರಲಿದೆ. 3 ವಾರಗಳು ಮನೆಯಲ್ಲೇ ಇರಿ. ಮನೆಗಳಿಂದ ಯಾರೂ ಹೊರಹೋಗಬೇಡಿ ಎಂದು ಪ್ರಧಾನಿ ವಿನಂತಿಸಿದ್ದಾರೆ.