ನವದೆಹಲಿ, ಜು. 08: ದೇಶದಾದ್ಯಂತ ಕಳೆದ 24 ಗಂಟೆ ಅವಧಿಯಲ್ಲಿ 45,892 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 3.07 ಕೋಟಿ ದಾಟಿದೆ. ಇದೇ ಅವಧಿಯಲ್ಲಿ ದೇಶದಲ್ಲಿ 817 ಸೋಂಕಿತರು ಮೃತಪಟ್ಟಿದ್ದು, ಇದರಿಂದ, ಸಾವಿಗೀಡಾದವರ ಸಂಖ್ಯೆ 4,05,028ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಪ್ರತಿ ದಿನದ ಪಾಸಿಟಿವಿಟಿ ದರವು ಶೇಕಡ 2.42 ದೃಢಪಟ್ಟಿದೆ. ಸತತ 17 ದಿನಗಳಿಂದ ಶೇಕಡ 3ಕ್ಕಿಂತ ಕಡಿಮೆ ಪಾಸಿಟಿವಿಟಿ ದರ ದಾಖಲಾಗಿದೆ. ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 2.98 ಕೋಟಿ ದಾಟಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 4.6 ಲಕ್ಷ ಆಗಿದೆ.
ಬುಧವಾರ 18.93 ಲಕ್ಷ ಪರೀಕ್ಷೆ ಕೈಗೊಳ್ಳಲಾಗಿದ್ದು, ಇದುವರೆಗೆ ಪರೀಕ್ಷೆ ನಡೆಸಿದ ಸಂಖ್ಯೆ 42.52 ಕೋಟಿಗೆ ಏರಿಕೆಯಾಗಿದೆ. ದೇಶದಲ್ಲಿ ಇದುವರೆಗೆ 36.48 ಕೋಟಿ ಡೋಸ್ಗಳನ್ನು ಹಾಕಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.