- ನಾಳೆಯಿಂದ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ಬದಲಾವಣೆ
- ಯುಪಿಐ ವಹಿವಾಟಿನಲ್ಲಿ ಕೂಡ ಮಹತ್ವದ ಬದಲಾವಣೆಗಳು
- ರೈಲ್ವೆ ಟಿಕೆಟ್ ಬುಕ್ಕಿಂಗ್ ನಿಯಮಗಳಲ್ಲಿ ಬದಲಾವಣೆ (4 new rules to come into effect from October 1)
ಸಾಮಾನ್ಯವಾಗಿ ಪ್ರತಿ ತಿಂಗಳ ಆರಂಭದಲ್ಲಿ ಕೆಲವು ನಿಯಮಗಳು ಬದಲಾಗುತ್ತವೆ. ಈ ಬದಲಾವಣೆಗಳು ಜನಸಾಮಾನ್ಯರ ದೈನಂದಿನ ಜೀವನ ಮತ್ತು ಹಣಕಾಸು ನಿರ್ವಹಣೆಗೆ ನೇರ ಪರಿಣಾಮ ಬೀರುತ್ತವೆ.
ಸೆಪ್ಟೆಂಬರ್ ಅಂತ್ಯಗೊಳ್ಳುತ್ತಿದ್ದು, ಅಕ್ಟೋಬರ್ 1ರಿಂದ ದೇಶದಲ್ಲಿ ನಾಲ್ಕು ಪ್ರಮುಖ ಕ್ಷೇತ್ರಗಳಲ್ಲಿ ಹೊಸ ನಿಯಮಗಳು ಜಾರಿಯಾಗಲಿವೆ.ಈ ಬದಲಾವಣೆಗಳು ಎಲ್‌ಪಿಜಿ ಸಿಲಿಂಡರ್ ಬೆಲೆ,
ರೈಲ್ವೆ ಟಿಕೆಟ್ ಬುಕ್ಕಿಂಗ್ ನಿಯಮಗಳು, ಯುಪಿಐ ವಹಿವಾಟು ಮತ್ತು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಗೆ ಸಂಬಂಧಿಸಿದಂತಿವೆ. ಪ್ರತಿಯೊಂದು ಬದಲಾವಣೆ ಜನರ ಆರ್ಥಿಕ ಸ್ಥಿತಿಗೆ ಪ್ರಭಾವ ಬೀರುವಂತದ್ದಾಗಿದೆ.
ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ ಯಾವತ್ತೂ ಗಮನ ಸೆಳೆಯುವ ವಿಷಯ. ಕಳೆದ ಕೆಲವು ತಿಂಗಳುಗಳಲ್ಲಿ 19 ಕೆಜಿ ಸಿಲಿಂಡರ್ ಬೆಲೆಯನ್ನು ಕಡಿತಗೊಳಿಸಲಾಗಿತ್ತು.
ಈ ಬಾರಿ ಅಕ್ಟೋಬರ್‌ನಲ್ಲಿ 14 ಕೆಜಿ ಗೃಹ ಬಳಕೆಯ ಸಿಲಿಂಡರ್ ಬೆಲೆ ಇಳಿಯುವ ನಿರೀಕ್ಷೆಯಿದೆ. ಹಬ್ಬದ ಕಾಲದಲ್ಲಿ ಬೆಲೆ ಇಳಿದರೆ ಮನೆಮಠಗಳಿಗೆ ಆರ್ಥಿಕ ಭಾರ ಕಡಿಮೆಯಾಗುತ್ತದೆ.
ಆದರೆ ಅಂತಿಮ ನಿರ್ಧಾರವನ್ನು ಸರ್ಕಾರ ನಾಳೆ ಪ್ರಕಟಿಸಲಿದೆ. ಹೀಗಾಗಿ, ಬೆಲೆ ಏರಿಕೆ ಅಥವಾ ಇಳಿಕೆಯಿಂದ ನೇರವಾಗಿ ಲಕ್ಷಾಂತರ ಕುಟುಂಬಗಳಿಗೆ ಪರಿಣಾಮ ಬೀರುತ್ತದೆ.

