• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ದೇಶ-ವಿದೇಶ

ಇನ್ಮುಂದೆ ದಿನದ 24 ಗಂಟೆಯೂ ಅಂಚೆ ಕಚೇರಿ ಸೇವೆ: ಕೆಲ ಆಯ್ದ ಶಾಖೆಗಳಲ್ಲಿ ಮಾತ್ರವೇ ಈ ಸೇವೆ ಲಭ್ಯ

Teju Srinivas by Teju Srinivas
in ದೇಶ-ವಿದೇಶ, ಪ್ರಮುಖ ಸುದ್ದಿ, ವಿಜಯ ಟೈಮ್ಸ್‌
ಇನ್ಮುಂದೆ ದಿನದ 24 ಗಂಟೆಯೂ ಅಂಚೆ ಕಚೇರಿ ಸೇವೆ: ಕೆಲ ಆಯ್ದ ಶಾಖೆಗಳಲ್ಲಿ ಮಾತ್ರವೇ ಈ ಸೇವೆ ಲಭ್ಯ
0
SHARES
11
VIEWS
Share on FacebookShare on Twitter
  • ಉದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ಸಣ್ಣ (24 hours post office service ) ಉದ್ಯಮಿಗಳಿಗೆ 24 ಗಂಟೆಯ ಅಂಚೆ ಸೇವೆ ದೊಡ್ಡ ಸಹಾಯ
  • ಮೆಟ್ರೋ ನಗರಗಳಲ್ಲಿ 24–48 ಗಂಟೆಗಳಲ್ಲಿ ವಿತರಣೆಗೆ ಹೊಸ ವ್ಯವಸ್ಥೆ ಜಾರಿ
  • ಕಡಿಮೆ ದರ, ಟ್ರ್ಯಾಕಿಂಗ್ ಮತ್ತು OTP ಭದ್ರತೆಯೊಂದಿಗೆ ಇಂಡಿಯಾ ಪೋಸ್ಟ್‌ನ ಹೊಸ ಹೆಜ್ಜೆ

ಭಾರತೀಯ ಅಂಚೆ ಇಲಾಖೆ ತನ್ನ ಸೇವೆಗಳನ್ನು ಕಾಲಕ್ಕೆ ತಕ್ಕಂತೆ (24 hours post office service) ಆಧುನೀಕರಿಸುತ್ತಾ, ಗ್ರಾಹಕರ ಅನುಕೂಲಕ್ಕಾಗಿ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ.

ಇನ್ಮುಂದೆ ಆಯ್ದ ಅಂಚೆ ಕಚೇರಿಗಳಲ್ಲಿ ದಿನದ 24 ಗಂಟೆಯೂ ಸೇವೆ ಲಭ್ಯವಾಗಲಿದೆ. “ಎನಿಟೈಮ್ ಪೋಸ್ಟ್ ಆಫೀಸ್” (Anytime Post Office) ಎಂಬ ಹೊಸ ಪರಿಕಲ್ಪನೆಯಡಿ ದೇಶದಾದ್ಯಂತ 214 ಅಂಚೆ ಕಚೇರಿಗಳಲ್ಲಿ 24×7 ಸೇವೆಗಳನ್ನು ಪ್ರಾರಂಭಿಸುವುದಾಗಿ ಇಂಡಿಯಾ ಪೋಸ್ಟ್ ಘೋಷಿಸಿದೆ.

24 hours post office service

ಇದರಿಂದಾಗಿ ಮಧ್ಯರಾತ್ರಿ ಅಥವಾ ಬೆಳಗಿನ ಜಾವದಲ್ಲೂ ಸ್ಪೀಡ್ ಪೋಸ್ಟ್ (Speed Post) ಮತ್ತು ಪಾರ್ಸೆಲ್ ಬುಕ್ಕಿಂಗ್ ಮಾಡಬಹುದಾಗಿದೆ. ಇದುವರೆಗೆ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಮಾತ್ರ ಕಾರ್ಯನಿರ್ವಹಿಸುತ್ತಿದ್ದ ಅಂಚೆ ಕಚೇರಿಗಳು, ಈಗ ಸಮಯದ ಮಿತಿಯನ್ನು ಮುರಿದು ಜನರಿಗೆ ಇನ್ನಷ್ಟು ಸಮೀಪವಾಗುತ್ತಿವೆ.

