ಚಂಡೀಗಢ, ಮೇ. 26: ಮೇ 24 ರವರೆಗೆ ಹರಿಯಾಣದಲ್ಲಿ 454 ಬ್ಲಾಕ್ ಫಂಗಸ್ ಅಥವಾ ಮ್ಯೂಕರ್ ಮೈಕೊಸಿಸ್ ಪ್ರಕರಣಗಳು ದಾಖಲಾಗಿದ್ದು, ಗುರುಗ್ರಾಮ ಜಿಲ್ಲೆಯಲ್ಲಿ ಗರಿಷ್ಠ 156 ಪ್ರಕರಣಗಳು ದಾಖಲಾಗಿವೆ ಎಂದು ಆರೋಗ್ಯ ಇಲಾಖೆಯ ಅಂಕಿ ಅಂಶಗಳು ಮಂಗಳವಾರ ತಿಳಿಸಿವೆ.
ಈ ಪೈಕಿ ಹಿಸಾರ್ನಲ್ಲಿ 95 ಪ್ರಕರಣಗಳು, ಫರಿದಾಬಾದ್ನಲ್ಲಿ 55, ರೋಹ್ಟಕ್ ಮತ್ತು ಸಿರ್ಸಾದಲ್ಲಿ ತಲಾ 27, ಪಾಣಿಪತ್ನಲ್ಲಿ 19 ಮತ್ತು ಅಂಬಾಲಾ 14 ಪ್ರಕರಣಗಳು ವರದಿಯಾಗಿವೆ. ಬ್ಲಾಕ್ ಫಂಗಸ್ ಗೆ ಗುರಿಯಾದವರೆಲ್ಲರೂ ಕೋವಿಡ್ ರೋಗಿಗಳು ಅಥವಾ ಮಧುಮೇಹಿಗಳಲ್ಲ ಎನ್ನುವ ಅಂಶವನ್ನು ಗಮನಿಸಿರುವ ಆರೋಗ್ಯ ಸಚಿವ ಅನಿಲ್ ವಿಜ್, ಮ್ಯೂಕರ್ ಮೈಕೊಸಿಸ್ ಕಾಯಿಲೆ ಕುರಿತಾಗಿ ಹೆಚ್ಚಿನ ಸಂಶೋಧನೆ ನಡೆಸುವ ಅಗತ್ಯವಿದೆ ಎಂದು ಹೇಳಿದ್ದಾರೆ.
ಇಲ್ಲಿಯವರೆಗೆ ವಿಶ್ಲೇಷಿಸಿದ 413 ಕಪ್ಪು ಶಿಲೀಂಧ್ರದ ಪ್ರಕರಣಗಳಲ್ಲಿ 64 ಮಂದಿಯಲ್ಲಿ ಕೋವಿಡ್-19 ಸೋಂಕಿಲ್ಲದಿದ್ದರೆ, 79 ಮಂದಿ ಮಧುಮೇಹಿಗಳಲ್ಲ, 110 ಮಂದಿ ಸ್ಟೆರಾಯ್ಡ್ ಅನ್ನು ತೆಗೆದುಕೊಂಡಿಲ್ಲ ಮತ್ತು ಉಳಿದವರು ಆಮ್ಲಜನಕದ ಬೆಂಬಲದಲ್ಲಿಲ್ಲ ಎಂದು ಅವರು ಹೇಳಿದ್ದಾರೆ.