ಇನ್ನು ಪ್ರಯಾಣಿಕರಿಗೆ ಟಿಕೆಟ್ ಲಭ್ಯತೆ ದೊಡ್ಡ ಸವಾಲಾಗಿ ಪರಿಣಮಿಸುತ್ತಿತ್ತು. ವಿಶೇಷವಾಗಿ ತತ್ಕಾಲ್ ಟಿಕೆಟ್‌ಗಳಲ್ಲಿ ಅನಧಿಕೃತ ಚಟುವಟಿಕೆಗಳು ಹೆಚ್ಚಾಗಿದ್ದವು.
ಇದನ್ನು ತಡೆಯಲು ಭಾರತೀಯ ರೈಲ್ವೆ ಇಲಾಖೆ ಹೊಸ ನಿಯಮ ಜಾರಿಗೆ ತರುತ್ತಿದೆ.ಅಕ್ಟೋಬರ್ 1ರಿಂದ, IRCTC ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿರುವವರಿಗೆ ಮಾತ್ರ
ಕೌಂಟರ್ ತೆರೆದ 15 ನಿಮಿಷಗಳೊಳಗೆ ಟಿಕೆಟ್ ಬುಕ್ ಮಾಡುವ ಅವಕಾಶ ದೊರೆಯಲಿದೆ.ಈ ನಿಯಮವನ್ನು ಈಗಾಗಲೇ ತತ್ಕಾಲ್ ಬುಕ್ಕಿಂಗ್‌ಗಳಲ್ಲಿ ಬಳಸಲಾಗುತ್ತಿತ್ತು.
ಆದರೆ ಮುಂದೆ ಇದು ಇನ್ನಷ್ಟು ವ್ಯಾಪಕವಾಗಿ ಜಾರಿಯಾಗುವ ಸಾಧ್ಯತೆ ಇದೆ. ಇದರ ಉದ್ದೇಶ ಟಿಕೆಟ್ ವಂಚನೆ ಕಡಿಮೆ ಮಾಡುವುದು ಮತ್ತು ಸಾಮಾನ್ಯ ಪ್ರಯಾಣಿಕರಿಗೆ ನ್ಯಾಯಸಮ್ಮತವಾಗಿ
ಟಿಕೆಟ್ ದೊರಕುವಂತೆ ಮಾಡುವುದು. ಅಲ್ಲದೆ ಡಿಜಿಟಲ್ ಪಾವತಿಗಳ ಬಳಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. PhonePe, Google Pay, Paytm ಮುಂತಾದ ಅಪ್ಲಿಕೇಶನ್‌ಗಳು ಜನರ
ದೈನಂದಿನ ಜೀವನದ ಅವಿಭಾಜ್ಯ ಭಾಗವಾಗಿವೆ. ಆದರೆ ಅಕ್ಟೋಬರ್ 1ರಿಂದ ಯುಪಿಐ ಬಳಕೆಯಲ್ಲೂ ಬದಲಾವಣೆ ಜಾರಿಯಾಗಲಿದೆ.
NPCI ಪ್ರಕಟಿಸಿದ ಹೊಸ ನಿಯಮದ ಪ್ರಕಾರ, P2P (Person to Person) ವಹಿವಾಟು ಸೌಲಭ್ಯವನ್ನು ಸೀಮಿತಗೊಳಿಸಲಾಗುತ್ತಿದೆ. ಅಂದರೆ, ನೇರವಾಗಿ ಒಬ್ಬರಿಂದ ಮತ್ತೊಬ್ಬರಿಗೆ ಹಣ ಕಳುಹಿಸುವ
ವ್ಯವಸ್ಥೆಯನ್ನು ತೆಗೆದುಹಾಕಲಾಗುತ್ತಿದೆ.ಈ ನಿರ್ಧಾರದ ಪ್ರಮುಖ ಉದ್ದೇಶ ಸುರಕ್ಷತೆ. ಆನ್‌ಲೈನ್ ವಂಚನೆಗಳನ್ನು(Online scams) ತಡೆಗಟ್ಟುವುದು ಮತ್ತು ಬಳಕೆದಾರರ ಹಣವನ್ನು ರಕ್ಷಿಸುವುದು ಇದರ ಆಶಯ.
