• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ದೇಶ-ವಿದೇಶ

IEA ಇತಿಹಾಸದಲ್ಲಿ ಮೊದಲ ಬಾರಿ 400 ಮಿಲಿಯನ್ ಬ್ಯಾರೆಲ್ ತೈಲ ಬಿಡುಗಡೆಗೆ 32 ರಾಷ್ಟ್ರಗಳ ಒಪ್ಪಿಗೆ

Teju Srinivas by Teju Srinivas
in ದೇಶ-ವಿದೇಶ, ಪ್ರಮುಖ ಸುದ್ದಿ, ವಿಜಯ ಟೈಮ್ಸ್‌
IEA ಇತಿಹಾಸದಲ್ಲಿ ಮೊದಲ ಬಾರಿ 400 ಮಿಲಿಯನ್ ಬ್ಯಾರೆಲ್ ತೈಲ ಬಿಡುಗಡೆಗೆ 32 ರಾಷ್ಟ್ರಗಳ ಒಪ್ಪಿಗೆ
0
SHARES
19
VIEWS
Share on FacebookShare on Twitter
  • ಇತಿಹಾಸದಲ್ಲೇ ಮೊದಲ ಬಾರಿ 400 ಮಿಲಿಯನ್ ಬ್ಯಾರೆಲ್ ತೈಲ (400 million barrels of oil release) ಮಾರುಕಟ್ಟೆಗೆ ಬಿಡುಗಡೆ ಮಾಡಲು ಸದಸ್ಯ ರಾಷ್ಟ್ರಗಳ ನಿರ್ಧಾರ
  • ಇರಾನ್ ಪರಿಸ್ಥಿತಿ ತೀವ್ರ; ಇಂಧನ ಸರಬರಾಜು ಸ್ಥಿರಗೊಳಿಸಲು 32 ದೇಶಗಳ ಒಕ್ಕೂಟ ನಿರ್ಧಾರ
  • ಹಾರ್ಮುಜ್ ಜಲಸಂಧಿ ಸಮಸ್ಯೆಯಿಂದ ತೈಲ ಕೊರತೆ ಭೀತಿ; IEA ತುರ್ತು ದಾಸ್ತಾನು ಬಿಡುಗಡೆಗೆ ಒಪ್ಪಿಗೆ

Paris: ಮಧ್ಯಪ್ರಾಚ್ಯದಲ್ಲಿ ಉಲ್ಬಣಗೊಂಡಿರುವ ಇರಾನ್‌ ಸಂಬಂಧಿತ ಯುದ್ಧ ಪರಿಸ್ಥಿತಿ ಜಾಗತಿಕ (400 million barrels of oil release) ಇಂಧನ ಮಾರುಕಟ್ಟೆಯ ಮೇಲೆ ಗಂಭೀರ ಪರಿಣಾಮ ಬೀರಿದ್ದು, ತೈಲ ಪೂರೈಕೆ ಸರಪಳಿಯಲ್ಲಿ ದೊಡ್ಡ ಮಟ್ಟದ ಅಡಚಣೆ ಉಂಟಾಗಿದೆ.

ಈ ಹಿನ್ನೆಲೆಯಲ್ಲಿ ಅಂತರರಾಷ್ಟ್ರೀಯ ಇಂಧನ ಸಂಸ್ಥೆ (IEA) ಮಹತ್ವದ ಕ್ರಮಕ್ಕೆ ಮುಂದಾಗಿದೆ. ತುರ್ತು ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು IEAಗೆ

ಸದಸ್ಯರಾಗಿರುವ 32 ರಾಷ್ಟ್ರಗಳು ಒಟ್ಟಾಗಿ ಸುಮಾರು 400 ಮಿಲಿಯನ್ ಬ್ಯಾರೆಲ್ ತೈಲವನ್ನು ತಮ್ಮ ತುರ್ತು ದಾಸ್ತಾನಿನಿಂದ ಬಿಡುಗಡೆ ಮಾಡಲು ಒಪ್ಪಿಗೆ ಸೂಚಿಸಿವೆ.

