Madhya Pradesh : ಮೂರು ವರ್ಷದ ಮಗುವೊಂದು ತನ್ನ ತಾಯಿಯ ಬಗ್ಗೆಯೇ ಪೊಲೀಸರಿಗೆ ದೂರು ನೀಡುವ ವೀಡಿಯೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್(3 year Old lodged Complaint) ಆಗಿದೆ.
ಮಧ್ಯಪ್ರದೇಶದ(Madhya Pradesh) ಬುರ್ಹಾನ್ಪುರ ಜಿಲ್ಲೆಯ ದೆಡ್ತಲೈ ಗ್ರಾಮದಲ್ಲಿ ಈ ಘಟನೆ ವರದಿಯಾಗಿದೆ.
ಇದನ್ನೂ ಓದಿ : https://vijayatimes.com/shahid-afridi-against-jay-shah/
ಹೌದು, ಅಮ್ಮನ ವಿರುದ್ಧವೇ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಈ ಮಗುವಿನ ಹೆಸರು ಸದ್ದಾಂ. ಚಾಕೋಲೇಟ್ ಕೊಡದೇ ಇದ್ದದ್ದಕ್ಕೆ ಅಮ್ಮನ ಮೇಲೆ ಬೇಸರ ಮಾಡಿಕೊಂಡ ಈ ಬಾಲಕ, ಪೊಲೀಸರ ಮೊರೆ(3 year Old lodged Complaint) ಹೋಗಿದ್ದಾನೆ.
ತನ್ನ ತಂದೆಯ ಸಹಾಯದಿಂದ ಪೊಲೀಸ್ ಠಾಣೆಗೆ ಹೋದ ಸದ್ದಾಂ, ತನ್ನ ತಾಯಿಯನ್ನು ಬಂಧಿಸುವಂತೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾನೆ.
ಘಟನೆಯ ವಿವರ ಹೀಗಿದೆ : ಸದ್ದಾಂ ಚಾಕಲೇಟ್‌ಗಳನ್ನು ಹೆಚ್ಚಾಗಿ ತಿನ್ನುತ್ತಿದ್ದರಿಂದ, ಆತನ ತಾಯಿ ಅದನ್ನು ತಡೆದಿದ್ದಾರೆ. ಚಾಕಲೇಟ್ ಕೊಡಲು ನಿರಾಕರಿಸಿದ್ದಾರೆ, ಮಾತು ಕೇಳದ ಸದ್ದಾಂಗೆ ಒಂದೇಟು ಹೊಡೆದಿದ್ದಾರೆ.
ಆಗ ಕೋಪಗೊಂಡ ಮಗು, “ತಾಯಿ ನನ್ನ ತಿಂಡಿ ಕದ್ದು, ನನ್ನ ಕೆನ್ನೆಗೆ ಹೊಡಿದಿದ್ದಾಳೆ, ಪಪ್ಪಾ ನಡಿ ಅಮ್ಮನ ಬಗ್ಗೆ ಪೊಲೀಸರಿಗೆ ಕಂಪ್ಲೆಂಟ್ ಕೊಡೋಣ” ಎಂದು ಹಠ ಮಾಡಿ ಪೊಲೀಸ್ ಠಾಣೆಗೆ ತನ್ನ ಅಪ್ಪನನ್ನು ಕರೆದೊಯ್ದಿದ್ದಾನೆ.
https://fb.watch/gfhno5NCvv/ ವಿಜಯಪುರ : ಭಾರಿ ಮಳೆಗೆ ತತ್ತರಿಸಿದ ರೈತರ ಜೀವನ!
ಈ ಬಗ್ಗೆ ಮಾತನಾಡಿದ ಸದ್ದಾಂ ತಂದೆ “ಮಗು ಊಟ ಮಾಡದೇ ಅತಿಯಾಗಿ ಚಾಕಲೇಟ್ ತಿನ್ನುತ್ತಿದ್ದರಿಂದ, ನನ್ನ ಪತ್ನಿ ಕಾಜಲ್ ಚಾಕಲೇಟ್ ಕೊಡಲಿಲ್ಲ. ಇದು ಸದ್ದಾಂನನ್ನು ಕೆರಳಿಸಿತು.