ಒಂದು ಕಾಲದಲ್ಲಿ ಅಂಚೆ ಕಚೇರಿ ಎಂದರೆ ಸರ್ಕಾರಿ ಕಚೇರಿ ಮಾದರಿಯ ವ್ಯವಸ್ಥೆ ಎಂಬ ಭಾವನೆ ಇತ್ತು. ಆದರೆ ಇ-ಕಾಮರ್ಸ್, ತುರ್ತು ವೈದ್ಯಕೀಯ ಅವಶ್ಯಕತೆಗಳು ಮತ್ತು ವೇಗದ ವ್ಯಾಪಾರ ಜಗತ್ತಿನ ಅಗತ್ಯಗಳನ್ನು ಮನಗಂಡು, ಭಾರತೀಯ ಅಂಚೆ ಇಲಾಖೆ ತನ್ನ ಸೇವೆಗಳಲ್ಲಿ ದೊಡ್ಡ ಬದಲಾವಣೆಗಳನ್ನು ತರುತ್ತಿದೆ.

ತುರ್ತು ಔಷಧಿಗಳು, ಮುಖ್ಯ ದಾಖಲೆಗಳು, ವ್ಯಾಪಾರ ಸಂಬಂಧಿತ (24 hours post office service) ಪಾರ್ಸೆಲ್‌ಗಳನ್ನು ಕಳುಹಿಸಲು ಇನ್ನು ಸಮಯದ ನಿರ್ಬಂಧ ಇರುವುದಿಲ್ಲ. ರಾತ್ರಿ 12 ಗಂಟೆಯಾಗಲಿ ಅಥವಾ ಬೆಳಗಿನ 4 ಗಂಟೆಯಾಗಲಿ, ಗ್ರಾಹಕರು ಯಾವುದೇ ಅಡಚಣೆ ಇಲ್ಲದೆ ಪಾರ್ಸೆಲ್ ಬುಕ್ (Parcel Book) ಮಾಡಬಹುದು.

ಇದರಿಂದಾಗಿ ಸಮಯದ ಕೊರತೆಯಿಂದ ಬಳಲುತ್ತಿದ್ದ ಉದ್ಯೋಗಿಗಳು ಮತ್ತು ವ್ಯಾಪಾರಿಗಳಿಗೆ ಬಹಳ ಸಹಾಯವಾಗಲಿದೆ.

ಈ 24/7 ಸೇವೆಯನ್ನು “ಎನಿಟೈಮ್ ನೀಡ್ಸ್” (Anytime Needs) ಎಂಬ ಪರಿಕಲ್ಪನೆಯಡಿ ಪರಿಚಯಿಸಲಾಗಿದೆ.

ವಿಶೇಷವಾಗಿ ನಗರಗಳ ಪ್ರಮುಖ ರೈಲು ನಿಲ್ದಾಣಗಳು, ವಿಮಾನ ನಿಲ್ದಾಣಗಳ ಸುತ್ತಮುತ್ತ ಹಾಗೂ ಪ್ರಧಾನ ಅಂಚೆ ಕಚೇರಿಗಳಲ್ಲಿ ಈ ವಿಶೇಷ ಕೌಂಟರ್‌ಗಳು (Counter) ಲಭ್ಯವಿರುತ್ತವೆ.

ಹಗಲು ವೇಳೆಯಲ್ಲಿ ಕಚೇರಿ ಕೆಲಸ ಅಥವಾ ವ್ಯಾಪಾರದಲ್ಲಿ ತೊಡಗಿರುವವರಿಗೆ ರಾತ್ರಿ ಸಮಯದಲ್ಲಿ ಈ ಸೇವೆ ಅತ್ಯಂತ ಉಪಯುಕ್ತವಾಗಿದೆ.