400 million barrels of oil release

ಜಾಗತಿಕ ಇಂಧನ ಮಾರುಕಟ್ಟೆಯನ್ನು ಸ್ಥಿರಗೊಳಿಸಲು ಕೈಗೊಳ್ಳಲಾದ ಈ ಕ್ರಮ IEA ಇತಿಹಾಸದಲ್ಲೇ ಅತಿ ದೊಡ್ಡ ಸಮೂಹ ತೈಲ ಬಿಡುಗಡೆ ಎಂದು ಪರಿಗಣಿಸಲಾಗುತ್ತಿದೆ.

ಮಧ್ಯಪ್ರಾಚ್ಯದಲ್ಲಿ ಉಂಟಾದ ಉದ್ವಿಗ್ನ ಪರಿಸ್ಥಿತಿಯಿಂದ ವಿಶೇಷವಾಗಿ ಹಾರ್ಮುಜ್ ಜಲಸಂಧಿ (400 million barrels of oil release) ಪ್ರಮುಖವಾಗಿ ಪ್ರಭಾವಿತವಾಗಿದೆ.

ಜಗತ್ತಿನ ಬಹುಪಾಲು ಕಚ್ಚಾ ತೈಲ ಸಾಗಾಟ ಈ ಜಲಸಂಧಿಯ ಮೂಲಕವೇ ನಡೆಯುತ್ತದೆ.

ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆ ಇರಾನ್ ಈ ಮಾರ್ಗವನ್ನು ತಾತ್ಕಾಲಿಕವಾಗಿ ಬಂದ್‌ ಮಾಡಿರುವುದರಿಂದ ಕಚ್ಚಾ ತೈಲ ಸಾಗಾಟಕ್ಕೆ ಅಡ್ಡಿಯಾಗಿದ್ದು, ಅನೇಕ ದೇಶಗಳ ಸಂಸ್ಕರಣಾಗಾರಗಳಿಗೆ ಕಚ್ಚಾ ತೈಲ ತಲುಪುವಿಕೆಯಲ್ಲಿ ವ್ಯತ್ಯಯ ಉಂಟಾಗಿದೆ.

ಇದರ ಪರಿಣಾಮವಾಗಿ ಜಾಗತಿಕ ಮಟ್ಟದಲ್ಲಿ ಪೆಟ್ರೋಲ್‌, ಡೀಸೆಲ್‌ ಹಾಗೂ LPG ಬೆಲೆಗಳಲ್ಲಿ ಏರಿಕೆ ಕಾಣುವ ಸಾಧ್ಯತೆ ಹೆಚ್ಚಾಗಿದೆ.

ಈ ಪರಿಸ್ಥಿತಿಯನ್ನು ನಿಯಂತ್ರಿಸಲು ತುರ್ತು ದಾಸ್ತಾನಿನ ತೈಲವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ನಿರ್ಧಾರಕ್ಕೆ ಸದಸ್ಯ ರಾಷ್ಟ್ರಗಳು ಸಮ್ಮತಿ ನೀಡಿವೆ.

IEA ಸದಸ್ಯ ರಾಷ್ಟ್ರಗಳ ಒಟ್ಟಾರೆ ತುರ್ತು ತೈಲ ದಾಸ್ತಾನು ಸುಮಾರು 1.2 ಶತಕೋಟಿ ಬ್ಯಾರೆಲ್‌ಗಳಿಗಿಂತ (Barrel) ಹೆಚ್ಚಾಗಿದೆ. ಇದಲ್ಲದೆ ಕೈಗಾರಿಕಾ ಬಳಕೆಗೆ ಸುಮಾರು 600 ಮಿಲಿಯನ್ ಬ್ಯಾರೆಲ್ ತೈಲ ಸಂಗ್ರಹವೂ ಲಭ್ಯವಿದೆ.

