ಸಿಡ್ನಿ, ಡಿ. 09: ನಾಯಕ ವಿರಾಟ್ ಕೊಹ್ಲಿ(85) ಬಿರುಸಿನ ಬ್ಯಾಟಿಂಗ್ ನಡುವೆಯೂ ಬೌಲರ್ಗಳ ಸಮಯೋಚಿತ ಪ್ರದರ್ಶನದಿಂದ 3ನೇ ಟಿ20 ಪಂದ್ಯದಲ್ಲಿ ಭಾರತದ ವಿರುದ್ಧ 12 ರನ್ಗಳ ಗೆಲುವು ಸಾಧಿಸಿದ ಆಸ್ಟ್ರೇಲಿಯಾ ವೈಟ್ ವಾಶ್ ಆಘಾತದಿಂದ ಪಾರಾಯಿತು.
ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತ ಆಸೀಸ್ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆಯಿತು. ಆರಂಭಿಕ ಆಘಾತದ ನಡುವೆಯೂ ಉತ್ತಮ ಪ್ರದರ್ಶನ ನೀಡಿದ ಕಾಂಗರೂ ಪಡೆ, 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 186 ರನ್ ಕಲೆಹಾಕಿತು. ಈ ಸವಾಲು ಬೆನ್ನತ್ತಿದ ಟೀಂ ಇಂಡಿಯಾ, 20 ಓವರ್ನಲ್ಲಿ 7 ವಿಕೆಟ್ ನಷ್ಟಕ್ಕೆ 174 ರನ್ಗಳಿಸಿ, 12 ರನ್ಗಳ ಸೋಲೊಪ್ಪಿಕೊಂಡಿತು. ಇದರೊಂದಿಗೆ ಸರಣಿಯಲ್ಲಿ 2-1ರ ಮುನ್ನಡೆ ಪಡೆದ ಕೊಹ್ಲಿ ಪಡೆ ಸರಣಿ ಗೆದ್ದು ಸಂಭ್ರಮಿಸಿತು.