4 ಕಾಲುಗಳಿರುವ ವ್ಯಕ್ತಿಯನ್ನು ನೀವು ನೋಡಿದ್ದೀರಾ? ಹೌದು, ಆಶ್ಚರ್ಯ ಆದರೂ ಇದು ಸತ್ಯವೇ. ಅಮೆರಿಕದ(America) ಟೆನ್ನೆಸ್ಸೀ(Tenesee) ನಗರದಲ್ಲಿ 1868 ರಲ್ಲಿ ಒಂದು ಹುಡುಗಿ ಜನಿಸಿದ್ದಳು.
ಈ ಹುಡುಗಿಗೆ ಎರಡಲ್ಲ ಒಟ್ಟು ನಾಲ್ಕು ಕಾಲುಗಳಿದ್ದವು. ಈ ಹುಡುಗಿಯ ಹೆಸರು ಮಿರ್ಟಲ್ ಕಾರ್ಬಿನ್(Myrtle Corbin). ತನ್ನ ನಾಲ್ಕು ಕಾಲುಗಳಿಂದಲೇ ಪ್ರಸಿದ್ಧವಾದ ಮಹಿಳೆ ಈಕೆ. ಮಿರ್ಟಲ್ ಹೊಂದಿದ್ದ ನಾಲ್ಕು ಕಾಲುಗಳಲ್ಲಿ ಎರಡು ಕಾಲುಗಳು ನಾರ್ಮಲ್ ಆಗಿವೆ ಮತ್ತು ಉಳಿದೆರಡು ಕಾಲುಗಳು ಚಿಕ್ಕದಾಗಿದ್ದು ಬಹಳ ದುರ್ಬಲವಾಗಿವೆ ಎಂದು ವೈದ್ಯರು ತಿಳಿಸಿದ್ದರು. ಅವಳು ತನ್ನ ಎರಡು ಬಲವಾದ ಕಾಲುಗಳ ಸಹಾಯದಿಂದ ದೈನಂದಿನ ಜೀವನವನ್ನ ಚೆನ್ನಾಗಿಯೇ ನಿಭಾಯಿಸುತ್ತಿದ್ದಳು.
ಅವರಿಗೆ ನಡೆಯಲು ಯಾವುದೇ ತೊಂದರೆ ಇರಲಿಲ್ಲ, ಆದರೆ ಅವರು ಹೋದಲ್ಲೆಲ್ಲಾ ಎಲ್ಲರೂ ಅವರನ್ನು ಸುತ್ತುವರೆದು ಆಶ್ಚರ್ಯಕರ ರೀತಿಯಲ್ಲಿ ನೋಡುತ್ತಿದ್ದರು. ಜನರ ಈ ಕುತೂಹಲದ ಕಾರಣದಿಂದಾಗಿ ಅವರಿಗೆ ಕೆಲವೊಮ್ಮೆ ಮುಜುಗರವಾಗ್ತಿತ್ತಂತೆ. ಮಿರ್ಟಲ್ ಕಾರ್ಬಿನ್ ಅವರು ವಿಶ್ವಾದ್ಯಂತ ‘ನಾಲ್ಕು ಕಾಲಿನ ಮಹಿಳೆ’ ಎಂದೇ ಪ್ರಖ್ಯಾತರಾಗಿದ್ದರು. ಮಿರ್ಟಲ್ ಅವರು 13 ವರ್ಷದವಳಿದ್ದಾಗ, ಅವಳ ಜೀವನವನ್ನು ಆಧರಿಸಿ ‘ಬಯಾಗ್ರಫಿ ಆಫ್ ಮಿರ್ಟಲ್ ಕಾರ್ಬಿನ್’ ಎನ್ನುವ ಪುಸ್ತಕವನ್ನು ಬರೆಯಲಾಗಿತ್ತು.
ಮಿರ್ಟಲ್ ಅವರ ಜೀವನ ಚರಿತ್ರೆಯಾಗಿದ್ದ ಈ ಪುಸ್ತಕವನ್ನು ಜನರು ಮುಗಿಬಿದ್ದು ಖರೀದಿಸಿದರು. ಹಾಗಾಗಿ ಈ ಪುಸ್ತಕ ಆ ಸಮಯದಲ್ಲಿ ಪುಸ್ತಕ ಗಳಿಕೆಯ ಎಲ್ಲಾ ದಾಖಲೆಗಳನ್ನು ಮುರಿದಿತ್ತು. ಇನ್ನು ಇವರ ವೈಯಕ್ತಿಕ ಜೀವನದ ಬಗ್ಗೆ ನೋಡುವುದಾದರೆ, ಮಿರ್ಟಲ್ ಅವರು ಜೇಮ್ಸ್ ಕ್ಲಿಂಟನ್ ಬಿಕ್ನೆಲ್ ಅವರನ್ನು 19ನೇ ವಯಸ್ಸಿನಲ್ಲಿ ವಿವಾಹವಾದರು. ಮಿರ್ಟಲ್‌ಗೆ ನಾಲ್ಕು ಹೆಣ್ಣು ಮಕ್ಕಳು ಮತ್ತು ಒಬ್ಬ ಮಗ ಇದ್ದರು. ಮಿರ್ಟಲ್ ಅವರಿಗೆ ಒಬ್ಬ ಸಹೋದರಿಯೂ ಇದ್ದರು, ಇವರನ್ನು ಜೇಮ್ಸ್ ಕ್ಲಿಂಟನ್ ಬಿಕ್ನೆಲ್ ಅವರು ವಿವಾಹವಾಗಿದ್ದರು.
ಇಷ್ಟೊಂದು ಖ್ಯಾತರಾದ ಮಿರ್ಟಲ್ ಅವರು, 1928 ರಲ್ಲಿ ತಮ್ಮ 60ನೇ ವಯಸ್ಸಿನಲ್ಲಿ ಈ ಪ್ರಪಂಚಕ್ಕೆ ವಿದಾಯ ಹೇಳಿ ಕಣ್ಮರೆಯಾದರು.