ಬೆಂಗಳೂರು : ಅಂತಾರಾಷ್ಟ್ರೀಯ ತೈಲ ಬೆಲೆ ಏರಿಕೆ ಪರಿಣಾಮ, ದಿನಬಳಕೆ ವಸ್ತುಗಳ ಮೇಲೆ ಉಂಟಾಗುತ್ತಿದ್ದು, ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ತೈಲ ಬೆಲೆ ಏರಿಕೆ ಪರಿಣಾಮ, ರೂಪಾಯಿ ಮೌಲ್ಯವು ಕುಸಿಯುತ್ತಿದ್ದು, ಹಣದುಬ್ಬರ ಪ್ರಮಾಣವು ಹೆಚ್ಚುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರ(Central Government) ಅಗತ್ಯ ವಸ್ತುಗಳ ಮೇಲಿನ ಜಿಎಸ್ಟಿ(GST) ದರವನ್ನು ಹೆಚ್ಚಿಸಿದೆ.

ಕೇಂದ್ರ ಸರ್ಕಾರವು ಪ್ಯಾಕ್ಮಾಡಿರುವ ಮೊಸರು(Curd), ಮಜ್ಜಿಗೆ ಸೇರಿದಂತೆ ಹಾಲಿನ ಉತ್ಪನ್ನಗಳ ಮೇಲೆ ಶೇ.5 ರಷ್ಟು ಜಿಎಸ್ಟಿ ವಿಧಿಸಿದ್ದು, ಇಂದಿನಿಂದ ಅನ್ವಯವಾಗುವಂತೆ ಪರಿಷ್ಕೃತ ದರ ಜಾರಿಯಾಗಲಿದೆ. ಕೇಂದ್ರ ಸರ್ಕಾರ ಜಿಎಸ್ಟಿ ಹೆಚ್ಚಳ ಮಾಡಿರುವ ಬೆನ್ನಲ್ಲೇ, ಕರ್ನಾಟಕ ಹಾಲು ಒಕ್ಕೂಟ(KMF) ತನ್ನ ಉತ್ಪ ನ್ನಗಳ ದರಗಳನ್ನು ಹೆಚ್ಚ ಳಮಾಡಿದೆ.
ಕೆಎಂಎಫ್ ಹಾಲಿನ ಉತ್ಪನ್ನಗಳ ಪರಿಷ್ಕೃತ ದರ :
ಹಾಲಿನ ದರದಲ್ಲಿ ೨-೩ ರೂ. ಹೆಚ್ಚಳ,
ಮಜ್ಜಿಗೆ 200 ಮಿಲಿ ರೂ.7 ಇದ್ದು, 8 ರೂ ಆಗಲಿದೆ.
ಟೆಟ್ರಾ ಪ್ಯಾ ಕ್ 10 ರೂ.ನಿಂದ 11 ರೂ.ಗೆ ಏರಿಕೆಯಾಗಲಿದೆ.
ಪೆಟ್ ಬಾಟಲ್ ರೂ.12 ರಿಂದ 13 ರೂ.ಗೆ ಹೆಚ್ಚಳವಾಗಲಿದೆ.
ಮೊಸರು 200 ಗ್ರಾ ರೂ. 10 ರಿಂದ 12 ರೂ. ಆಗಲಿದೆ.
500 ಗ್ರಾಂ ರೂ.22 ರಿಂದ 24 ರೂ ಆಗಲಿದೆ.

ಲಸ್ಸಿ 200 ಮಿಲಿ ಸ್ಯಾಚೆ(Packet) ರೂ.10 ರಿಂದ 11 ಗೆ ಏರಿಕೆಯಾಗಲಿದೆ. ಇನ್ನು ಟೆಟ್ರಾ ಪ್ಯಾಕ್(Tetrapack) ಸಾಮಾನ್ಯ ರೂ.20 ರಿಂದ 21, ಟೆಟ್ರಾ ಪ್ಯಾಕ್ ರೂ.25 ರಿಂದ 27, ಪೆಟ್ ಬಾಟಲ್ ಸಾಮಾನ್ಯ ರೂ.15 ರಿಂದ 16 ಹಾಗೂ ಪೆಟ್ ಬಾಟಲ್ ಗೋ ರೂ.20 ರಿಂದ 21 ರೂಪಾಯಿ ಹೆಚ್ಚಳವಾಗಲಿದೆ.