ರಮೇಶ್ ಜಾರಕಿಹೊಳಿ ಪ್ರಕರಣ: ಪ್ರಕರಣದಲ್ಲಿ 5 ಕೋಟಿ ಡೀಲ್ ನಡೆದಿದೆ: ಎಚ್.ಡಿ.ಕೆ ಹೊಸ ಬಾಂಬ್

ಮೈಸೂರು, ಮಾ. 05: ರಾಜಕಾರಣಿಗಳ ಸಿಡಿ ಇದೆ ಎನ್ನುವವರು ಮೊದಲು ಅಂತವರನ್ನ ಒದ್ದು ಏರೋಪ್ಲೇನ್ ಹತ್ತಿಸಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು.

ಮೈಸೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಡಿ ಇದೆ ಎಂದು ಕೆಲವರು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ.
ಇದು ಬ್ಲ್ಯಾಕ್‌ಮೇಲ್‌ನ ಕಾರ್ಯತಂತ್ರ. ಇದಕ್ಕೆ ಪುಷ್ಠಿ ಕೊಟ್ಟು ಬೆಳಸಬೇಡಿ. ಈ ರೀತಿ ಸಿಡಿ ಇದೆ ಎನ್ನುವವರನ್ನು ಬಂಧಿಸಿ ಅವರ ಬಳಿ ಇರುವ ಸಿಡಿಗಳನ್ನು ಸರ್ಕಾರವೇ ಜನರ ಮುಂದೆ ಬಿಡುಗಡೆ ಮಾಡಲಿ.

ಅದ್ಯಾರೋ ಒಬ್ಬ ಮಾಜಿ ಸಿಎಂ ಅದೆಲ್ಲೋ ಹೋಗಿ ಬರುತ್ತಾರೆ.
ಅದರ ಸಿಡಿ ನನ್ನ ಬಳಿ ಇದೆ ಅಂತಾನೆ. ರಾಜ್ಯದಲ್ಲಿ ದೇವೇಗೌಡ, ಎಸ್‌ಎಂ ಕೃಷ್ಣ ಹಾದಿಯಾಗಿ ತುಂಬಾ ಜನ ಇದ್ದಾರೆ. ಯಾರು ಆ ಮಾಜಿ ಸಿಎಂ ಎಂದು ಬಾಯಿ ಬಿಡಿಸಿ.
ಸುಮ್ಮನ್ನೇ ನಾವು ಹೊರಗೆ ಓಡಾಡುವಾಗ ಮುಜುಗರ ತರಬೇಡಿ. ಇಂತಹ ಹೇಳಿಕೆಗಳಿಂದ ಜನ ನಮ್ಮನ್ಮು ಅನುಮಾನದಿಂದ ನೋಡುವ ಹಾಗೇ ಮಾಡಬೇಡಿ. ಹಿಂದೆ ಅದ್ಯಾವುದೋ ಆಂಕರ್ ವಿಚಾರದಲ್ಲು ನನ್ನ ಹೆಸರು ತಂದರು. ಆಗಲು ಸರಿಯಾಗಿ ಜಾಡಿಸಿದ್ದೇ‌ನೆ. ನನಗೆ ಈ ವಿಚಾರದಲ್ಲಿ ಯಾವುದೇ ಭಯವು ಇಲ್ಲ. ಈ ಪ್ರಕರಣದಲ್ಲಿ ನಾನು ತುಂಬಾ ಕ್ಲೀನ್ ಆಗಿದ್ದೇನೆ. ಆದರೆ ನನ್ನ ಉದ್ದೇಶ ಇಂತಹ ಬ್ಲ್ಯಾಕ್ ಮೇಲ್‌ಗಳು ನಿಲ್ಲಬೇಕು. ಇಂತಹ ಪ್ರಕರಣಗಳು ಹೆಸಿಗೆ ಬರುವಂತ ಸ್ಥಿತಿ ನಿರ್ಮಾಣ ಮಾಡಿದೆ ಎಂದರು.‌