ಪ್ರಾರಂಭದಲ್ಲಿ ಸ್ವಲ್ಪ ಅಸೌಕರ್ಯ ಉಂಟಾಗಬಹುದು, ಆದರೆ ದೀರ್ಘಾವಧಿಯಲ್ಲಿ ಇದು ಆರ್ಥಿಕ ಸುರಕ್ಷತೆಯನ್ನು ಬಲಪಡಿಸುವ ನಿರೀಕ್ಷೆಯಿದೆ.
ಕೊನೆಯದಾಗಿ ಸರ್ಕಾರೇತರ ಉದ್ಯೋಗಿಗಳಿಗೆ NPS ಪ್ರಮುಖ ನಿವೃತ್ತಿ ಯೋಜನೆಯಾಗಿದೆ. ಇದರಲ್ಲಿ ಅಕ್ಟೋಬರ್ 1ರಿಂದ ಹೊಸ ಬದಲಾವಣೆ ಜಾರಿಯಾಗುತ್ತಿದೆ.
ಇದುವರೆಗೆ, ಸರ್ಕಾರೇತರ ಉದ್ಯೋಗಿಗಳು ತಮ್ಮ ಪಿಂಚಣಿ ಮೊತ್ತದ ಗರಿಷ್ಠ 75% ವರೆಗೆ ಮಾತ್ರ ಈಕ್ವಿಟಿ ಆಧಾರಿತ ಹೂಡಿಕೆ ಮಾಡಬಹುದಾಗಿತ್ತು. ಆದರೆ ನಾಳೆಯಿಂದ ಅವರು ತಮ್ಮ
ಸಂಪೂರ್ಣ ಮೊತ್ತವನ್ನು (100%) Equity ಯೋಜನೆಗಳಲ್ಲಿ ಹೂಡಿಕೆ ಮಾಡಲು ಅವಕಾಶ ಪಡೆಯಲಿದ್ದಾರೆ.ಇದು ಹೆಚ್ಚಿನ ಲಾಭದ ಸಾಧ್ಯತೆಯನ್ನು ನೀಡುವಂತಿದ್ದರೂ ಅಪಾಯ ಸಹ ಹೆಚ್ಚಿರುತ್ತದೆ.
ಹೀಗಾಗಿ ಉದ್ಯೋಗಿಗಳು ತಮ್ಮ ವಯಸ್ಸು, ಆದಾಯ ಮತ್ತು ಭವಿಷ್ಯದ ಯೋಜನೆಗಳನ್ನು ಗಮನಿಸಿ ಹೂಡಿಕೆ ಮಾಡುವುದು ಸೂಕ್ತ.
ಇದನ್ನು ಓದಿ: ಇ-ಖಾತಾ ನೋಂದಣಿಯಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ಹೊಸ ಪ್ರಯೋಗ, ಮೊಬೈಲ್ ಆ್ಯಪ್ ಪರಿಚಯಿಸಲು ಜಿಬಿಎ ತಯಾರಿ
ಜೊತೆಗೆ, PRAN (Permanent Retirement Account Number) ತೆರೆಯಲು ಖಾಸಗಿ ವಲಯದ ಉದ್ಯೋಗಿಗಳು ಶುಲ್ಕವನ್ನು ಪಾವತಿಸಬೇಕಾಗುತ್ತದೆ. (4 new rules to come into effect from October 1)