• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

5 ವರ್ಷಗಳ ಆರ್‌ಡಿ ಯೋಜನೆ: ಪೋಸ್ಟ್ ಆಫೀಸ್‌, ಎಸ್‌ಬಿಐ, ಎಚ್‌ಡಿಎಫ್‌ಸಿ, ಐಸಿಐಸಿಐ ಪೈಕಿ ಯಾವುದು ಬೆಸ್ಟ್

Teju Srinivas by Teju Srinivas
in ಪ್ರಮುಖ ಸುದ್ದಿ, ಮಾಹಿತಿ, ರಾಜ್ಯ
5 ವರ್ಷಗಳ ಆರ್‌ಡಿ ಯೋಜನೆ: ಪೋಸ್ಟ್ ಆಫೀಸ್‌, ಎಸ್‌ಬಿಐ, ಎಚ್‌ಡಿಎಫ್‌ಸಿ, ಐಸಿಐಸಿಐ ಪೈಕಿ ಯಾವುದು ಬೆಸ್ಟ್
0
SHARES
11
VIEWS
Share on FacebookShare on Twitter

ಉತ್ತಮ ಹೂಡಿಕೆಗೆ ಸ್ಮಾರ್ಟ್ ಸಲಹೆಗಳು

ಕಡಿಮೆ ಅಪಾಯದೊಂದಿಗೆ ಹೆಚ್ಚಿನ ಆದಾಯ ಪಡೆಯಲು ಯಾವ ಯೋಜನೆ ಆಯ್ಕೆ ಮಾಡಬೇಕೆಂದು ತಿಳಿದಿರಬೇಕು (5 Year RD Plan)

ಬ್ಯಾಂಕುಗಳಲ್ಲಿ ಹೆಚ್ಚುವರಿ ಬಡ್ಡಿದರ, ಪೋಸ್ಟ್ ಆಫೀಸ್‌ನಲ್ಲಿ ಸ್ಥಿರ ಆದಾಯ; ಹೂಡಿಕೆ ಮಾಡುವ ಮುನ್ನ ತಿಳಿಯಬೇಕಾದ ಪ್ರಮುಖ ಮಾಹಿತಿ.

ಷೇರು ಮಾರುಕಟ್ಟೆ ಹಾಗೂ ಮ್ಯೂಚುವಲ್ ಫಂಡ್‌ಗಳಂತಹ ಹೂಡಿಕೆಗಳಲ್ಲಿ ಅಪಾಯ ಇರುವ ಕಾರಣ,

ಖಾತರಿಯ ಆದಾಯವನ್ನು ಬಯಸುವವರು ರಿಕರಿಂಗ್ ಡೆಪಾಸಿಟ್ (RD) ಯೋಜನೆಯತ್ತ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ.(5 Year RD Plan)

ಪ್ರತಿ ತಿಂಗಳು ನಿಗದಿತ ಮೊತ್ತವನ್ನು ಹೂಡಿಕೆ ಮಾಡಿ, ಅವಧಿ ಪೂರ್ಣಗೊಂಡ ಬಳಿಕ ಉತ್ತಮ ಮೊತ್ತವನ್ನು ಪಡೆಯಲು ಈ ಯೋಜನೆ ಸಹಕಾರಿಯಾಗಿದೆ.

5 Year RD Plan

ವಿಶೇಷವಾಗಿ 5 ವರ್ಷಗಳ ಅವಧಿಯ ಆರ್‌ಡಿ ಯೋಜನೆ ಮಧ್ಯಮ ವರ್ಗದ ಕುಟುಂಬಗಳಿಗೆ ಸುರಕ್ಷಿತ ಹಾಗೂ ವಿಶ್ವಾಸಾರ್ಹ ಉಳಿತಾಯ ಸಾಧನವಾಗಿ ಪರಿಣಮಿಸಿದೆ.