ಹಾಗಾಗಿ ಅವನು ತನ್ನನ್ನು ಪೊಲೀಸರ ಬಳಿಗೆ ಕರೆದೊಯ್ಯುವಂತೆ ಬಹಳ ಹಠ ಮಾಡಿದ” ಎಂದು ಸದ್ದಾಂ ತಂದೆ ಹೇಳಿದರು.
ವೀಡಿಯೋ ವೀಕ್ಷಿಸಲು ಕ್ಲಿಕ್ ಮಾಡಿ : https://twitter.com/mohdept/status/1582346484955348992?s=20&t=S5McJ8EllxFjVu0A42w5bw
ಇದೀಗ, ಪೊಲೀಸರ ಮುಂದೆ ಮುದ್ದಾದ ಮಗು ತನ್ನ ತಾಯಿಯ ವಿರುದ್ಧ ದೂರು ನೀಡಿದ ಈ ವಿಡಿಯೋ ಭಾರೀ ವೈರಲ್ ಆಗಿದೆ.
ಇನ್ನು ಬಾಲಕ ನೀಡಿದ ದೂರು ಹೀಗಿದೆ, “ಅಮ್ಮ ಕಾಜಲ್ ನನ್ನ ಚಾಕೋಲೇಟ್ ಅನ್ನು ಕದ್ದಿದ್ದಾರೆ, ನಂಗೆ ಚಾಕಲೇಟ್ ಕೊಡದೇ ಹೊಡೆದಿದ್ದಾರೆ” ಎಂದು ಪೊಲೀಸ್ ಠಾಣೆಯಲ್ಲಿ ಬಾಲಕ ದೂರು ದಾಖಲಿಸಿದ್ದಾನೆ.
ಹುಡುಗನ ದೂರನ್ನು ಕೇಳಿದ ಎಲ್ಲರೂ ನಕ್ಕರು ಎಂದು ಸಬ್ ಇನ್ಸ್ಪೆಕ್ಟರ್ ಪ್ರಿಯಾಂಕಾ ನಾಯಕ್ ಹೇಳಿದ್ದಾರೆ.
ನಂತರ ಕೊನೆಯಲ್ಲಿ ಮಗುವಿನಿಂದ ಸಹಿ ಮಾಡಿಸಿಕೊಂಡ ಪೊಲೀಸರು, ಆದಷ್ಟು ಬೇಗ ನಿನ್ನ ಅಮ್ಮನನ್ನು ಬಂಧಿಸಲಾಗುವುದು ಎಂದು ಭರವಸೆ ನೀಡಿ ಕಳುಹಿಸಿದ್ದಾರೆ.

ಬಾಲಕ ದೂರು ನೀಡುವ ಮುದ್ದಾದ ವಿಡಿಯೊ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಅನೇಕರ ಗಮನ ಸೆಳೆದಿದೆ, ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಈ ವಿಡಿಯೋವನ್ನು ನೋಡಿದ ಗೃಹ ಸಚಿವ ಡಾ. ನರೋತ್ತಮ್ ಮಿಶ್ರಾ, ಮಗುವಿಗೆ ವೀಡಿಯೋ ಕರೆ ಮಾಡಿ ಮಾತನಾಡಿದ್ದಾರೆ.
https://youtu.be/J5zku2oo81U ವಿಜಯಟೈಮ್ಸ್ ಬಿಗ್ ಇಂಪ್ಯಾಕ್ಟ್ ! ಕಂಠೀರವ ಸ್ಟೇಡಿಯಂ ತೊಂದರೆಗೆ ಸ್ಪಂದಿಸಿದ ಸಿಎಂ!
ದೀಪಾವಳಿಯಂದು ಮಗುವಿಗೆ ಚಾಕೊಲೇಟ್ ಮತ್ತು ಸೈಕಲ್ ಕಳುಹಿಸುವುದಾಗಿ ಭರವಸೆ ನೀಡುವ ಮೂಲಕ ಬಾಲಕನ ಆಸೆಗಳನ್ನು ಈಡೇರಿಸಿದ್ದಾರೆ.
- ಪವಿತ್ರ