ಈ ಹಿನ್ನೆಲೆ ಜಾಗತಿಕ ಮಾರುಕಟ್ಟೆಗೆ ತಾತ್ಕಾಲಿಕವಾಗಿ ಸ್ಥಿರತೆ ನೀಡಲು ಮೊದಲ ಹಂತದಲ್ಲಿ 400 ಮಿಲಿಯನ್ ಬ್ಯಾರೆಲ್ ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ.

ಈ ಕ್ರಮದಿಂದ ತೈಲದ ಸರಬರಾಜಿನಲ್ಲಿ ಉಂಟಾದ ತಾತ್ಕಾಲಿಕ ಕೊರತೆಯನ್ನು ಕಡಿಮೆ ಮಾಡುವ ಜೊತೆಗೆ ಬೆಲೆ ಏರಿಕೆಯನ್ನು ನಿಯಂತ್ರಿಸುವ ಉದ್ದೇಶವೂ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

1974ರಲ್ಲಿ ಸ್ಥಾಪಿತವಾದ IEA ಇತಿಹಾಸದಲ್ಲಿ ಇಂತಹ ಸಂಘಟಿತ ತೈಲ ಬಿಡುಗಡೆ ಇದು ಆರನೇ ಬಾರಿ. ಇದಕ್ಕೂ ಮುನ್ನ 1991ರ ಗಲ್ಫ್ ಯುದ್ಧದ ಸಮಯದಲ್ಲಿ, 2005ರಲ್ಲಿ ಅಮೆರಿಕದ ಹರಿಕೇನ್ ಕತ್ರಿನಾ ಪರಿಣಾಮವಾಗಿ, 2011ರಲ್ಲಿ ಲಿಬಿಯಾ ಸಂಕಷ್ಟದ ಸಂದರ್ಭದಲ್ಲಿ ಹಾಗೂ 2022ರಲ್ಲಿ ಜಾಗತಿಕ ಇಂಧನ ಬಿಕ್ಕಟ್ಟಿನ ವೇಳೆ ತುರ್ತು ದಾಸ್ತಾನಿನಿಂದ ತೈಲ ಬಿಡುಗಡೆ ಮಾಡಲಾಗಿತ್ತು.

ಪ್ರಸ್ತುತ ಜಾಗತಿಕ ರಾಜಕೀಯ ಪರಿಸ್ಥಿತಿ ಮತ್ತೊಮ್ಮೆ ಇಂತಹ ತುರ್ತು ಕ್ರಮವನ್ನು ಕೈಗೊಳ್ಳುವಂತೆ ಮಾಡಿದ್ದು, ಇಂಧನ ಸುರಕ್ಷತೆಗೆ IEA ಪ್ರಮುಖ ಪಾತ್ರ ವಹಿಸುತ್ತಿದೆ.

ಅಂತರರಾಷ್ಟ್ರೀಯ ಇಂಧನ ಸಂಸ್ಥೆ ಪ್ಯಾರಿಸ್ ಕೇಂದ್ರವಾಗಿರುವ ಸ್ವಾಯತ್ತ ಅಂತರಸರ್ಕಾರಿ ಸಂಸ್ಥೆಯಾಗಿದ್ದು, ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ (OECD) ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸುತ್ತದೆ.

1973–74ರ ತೈಲ ಬಿಕ್ಕಟ್ಟಿನ ಬಳಿಕ ಸದಸ್ಯ ರಾಷ್ಟ್ರಗಳಿಗೆ ತೈಲ ಪೂರೈಕೆಯಲ್ಲಿ ಉಂಟಾಗುವ ಅಡಚಣೆಗಳನ್ನು ಎದುರಿಸಲು ನೆರವಾಗುವ ಉದ್ದೇಶದಿಂದ ಇದನ್ನು ಸ್ಥಾಪಿಸಲಾಯಿತು. IEA ಸದಸ್ಯತ್ವ ಪಡೆಯಲು ದೇಶಗಳು ಕನಿಷ್ಠ 90 ದಿನಗಳ ತೈಲ ಆಮದುಗಳಿಗೆ ಸಮಾನವಾದ ತುರ್ತು ದಾಸ್ತಾನುಗಳನ್ನು ಹೊಂದಿರಬೇಕು.