ಪ್ರಸ್ತುತ ಪೋಸ್ಟ್ ಆಫೀಸ್‌,(Post Office,) ಎಸ್‌ಬಿಐ, (SBI) ಎಚ್‌ಡಿಎಫ್‌ಸಿ (HDFC) ಹಾಗೂ ಐಸಿಐಸಿಐ(ICICI) ಬ್ಯಾಂಕುಗಳು ವಿವಿಧ ಬಡ್ಡಿದರಗಳನ್ನು ನೀಡುತ್ತಿದ್ದು, ಹೂಡಿಕೆದಾರರಿಗೆ ಹಲವು ಆಯ್ಕೆಗಳನ್ನು ಒದಗಿಸಿವೆ.

ತಿಂಗಳಿಗೆ ₹25,000 ಹೂಡಿಕೆ ಮಾಡಿದರೆ ಎಷ್ಟು ಲಾಭ ಸಿಗುತ್ತದೆ ಎನ್ನುವುದನ್ನು ನೋಡುವುದಾದರೆ.ಪ್ರತಿ ತಿಂಗಳು ₹25,000 ರಂತೆ 5 ವರ್ಷಗಳ ಕಾಲ ಹೂಡಿಕೆ ಮಾಡಿದರೆ ಒಟ್ಟು ಹೂಡಿಕೆ ಮೊತ್ತ ₹15 ಲಕ್ಷ ಆಗುತ್ತದೆ.

ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ 6.40% ಬಡ್ಡಿದರ ಲಭ್ಯವಿದ್ದು, ಸುಮಾರು ₹2.70 ಲಕ್ಷ ಬಡ್ಡಿ ಆದಾಯ ಸಿಗುತ್ತದೆ. (5 Year RD Plan)

ಮೆಚ್ಯೂರಿಟಿ ಪೂರ್ಣಗೊಂಡ ಬಳಿಕ ಒಟ್ಟು ₹17.70 ಲಕ್ಷ ಕೈ ಸೇರಲಿದೆ. ಎಸ್‌ಬಿಐನಲ್ಲಿ 6.30% ಬಡ್ಡಿದರ ಇರುವುದರಿಂದ ಸುಮಾರು ₹2.65 ಲಕ್ಷ ಬಡ್ಡಿ ಸಿಗುತ್ತದೆ.

ಐಸಿಐಸಿಐ ಬ್ಯಾಂಕ್ 6.50% ಬಡ್ಡಿದರ ನೀಡುತ್ತಿದ್ದು, ಸುಮಾರು ₹2.75 ಲಕ್ಷ ಬಡ್ಡಿ ಆದಾಯ ದೊರೆಯಲಿದೆ.

ಈ ಮೂಲಕ ಬ್ಯಾಂಕುಗಳ ನಡುವೆ ಸಣ್ಣ ಪ್ರಮಾಣದ ವ್ಯತ್ಯಾಸ ಕಂಡುಬರುತ್ತದೆ.

ಎಲ್ಲಕ್ಕಿಂತ ಪೋಸ್ಟ್ ಆಫೀಸ್ ಆರ್‌ಡಿ ಹೆಚ್ಚು ಲಾಭದಾಯಕ ಹೌದು ಪೋಸ್ಟ್ ಆಫೀಸ್‌ನ 5 ವರ್ಷಗಳ ಆರ್‌ಡಿ ಯೋಜನೆ ಪ್ರಸ್ತುತ 6.70% ಬಡ್ಡಿದರವನ್ನು ನೀಡುತ್ತಿದೆ.

₹15 ಲಕ್ಷ ಹೂಡಿಕೆಯ ಮೇಲೆ ಸುಮಾರು ₹2.84 ಲಕ್ಷ ಬಡ್ಡಿ ಆದಾಯ ಸಿಗಲಿದ್ದು, ಇತರ ಪ್ರಮುಖ ಬ್ಯಾಂಕುಗಳಿಗಿಂತ ₹10,000 ರಿಂದ ₹19,000 ವರೆಗೆ ಹೆಚ್ಚುವರಿ ಲಾಭ ದೊರೆಯುತ್ತದೆ.

ಆದ್ದರಿಂದ ಕಡಿಮೆ ಅಪಾಯದಲ್ಲಿ ಹೆಚ್ಚು ಆದಾಯ ಬಯಸುವವರಿಗೆ ಪೋಸ್ಟ್ ಆಫೀಸ್ ಆರ್‌ಡಿ ಉತ್ತಮ ಆಯ್ಕೆಯಾಗಿದೆ.

