ಭೊಪಾಲ್: ಕೋವಿಡ್ ಮಹಾಮಾರಿಯಿಂದ ಎಲ್ಲರೂ ಕಂಗೆಟ್ಟಿರುವ ಬೆನ್ನಲ್ಲೆ ಮಧ್ಯ ಪ್ರದೇಶಕ್ಕೆ ಹೊಸ ತಲೆನೋವು ಎದುರಾಗಿದ್ದು, ಕೋವಿಡ್ ರೋಗಿಗಳಿಗೆ ನೀಡುತ್ತಿದ್ದ ಆಮ್ಲಜಕ ಮಹಾರಾಷ್ಟ್ರಾದಿಂದ ಸೂಕ್ತ ಸಮಯದಲ್ಲಿ ಪೂರೈಕೆಯಾಗದ ಹಿನ್ನೆಲಯಲ್ಲಿ ನಾಲ್ವರು ಮೃತಪಟ್ಟ ಘಟನೆ ವರದಿಯಾಗಿದೆ.
ದಿವಾಸ್ ಜಿಲ್ಲೆಯ ಅಮಲ್ತಾಸ್ ವೈದ್ಯಕೀಯ ವಿಜ್ಞಾನ ಶಿಕ್ಷಣ ಸಂಸ್ಥೆಯಲ್ಲಿ ದಾಖಲಾಗಿದ್ದ ನಾಲ್ವರು ಸೂಕ್ತ ಆಮ್ಲಜನಕದ ಪೂರೈಕೆಯಾಗದ ಹಿನ್ನೆಲೆಯಲ್ಲಿ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಕೋವಿಡ್ನಿಂದಾಗಿ ಅಮಲ್ತಾಸ್ ವೈದ್ಯಕೀಯ ವಿಜ್ಞಾನ ಶಿಕ್ಷಣ ಸಂಸ್ಥೆಯನ್ನು ಕೋವಿಡ್ ಸೆಂಟರ್ ಆಗಿ ಪರಿವರ್ತಿಸಲಾಗಿತ್ತು. ಇಲ್ಲಿನ ಕೋವಿಡ್ ರೋಗಿಗಳಿಗೆ ವೆಂಟಿಲೇಟರ್ಗಳನ್ನು ಅಸಮರ್ಪಕವಾಗಿ ಪೂರೈಸಿದ ಹಿನ್ನೆಲಯಲ್ಲಿ ನಾಲ್ವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಆದರೆ ಆಮ್ಲಜನಕದ ಪೂರೈಕೆಯಲ್ಲಿನ ಕೊರತೆಯನ್ನು ಒಪ್ಪಿಕೊಂಡಿರುವ ಸರಕಾರ ಅಮಲ್ತಾಸ್ ಆಸ್ಪತ್ರೆಯಲ್ಲಿ ನಡೆದ ಘಟನೆಯಲ್ಲಿ ಆಮ್ಲಜನಕದ ಕೊರತಯಿರುವುದನ್ನು ತಿರಸ್ಕರಿಸಿದೆ. ” ಪ್ರತಿನಿತ್ಯ ಅಮಲ್ತಾಸ್ ಆಸ್ಪತ್ರೆಯಲ್ಲಿ ಕನಿಷ್ಟವೆಂದರೂ 200 ಸಿಲಿಂಡರ್ಗಳ ಬಳಕೆಯಾಗುತ್ತದೆ. ಹೀಗಾಗಿ ನಾವು 400 ಸಿಲಿಂಡರ್ಗಳನ್ನು ಆಸ್ಪತ್ರೆಗೆ ನೀಡಿದ್ದೇವೆ. ಹೀಗಾಗಿ ಆಮ್ಲಜನಕದ ಪೂರೈಕೆಯಲ್ಲಿ ಯಾವುದೇ ಲೋಪಗಳಿಲ್ಲ” ಮುಖ್ಯ ವೈದ್ಯಾಧಿಕಾರಿ ಎಂಪಿ ಶರ್ಮ ಹೇಳಿದ್ದಾರೆ.
ಮಧ್ಯಪ್ರದೇಶದಲ್ಲಿ ಆಮ್ಲಜನಕದ ಕೊರೆತೆ ಕೋವಿಡ್ ಆರಂಭದಿಂದಲು ಇದ್ದು ಹೀಗಾಗಿ ರಾಜ್ಯಕ್ಕೆ ಮಹರಾಷ್ಟ್ರಾದಿಂದ ಆಮ್ಲಜನಕ ಪೂರೈಸಲಾಗುತ್ತಿದೆ. ಇಲ್ಲೂ ಸಾಕಷ್ಟ ವ್ಯತ್ಯಯ ಕಂಡು ಬಂದ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಛೌಹಾಣ್ ಮಹಾ ಸರಕಾರಕ್ಕೆ ಈಗಾಗಲೇ ಮನವಿ ಪತ್ರವನ್ನು ಸಲ್ಲಿಸಿದ್ದರು.