ಮೆಟ್ರೋ ನಗರಗಳ ನಡುವೆ ಸ್ಪೀಡ್ ಪೋಸ್ಟ್‌ಗಳನ್ನು 24 ರಿಂದ 48 ಗಂಟೆಗಳೊಳಗೆ ತಲುಪಿಸುವಂತೆ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸಲಾಗಿದೆ. ಇದರಿಂದ ಖಾಸಗಿ ಕೊರಿಯರ್ ಸಂಸ್ಥೆಗಳೊಂದಿಗೆ ಪೈಪೋಟಿ ನೀಡುವ ಮಟ್ಟಿಗೆ ಇಂಡಿಯಾ ಪೋಸ್ಟ್ ತನ್ನ ಸೇವಾ ಗುಣಮಟ್ಟವನ್ನು ಹೆಚ್ಚಿಸುತ್ತಿದೆ.

ಸುರಕ್ಷತೆ ಮತ್ತು ಪಾರದರ್ಶಕತೆಯ ದೃಷ್ಟಿಯಿಂದಲೂ ಈ ಸೇವೆ ಗಮನಾರ್ಹವಾಗಿದೆ. ಪಾರ್ಸೆಲ್ ಬುಕ್ ಮಾಡಿದ ತಕ್ಷಣ 13 ಅಂಕಿಗಳ ಟ್ರ್ಯಾಕಿಂಗ್ (Tracking) ಸಂಖ್ಯೆಯನ್ನು ನೀಡಲಾಗುತ್ತದೆ.

ಇದರ ಮೂಲಕ ಗ್ರಾಹಕರು ತಮ್ಮ ಪಾರ್ಸೆಲ್ ಎಲ್ಲಿದೆ ಎಂಬುದನ್ನು ಮೊಬೈಲ್ ಅಥವಾ ವೆಬ್‌ಸೈಟ್ ಮೂಲಕ ತಕ್ಷಣವೇ ಪರಿಶೀಲಿಸಬಹುದು. ಇದಲ್ಲದೆ, ಓಟಿಪಿ (OTP) ಆಧಾರಿತ ವಿತರಣಾ ವ್ಯವಸ್ಥೆಯನ್ನು ಜಾರಿಗೆ ತಂದು, ಪಾರ್ಸೆಲ್ ಸರಿಯಾದ ವ್ಯಕ್ತಿಗೆ ತಲುಪುವಂತೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.

ಈ ರೀತಿಯ ತಂತ್ರಜ್ಞಾನ ಆಧಾರಿತ ಕ್ರಮಗಳು ಇಂಡಿಯಾ ಪೋಸ್ಟ್ ಮೇಲಿನ ಜನರ ನಂಬಿಕೆಯನ್ನು ಇನ್ನಷ್ಟು ಗಟ್ಟಿಗೊಳಿಸುತ್ತವೆ.

ಈ 24×7 ಅಂಚೆ ಸೇವೆ ವಿಶೇಷವಾಗಿ ಯಾರಿಗೆ ಲಾಭಕರ ಎಂಬುದನ್ನು ನೋಡಿದರೆ, ಸಣ್ಣ ಮತ್ತು ಮಧ್ಯಮ ಇ-ಕಾಮರ್ಸ್ (E-Commerce) ಉದ್ಯಮಿಗಳು ಮೊದಲ ಸಾಲಿನಲ್ಲಿ ಬರುತ್ತಾರೆ.

ರಾತ್ರಿ ತಮ್ಮ ಆರ್ಡರ್‌ಗಳನ್ನು ಪ್ಯಾಕ್ ಮಾಡಿ ತಕ್ಷಣ ಕಳುಹಿಸಲು ಈ ಸೇವೆ ದೊಡ್ಡ ವರದಾನವಾಗಿದೆ. ವಿದೇಶಕ್ಕೆ ತೆರಳುವ ವಿದ್ಯಾರ್ಥಿಗಳ ಪ್ರಮುಖ ದಾಖಲೆಗಳು, ತುರ್ತು ವೈದ್ಯಕೀಯ ಔಷಧಿಗಳು ಹಾಗೂ ಸಾಮಾನ್ಯ ಜನರ ದಿನನಿತ್ಯದ ಅಗತ್ಯಗಳಿಗೂ ಇದು ಬಹಳ ಅನುಕೂಲಕರವಾಗಿದೆ.

ಪ್ರಸ್ತುತ ದೇಶದಾದ್ಯಂತ 214 ಅಂಚೆ ಕಚೇರಿಗಳಲ್ಲಿ 24 ಗಂಟೆಯ ಸೇವೆ ಲಭ್ಯವಿದ್ದು, ಇನ್ನೂ ಸುಮಾರು 3,968 ಅಂಚೆ ಕಚೇರಿಗಳಲ್ಲಿ ಕೆಲಸದ ಸಮಯವನ್ನು ವಿಸ್ತರಿಸಲಾಗಿದೆ.