ಅಲ್ಲದೆ, ಸರ್ಕಾರಿ ಬೆಂಬಲ ಇರುವುದರಿಂದ ಹೂಡಿಕೆದಾರರಲ್ಲಿ ಹೆಚ್ಚಿನ ವಿಶ್ವಾಸವಿದೆ.

ಹಿರಿಯ ನಾಗರಿಕರಿಗೆ ವಿಶೇಷ ಅನುಕೂಲವಿದೆ.60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಬ್ಯಾಂಕುಗಳು ಹೆಚ್ಚುವರಿ ಬಡ್ಡಿದರದ ಸೌಲಭ್ಯವನ್ನು ಒದಗಿಸುತ್ತವೆ.

ಸಾಮಾನ್ಯ ನಾಗರಿಕರಿಗಿಂತ 0.50% ರಿಂದ 0.75% ವರೆಗೆ ಹೆಚ್ಚಿನ ಬಡ್ಡಿ ನೀಡುವ ಕಾರಣ, ಕೆಲವು ಬ್ಯಾಂಕುಗಳಲ್ಲಿ ಬಡ್ಡಿದರವು 7% ಕ್ಕಿಂತಲೂ ಹೆಚ್ಚಾಗಬಹುದು.

ಇದರಿಂದ ಹಿರಿಯ ನಾಗರಿಕರಿಗೆ ಬ್ಯಾಂಕುಗಳಲ್ಲೇ ಉತ್ತಮ ಆದಾಯ ಗಳಿಸುವ ಅವಕಾಶ ದೊರೆಯುತ್ತದೆ.

ಆದರೆ ಪೋಸ್ಟ್ ಆಫೀಸ್ ಆರ್‌ಡಿಯಲ್ಲಿ ಸಾಮಾನ್ಯ ಹಾಗೂ ಹಿರಿಯ ನಾಗರಿಕರಿಗೆ ಒಂದೇ ರೀತಿಯ 6.70% ಬಡ್ಡಿದರ ಅನ್ವಯವಾಗುತ್ತದೆ.

ತೆರಿಗೆ ನಿಯಮ ನೋಡುವುದಾದರೆ ಆರ್‌ಡಿ ಮೂಲಕ ಗಳಿಸುವ ಬಡ್ಡಿ ಆದಾಯವು ಒಂದು ಹಣಕಾಸು ವರ್ಷದಲ್ಲಿ ₹40,000 ಮೀರಿದರೆ ಬ್ಯಾಂಕುಗಳು 10% ಟಿಡಿಎಸ್ ಕಡಿತಗೊಳಿಸುತ್ತವೆ. (5 Year RD Plan)

ಹಿರಿಯ ನಾಗರಿಕರಿಗೆ ಈ ಮಿತಿ ₹50,000 ಆಗಿದೆ. ಪ್ಯಾನ್ ಕಾರ್ಡ್ ವಿವರ ನೀಡದಿದ್ದರೆ 20% ಟಿಡಿಎಸ್ (TDS) ಅನ್ವಯವಾಗುತ್ತದೆ.

ಹೀಗಾಗಿ ಹೂಡಿಕೆ ಮಾಡುವ ಮೊದಲು ತೆರಿಗೆ ನಿಯಮಗಳನ್ನು ತಿಳಿದುಕೊಳ್ಳುವುದು ಮುಖ್ಯ. ಯಾವುದೇ ಅಪಾಯವಿಲ್ಲದೆ,

ಪ್ರತಿ ತಿಂಗಳು ಸಣ್ಣ ಮೊತ್ತವನ್ನು ಉಳಿತಾಯ ಮಾಡಿ ಭವಿಷ್ಯದಲ್ಲಿ ದೊಡ್ಡ ಮೊತ್ತವನ್ನು ಸಂಗ್ರಹಿಸಲು ಬಯಸುವವರಿಗೆ 5 ವರ್ಷಗಳ ಆರ್‌ಡಿ ಯೋಜನೆ ಉತ್ತಮ ಆಯ್ಕೆಯಾಗಿದೆ.