ಅಲ್ಲದೇ, ಮಾಜಿ ಸಚಿವ ಜಾರಕಿಹೊಳಿ ಸಿಡಿ ಪ್ರಕರಣದ ಕುರಿತು ಮಾತನಾಡಿದ ಅವರು, ಈ ಪ್ರಕರಣದಲ್ಲಿ 5 ಕೋಟಿಯ ಡೀಲ್ ನಡೆದಿದೆ. ಇದು ನನಗಿರುವ ಮೂಲಗಳ ಮಾಹಿತಿ. ಕಳೆದು ಮೂರು ತಿಂಗಳಿಂದ ಈ‌ ಡೀಲ್ ವ್ಯವಹಾರ ನಡೆದಿದೆ. ದೊಡ್ಡ ದೊಡ್ಡವರೇ ಈ ಪ್ರಕರಣದಲ್ಲಿ ಇದ್ದಾರೆ. ಇದನ್ನ ತನಿಖೆ ಮಾಡಿಸುವ ಜವಾಬ್ದಾರಿ ಸರ್ಕಾರದ್ದು. ನಾನು ಈ ಪ್ರಕರಣ ನೋಡಿ ಖುಷಿ ಪಡುವವನ್ನಲ್ಲ.

ಸರ್ಕಾರ ಬೀಳಿಸದರು ಎನ್ನುವ ಕಾರಣಕ್ಕೆ ನಾನು ಒಂದು ಕಲ್ಲು ಹೊಡೆಯಬೇಕು ಅಂತ ಹೊಡೆಯೋದಿಲ್ಲ. ಇದೀಗಾ ಹಲವು ರೀತಿಯ ವ್ಯಾಖ್ಯಾನ ಶುರುವಾಗಿದೆ. ಪ್ರಕರಣ ಹಳ್ಳ ಹಿಡಿಯುವಂತದ್ದು ಏನು?
ಆ ಮಂತ್ರಿನಾ ರಾಜೀನಾಮೆ ಕೊಡಿಸಬೇಕೆಂಬ ಉದ್ದೇಶ ಇತ್ತು. ಇದೀಗಾ ಆ ರಾಜೀನಾಮೆ ಕೊಡಿಸುವಲ್ಲಿ ಅವರು ಸಫಲರಾಗಿದ್ದಾರೆ.

ಇದೀಗಾ ಆ ಹೆಣ್ಣು ಮಗಳನ್ನ ಕಟ್ಟಿಕೊಂಡು ಅವರಿಗೆ ಏನು?
ಅವರಿಬ್ಬರೇ ವಿಡಿಯೋ ಮಾಡಿಕೊಂಡಿದ್ದಾರೆ. ಆದರೆ ಆ ವಿಡಿಯೋ ಹೊರಗೆ ಕೊಟ್ಟವರು ಯಾರು? ಗೊತ್ತಿಲ್ಲ.? ಇಂತಹ ವಿಚಾರದಲ್ಲಿ ಸುಮ್ಮನ್ನೇ ಕಲ್ಲು ಹೊಡೆಯಬಾರದು. ಇವತ್ತು ರಾಜಕೀಯ ತುಂಬಾ ಕಲುಷಿತವಾಗಿದೆ. ಕೆಸರು ನಮ್ಮ‌ ಮೇಲೆ ನಾವೇ ಎರಚಿಕೊಂಡ ಹಾಗೆ. ಇಂತಹ ಪ್ರಕರಣದಿಂದ ನಮ್ಮ‌ನ್ನು ಜನ ತಪ್ಪಾಗಿ ತಿಳಿದು ಕೊಳ್ಳುತ್ತಾರೆ. ಹೀಗಾಗಿ ಮೊದಲು ಇಂತವರನ್ನ ಒದ್ದು ಒಳಗೆ ಹಾಕಿ ಎಂದರು.

ಇದೇ ವೇಳೆ ಒನ್ ನೇಷನ್ ಒನ್ ಎಲೆಕ್ಷನ್ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಮೊದಲು ಹಣದಿಂದ ಚುನಾವಣೆ ನಡೆಯೋದು ನಿಲ್ಲಲ್ಲಿ. ಚುನಾವಣೆಯ ವ್ಯವಸ್ಥೆಯ ಲೋಪ ಬದಲಾಗಲಿ. ಹಣವಿದ್ದವರಿಗೆ ಮಾತ್ರ ಚುನಾವಣೆ ಅನ್ನೋದು ನಿಲ್ಲಬೇಕು. ಆಮೇಲೆ ಈ ಬಗ್ಗೆ ಚರ್ಚೆ ಮಾಡೋಣ. ನನ್ನನ್ನು ಒಳಗೊಂಡಂತೆ ಬಿಜೆಪಿ, ಕಾಂಗ್ರೆಸ್ ಆತ್ಮ ವಿಮರ್ಶೆ ಮಾಡಬೇಕು. ಒನ್ ನೇಷನ್ ಒನ್ ಎಲೆಕ್ಷನ್ ವಿಚಾರದಲ್ಲಿ ಕಾಂಗ್ರೆಸ್ ಯೂ ಟರ್ನ್ ಹೊಡೆದಿದೆ. ಈ ವಿಚಾರದ ಚರ್ಚೆಯಲ್ಲಿ ಕಾಂಗ್ರೆಸ್ ಮೊದಲು ಭಾಗವಹಿಸಿತ್ತು
ಆ ನಂತರ ಸದನದಲ್ಲಿ ಯು ಟರ್ನ್ ಹೊಡೆಯಿತು.
ಇದು ಯಾಕೆ ಅಂತ ಗೊತ್ತಾಗಲಿಲ್ಲ. ಪ್ರಸ್ತುತ ರಾಜಕಾರಣದ ಸ್ಥಿತಿ ಪ್ರಜಾಪ್ರಭುತ್ವದ ವ್ಯವಸ್ಥೆ ಬುಡಮೇಲು ಮಾಡಲಿದೆ.
ಮೊದಲು ಅದು ಕೊನೆಯಾಗಬೇಕು ಎಂದರು.