ನಿಮ್ಮ ಪ್ರದೇಶದಲ್ಲಿ 24/7 ಸೇವೆ ನೀಡುವ ಅಂಚೆ ಕಚೇರಿ ಯಾವುದು ಎಂಬ ಮಾಹಿತಿ ಪಡೆಯಲು ಇಂಡಿಯಾ ಪೋಸ್ಟ್‌ನ (India Post) ಅಧಿಕೃತ ವೆಬ್‌ಸೈಟ್ ಅಥವಾ ‘ಡಾಕ್ ಸೇವಾ’ ಆ್ಯಪ್ ಅನ್ನು ಕೂಡ ಬಳಸಬಹುದು.

ಇದನ್ನು ಓದಿ : https://vijayatimes.com/cash-prize-for-sslc-toppers/

Tags: Indiapostofficeservices

Related News

ಐಟಿ ವಲಯಕ್ಕೆ ಎಐ ಸವಾಲು:ಐಟಿ ಉದ್ಯೋಗಿಗಳಿಗೆ ಎಚ್ಚರಿಕೆಯ ಘಂಟೆ
ದೇಶ-ವಿದೇಶ

ಐಟಿ ವಲಯಕ್ಕೆ ಎಐ ಸವಾಲು:ಐಟಿ ಉದ್ಯೋಗಿಗಳಿಗೆ ಎಚ್ಚರಿಕೆಯ ಘಂಟೆ

February 17, 2026
ರೈಲು ಪ್ರಯಾಣಿಕರಿಗೆ ಶುಭ ಸುದ್ದಿ: AI ತಂತ್ರಜ್ಞಾನದ ಮೂಲಕ ಸಂಚರಿಸುವಾಗಲೇ ರೈಲು ಕ್ಲೀನ್
ದೇಶ-ವಿದೇಶ

ರೈಲು ಪ್ರಯಾಣಿಕರಿಗೆ ಶುಭ ಸುದ್ದಿ: AI ತಂತ್ರಜ್ಞಾನದ ಮೂಲಕ ಸಂಚರಿಸುವಾಗಲೇ ರೈಲು ಕ್ಲೀನ್

February 17, 2026
ಸ್ಟಾಕ್ ಬ್ರೋಕರ್‌ಗಳ ಸಾಲದ ಮೇಲೆ RBI ಕಣ್ಣು : ಸ್ಟಾಕ್ ಮಾರ್ಕೆಟ್ ನಲ್ಲಿ ಸಂಚಲನ ಮೂಡಿಸಿದ RBI ಹೊಸ ನಿಯಮ
ಪ್ರಮುಖ ಸುದ್ದಿ

ಸ್ಟಾಕ್ ಬ್ರೋಕರ್‌ಗಳ ಸಾಲದ ಮೇಲೆ RBI ಕಣ್ಣು : ಸ್ಟಾಕ್ ಮಾರ್ಕೆಟ್ ನಲ್ಲಿ ಸಂಚಲನ ಮೂಡಿಸಿದ RBI ಹೊಸ ನಿಯಮ

February 17, 2026
‘ಬೆಂಗಳೂರು ಚಲೋ’ಗೆ ಸಜ್ಜಾದ ಸಾರಿಗೆ ಸಿಬ್ಬಂದಿ: ಫ್ರೀಡಂ ಪಾರ್ಕ್‌ನಲ್ಲಿ ಭಾರೀ ಪ್ರತಿಭಟನೆಗೆ ಸಿದ್ಧತೆ
ಪ್ರಮುಖ ಸುದ್ದಿ

‘ಬೆಂಗಳೂರು ಚಲೋ’ಗೆ ಸಜ್ಜಾದ ಸಾರಿಗೆ ಸಿಬ್ಬಂದಿ: ಫ್ರೀಡಂ ಪಾರ್ಕ್‌ನಲ್ಲಿ ಭಾರೀ ಪ್ರತಿಭಟನೆಗೆ ಸಿದ್ಧತೆ

February 17, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.