ಪ್ರಸ್ತುತ ಪರಿಸ್ಥಿತಿಯಲ್ಲಿ ಹೆಚ್ಚಿನ ಲಾಭದ ದೃಷ್ಟಿಯಿಂದ ಪೋಸ್ಟ್ ಆಫೀಸ್ ಆರ್‌ಡಿ ಮೊದಲ ಸ್ಥಾನದಲ್ಲಿದೆ.

ಇದನ್ನು ಓದಿ:https://vijayatimes.com/digital-surveillance-in-garbage-vehicles/

Tags: HDFCICICI BankpostofficeSBI

Related News

ತಾಲೂಕು ಆಸ್ಪತ್ರೆಗಳಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರದ ಸೂಚನೆ: ಆರೋಗ್ಯ ಸೇವೆ ಬಲಪಡಿಸಲು ಸಚಿವ ಯು.ಟಿ. ಖಾದರ್ ಮಹತ್ವದ ಘೋಷಣೆ
ಪ್ರಮುಖ ಸುದ್ದಿ

ತಾಲೂಕು ಆಸ್ಪತ್ರೆಗಳಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರದ ಸೂಚನೆ: ಆರೋಗ್ಯ ಸೇವೆ ಬಲಪಡಿಸಲು ಸಚಿವ ಯು.ಟಿ. ಖಾದರ್ ಮಹತ್ವದ ಘೋಷಣೆ

July 22, 2026
ಸಚಿವ ಸಂಪುಟ ವಿಸ್ತರಣೆ ಮತ್ತೆ ಮುಂದೂಡಿಕೆ: ಹೈಕಮಾಂಡ್ ತೀರ್ಮಾನಕ್ಕಾಗಿ ಕಾಯುತ್ತಿರುವ ರಾಜ್ಯ ಕಾಂಗ್ರೆಸ್
ಪ್ರಮುಖ ಸುದ್ದಿ

ಸಚಿವ ಸಂಪುಟ ವಿಸ್ತರಣೆ ಮತ್ತೆ ಮುಂದೂಡಿಕೆ: ಹೈಕಮಾಂಡ್ ತೀರ್ಮಾನಕ್ಕಾಗಿ ಕಾಯುತ್ತಿರುವ ರಾಜ್ಯ ಕಾಂಗ್ರೆಸ್

July 22, 2026
ಒಮ್ಮೆ ನಿರ್ಧಾರ ಮಾಡಿದರೆ ಜಾರಿ ಖಚಿತ : ಶರಾವತಿ ಯೋಜನೆ ಕುರಿತು ಸಿಎಂ ಡಿಕೆ ಶಿವಕುಮಾರ್ ಸ್ಪಷ್ಟನೆ
ಪ್ರಮುಖ ಸುದ್ದಿ

ಒಮ್ಮೆ ನಿರ್ಧಾರ ಮಾಡಿದರೆ ಜಾರಿ ಖಚಿತ : ಶರಾವತಿ ಯೋಜನೆ ಕುರಿತು ಸಿಎಂ ಡಿಕೆ ಶಿವಕುಮಾರ್ ಸ್ಪಷ್ಟನೆ

July 21, 2026
ಬೇಡಿಕೆ ಈಡೇರುವವರೆಗೂ ಹೋರಾಟ ನಿಲ್ಲದು: ಇಂದು ಕೂಡ ‘ಚಲೋ ಸಂಸದ್’ ಮುಂದುವರಿಕೆ ಎಂದ ಅಭಿಜಿತ್ ದೀಪ್ಕೆ
ದೇಶ-ವಿದೇಶ

ಬೇಡಿಕೆ ಈಡೇರುವವರೆಗೂ ಹೋರಾಟ ನಿಲ್ಲದು: ಇಂದು ಕೂಡ ‘ಚಲೋ ಸಂಸದ್’ ಮುಂದುವರಿಕೆ ಎಂದ ಅಭಿಜಿತ್ ದೀಪ್ಕೆ

July 21, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.