ಉಖ್ರುಲ್, ಮೇ. 24: ಮಣಿಪುರದ ಉಖ್ರುಲ್ನಲ್ಲಿ ಇಂದು ಬೆಳಗ್ಗೆ 6.56ಕ್ಕೆ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 4.3ರಷ್ಟು ತೀವ್ರತೆ ದಾಖಲಿಸಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ.
109 ಕಿ.ಮೀ ಆಳದಲ್ಲಿ ಉಖ್ರುಲ್ನ ಪೂರ್ವ-ಆಗ್ನೇಯಕ್ಕೆ 49 ಕಿ.ಮೀ ಭೂಕಂಪ ಸಂಭವಿಸಿದೆ. ಸ್ಥಳದ ಅಕ್ಷಾಂಶ ಮತ್ತು ರೇಖಾಂಶವನ್ನು 24.79 ಮತ್ತು 94.94 ಎಂದು ದಾಖಲಿಸಲಾಗಿದೆ. ಇನ್ನು ಕೆಲವರಿಗೆ ಭೂಮಿ ಕಂಪಿಸಿದ ಅನುಭವವಾಗಿದ್ದು ಜನ ಆತಂಕಕ್ಕೆ ಒಳಗಾಗಿದ್ದಾರೆ.
ಕೊರೊನಾ ನಡುವೆ ಇತ್ತೀಚೆಗೆ ಚಂಡ ಮಾರುತಗಳ ಅಬ್ಬರ ಹೆಚ್ಚಾಗುತ್ತಿದ್ದು ಇದರ ನಡುವೆ ಭೂಕಂಪವಾಗಿದ್ದು ಈಶಾನ್ಯ ರಾಜ್ಯದಲ್ಲಿ ಆತಂಕ ಹೆಚ್ಚಿಸಿದೆ.