New Delhi: ದೆಹಲಿ-ಎನ್ಸಿಆರ್ನಲ್ಲಿ (Delhi-NCR) ಸೋಮವಾರ ಬೆಳಗ್ಗೆ 5.36 ಸುಮಾರಿಗೆ ಭೂಮಿ ಕಂಪಿಸಿದೆ. 4.0 ತೀವ್ರತೆಯ ಭೂಕಂಪ (Earthquake) ಸಂಭವಿಸಿದ್ದು, ಭೂಮಿಯ ಕಂಪನಕ್ಕೆ ಜನರು ಬೆಚ್ಚಿ ಬಿದ್ದಿದ್ದಾರೆ.ದೆಹಲಿ (Delhi), ನೋಯ್ಡಾ (Noida), ಗಾಜಿಯಾಬಾದ್ (Ghaziabad) ಮತ್ತು ಗುರುಗ್ರಾಮ (Gurugram) ಸೇರಿದಂತೆ ಹಲವು ಪ್ರದೇಶಗಳಲ್ಲಿ ಜನರು ಪ್ರಬಲ ಭೂಕಂಪನದ ಅನುಭವವನ್ನು (An earthquake experience) ಅನುಭವಿಸಿದ್ದಾರೆ.
ಭೂಮಿಯ ಕಂಪನಕ್ಕೆ ಬೆದರಿದ ಜನರು ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ. ಭೂಕಂಪನದಿಂದ ಯಾವುದೇ ಹಾನಿಯಾದ (Damaged) ಬಗ್ಗೆ ವರದಿಯಾಗಿಲ್ಲ. 5 ಕಿಲೋಮೀಟರ್ ಆಳದಲ್ಲಿ ಭೂಮಿ ಕಂಪಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (National Seismological Center) (NCS) ತಿಳಿಸಿದೆ.ದೆಹಲಿ-ಎನ್ಸಿಆರ್ (Delhi-NCR) ಜೊತೆಗೆ, ಉತ್ತರ ಪ್ರದೇಶದ ಮೊರಾದಾಬಾದ್ (Moradabad in Uttar Pradesh), ಸಹರಾನ್ಪುರ (Saharanpur), ಅಲ್ವಾರ್ (Alwar), ಮಥುರಾ (Mathura) ಮತ್ತು ಆಗ್ರಾದಲ್ಲಿ (Agra) ಬಲವಾದ ಕಂಪನಗಳು ಸಂಭವಿಸಿವೆ. ಹರಿಯಾಣದ ಕುರುಕ್ಷೇತ್ರ (Kurukshetra), ಹಿಸಾರ್ (Hisar), ಕೈಥಾಲ್ನಲ್ಲಿ (Kaithal) ಕಂಪನದ ಅನುಭವವಾಗಿದೆ. ಆದಾಗ್ಯೂ, ಇಲ್ಲಿಯವರೆಗೆ ಯಾವುದೇ ರೀತಿಯ ಸಾವು ನೋವಿನ ಸುದ್ದಿ ಕೇಳಿ ಬಂದಿಲ್ಲ.

ಭೂಕಂಪದ ಬಲವಾದ ಕಂಪನಗಳ ನಂತರ ದೆಹಲಿ ಪೊಲೀಸರು (Delhi Police) ತುರ್ತು ಸಹಾಯವಾಣಿ ಸಂಖ್ಯೆಯನ್ನು (Emergency helpline number) ನೀಡಿದ್ದಾರೆ. ದೆಹಲಿ ಪೊಲೀಸರು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ (Post on Instagram) ಮಾಡಿ, ನೀವೆಲ್ಲರೂ ಸುರಕ್ಷಿತರಾಗಿದ್ದೀರಿ ಎಂದು ಭಾವಿಸುತ್ತೇವೆ. ಯಾವುದೇ ತುರ್ತು ಸಹಾಯಕ್ಕಾಗಿ (For emergency assistance) 112 ಗೆ ಕರೆ ಮಾಡುವ ಮೂಲಕ ನಮ್ಮನ್ನು ಸಂಪರ್ಕಿಸಿ ಎಂದು ತಿಳಿಸಿದ್ದಾರೆ. ಇನ್ನು ಭೂಕಂಪನ ಕುರಿತು ಸಾಮಾಜಿಕ ಜಾಲತಾಣ (Social network) ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿಯವರು (Prime Minister Modi), ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭೂಕಂಪನದ ಅನುಭವವಾಗಿದೆ. ಪ್ರತಿಯೊಬ್ಬರೂ ಶಾಂತವಾಗಿರಲು ಮತ್ತು ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ಅನುಸರಿಸಲು ಮತ್ತು ಸಂಭವನೀಯ ಭೂಕಂಪಗಳ ಬಗ್ಗೆ ಎಚ್ಚರದಿಂದಿರುವಂತೆ ಮನವಿ ಮಾಡಿದ್ದಾರೆ. ಅಲ್ಲದೆ, ಅಧಿಕಾರಿಗಳು (Officers) ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.