ಪ್ರಸ್ತುತ ಯುರೋಪ್, ಅಮೇರಿಕಾ ಹಾಗೂ ಏಷ್ಯಾ-ಪೆಸಿಫಿಕ್ (Asia-Pacific) ಪ್ರದೇಶಗಳ ಒಟ್ಟು 32 ರಾಷ್ಟ್ರಗಳು ಇದರ ಸದಸ್ಯರಾಗಿದ್ದು, ಜಾಗತಿಕ ಇಂಧನ ಸುರಕ್ಷತೆಯನ್ನು ಕಾಪಾಡುವಲ್ಲಿ ಮಹತ್ವದ ಪಾತ್ರವಹಿಸುತ್ತಿವೆ.

ಇದನ್ನು ಓದಿ : https://vijayatimes.com/channapatna-toys-industry-in-trouble/

Tags: exportieaoilparis

Related News

ಹಣ ಹೂಡಿಕೆ ಮಾಡುವ ಮುನ್ನ ಗಮನಿಸಿ: ಎಫ್‌ಡಿ vs ಸಣ್ಣ ಉಳಿತಾಯ ಯೋಜನೆಗಳು,NSC ಯಾವುದು ಬೆಸ್ಟ್
ಪ್ರಮುಖ ಸುದ್ದಿ

ಹಣ ಹೂಡಿಕೆ ಮಾಡುವ ಮುನ್ನ ಗಮನಿಸಿ: ಎಫ್‌ಡಿ vs ಸಣ್ಣ ಉಳಿತಾಯ ಯೋಜನೆಗಳು,NSC ಯಾವುದು ಬೆಸ್ಟ್

April 16, 2026
ಇರಾನ್ ವಿರುದ್ಧ ಕಠಿಣ ನಿಲುವು: ರಷ್ಯಾ ತೈಲ ವಿನಾಯಿತಿ ವಿಸ್ತರಣೆ ಇಲ್ಲ ಎಂದ ಅಮೆರಿಕಾ
ದೇಶ-ವಿದೇಶ

ಇರಾನ್ ವಿರುದ್ಧ ಕಠಿಣ ನಿಲುವು: ರಷ್ಯಾ ತೈಲ ವಿನಾಯಿತಿ ವಿಸ್ತರಣೆ ಇಲ್ಲ ಎಂದ ಅಮೆರಿಕಾ

April 16, 2026
ಸ್ವಯಂ ಗಣತಿ ಅಂತ್ಯ; ಇಂದಿನಿಂದ ಮನೆಗಣತಿ ಆರಂಭ – 33 ಪ್ರಶ್ನೆಗಳ ಮೂಲಕ ಮಾಹಿತಿ ಸಂಗ್ರಹ
ಪ್ರಮುಖ ಸುದ್ದಿ

ಸ್ವಯಂ ಗಣತಿ ಅಂತ್ಯ; ಇಂದಿನಿಂದ ಮನೆಗಣತಿ ಆರಂಭ – 33 ಪ್ರಶ್ನೆಗಳ ಮೂಲಕ ಮಾಹಿತಿ ಸಂಗ್ರಹ

April 16, 2026
ನಗರ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇವಿಎಂಗೆ ಬದಲು ಬ್ಯಾಲೆಟ್ ಪೇಪರ್: ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ
ಪ್ರಮುಖ ಸುದ್ದಿ

ನಗರ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇವಿಎಂಗೆ ಬದಲು ಬ್ಯಾಲೆಟ್ ಪೇಪರ್: ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ

April 16, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.