Latest News

ಆರೋಗ್ಯ

ಸಕ್ಕರೆ ಖಾಯಿಲೆ ಇರುವವರು ಈ ಹಣ್ಣುಗಳನ್ನು ಸೇವಿಸಬಹುದು ; ತಪ್ಪದೇ ಈ ಮಾಹಿತಿ ಓದಿ

ತಜ್ಞರ ಪ್ರಕಾರ, ಸಕ್ಕರೆ ಕಾಯಿಲೆ ಇರುವವರು ಈ 5 ವಿಧದ ಹಣ್ಣುಗಳನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು. ಅಂತಹ ಹಣ್ಣುಗಳ ವಿವರ ಇಲ್ಲಿದೆ ನೋಡಿ.

ದೇಶ-ವಿದೇಶ

ದೇಶದ ಹೆಮ್ಮೆ ತ್ರಿವರ್ಣ ಧ್ವಜವೂ ಕೂಡ ಬಿಜೆಪಿಗೆ ವ್ಯಾಪಾರದ ಸರಕಾಗಿದೆ : ಬಿ.ಕೆ.ಹರಿಪ್ರಸಾದ್

38×11,80,000=4.484 ಕೋಟಿ, ಹೇಗಿದೆ ಮೋದಿ ಸರ್ಕಾರದ ಲೂಟಿ? ಕೇಂದ್ರದ ಮೋದಿ ಸರ್ಕಾರ ವಸೂಲಿ ಬಾಜಿತನಕ್ಕೆ ರಾಷ್ಟ್ರಧ್ವಜವನ್ನ ಬಳಸಿಕೊಂಡಿರುವುದು ಅಕ್ಷಮ್ಯ ಅಪರಾಧ

ಕ್ರೀಡೆ

ಕಾಮನ್‌ವೆಲ್ತ್ ಗೇಮ್ಸ್‌ 2022 ; ಕಂಚಿನ ಪದಕ ಗೆದ್ದ ಪತ್ನಿಯನ್ನು ಅಭಿನಂದಿಸಿದ ದಿನೇಶ್ ಕಾರ್ತಿಕ್

ಭಾರತದ ಸ್ಕ್ವ್ಯಾಶ್ ಆಟಗಾರ್ತಿ ದೀಪಿಕಾ ಪಲ್ಲಿಕ್ಕಲ್(Deepika Pallikal) ಮಿಕ್ಸೆಡ್ ಡಬಲ್ಸ್ ವಿಭಾಗದಲ್ಲಿ ಕಂಚಿನ ಪದಕ(Bronze Medal) ಗೆದ್ದುಕೊಂಡಿದ್ದಾರೆ.

ಆರೋಗ್ಯ

ದೇಹ ನೀಡುವ `ಈ’ ಸೂಚನೆಗಳು ಕಿಡ್ನಿ ವೈಪಲ್ಯವನ್ನು ಸೂಚಿಸುತ್ತವೆ ; ಇಲ್ಲಿದೆ ಮಾಹಿತಿ ಓದಿ

ಕಿಡ್ನಿ(Kidney) ನಮ್ಮ ದೇಹದ ಪ್ರಮುಖ ಅಂಗವಾಗಿದೆ. ದೇಹದಲ್ಲಿ ಶುದ್ಧ ರಕ್ತವನ್ನು ಪರಿಚಲನೆ ಮಾಡುವಲ್ಲಿ ಮೂತ್ರಪಿಂಡಗಳು ಮುಖ್ಯ ಪಾತ್ರವಹಿಸುತ್ತವೆ.