ಬೆಂಗಳೂರು : ಕನ್ನಡದ ಕಾಂತಾರ(Kantara) ಚಿತ್ರ ಬಿಡುಗಡೆಯಾಗಿ ಏಳು ವಾರಗಳನ್ನು ಪೂರೈಸಿದೆ. ಇಂದು ಚಿತ್ರ ಬಿಡುಗಡೆಯಾಗಿ 50ನೇ ದಿನವನ್ನು ಆಚರಿಸಿಕೊಂಡಿದ್ದು,
ದಿನನಿತ್ಯದ ಕಲೆಕ್ಷನ್ ಇನ್ನೂ ಕೋಟಿಗಳಲ್ಲಿ ಬರುತ್ತಿದೆ. ಏಳನೇ ವಾರದಲ್ಲಿ 24 ಕೋಟಿಗಳನ್ನು ಗಳಿಸುವ ಮೂಲಕ ಹೊಸ ದಾಖಲೆ(Record) ಮಾಡಿದೆ.

ಇನ್ನು ಭಾರತದಲ್ಲಿ ಕಾಂತಾರ ಚಿತ್ರದ ಒಟ್ಟು ಬಾಕ್ಸ್ ಆಫೀಸ್ ಕಲೆಕ್ಷನ್(Box Office Collection) ಸುಮಾರು 350 ಕೋಟಿ ರೂಪಾಯಿ ಎನ್ನಲಾಗಿದೆ. ವಿದೇಶದಲ್ಲಿ $4 ಮಿಲಿಯನ್ (ರೂ. 33 ಕೋಟಿ) ಗಳಿಸಿದೆ. ವಿಶ್ವದಾದ್ಯಂತ ಒಟ್ಟು 377 ಕೋಟಿ ರೂಪಾಯಿ ಗಳಿಸಿದೆ ಎನ್ನಲಾಗಿದೆ.
ಭಾರತದಲ್ಲಿ ಕಾಂತಾರ ಬಾಕ್ಸ್ ಆಫೀಸ್ ಕಲೆಕ್ಷನ್ :
- ಮೊದಲನೇ ವಾರ – ರೂ. 26.80 ಕೋಟಿ
- ಎರಡನೇ ವಾರ – ರೂ. 37.40 ಕೋಟಿ
- ಮೂರನೇ ವಾರ – ರೂ. 75.20 ಕೋಟಿ
- ನಾಲ್ಕನೇ ವಾರ – ರೂ. 71.60 ಕೋಟಿ
- ಐದನೇ ವಾರ – ರೂ. 64.80 ಕೋಟಿ
- ಆರನೇ ವಾರ – ರೂ. 43.90 ಕೋಟಿ
- ಏಳನೇ ವಾರ – ರೂ. 24.30 ಕೋಟಿ
ಒಟ್ಟು – ರೂ. 344 ಕೋಟಿ
ಇದನ್ನೂ ಓದಿ : https://vijayatimes.com/artificial-meat/
ಇನ್ನು ಕಾಂತಾರ ಚಿತ್ರದ ಬಹುಪಾಲು ವ್ಯಾಪಾರವು ಈಗ ಹಿಂದಿ ಆವೃತ್ತಿಯಿಂದ ಬರುತ್ತಿದೆ. ಉತ್ತರ ಭಾರತದಲ್ಲಿ ಹಿಂದಿನ ವಾರದಲ್ಲಿ 11.25 ಕೋಟಿ ರೂಪಾಯಿಗಳನ್ನು ಕಾಂತಾರ ಗಳಿಸಿದೆ. ಇದುವರೆಗೆ ಉತ್ತರ ಭಾರತದಲ್ಲಿ ಒಟ್ಟು 93.50 ಕೋಟಿ ಗಳಿಸಿದ್ದು, ಶೀಘ್ರದಲ್ಲೇ ಮೂರು ಅಂಕಿಗಳ ಗಡಿ ದಾಟಲಿದೆ.

ಇನ್ನೊಂದೆಡೆ ಕಾಂತಾರ ಚಿತ್ರವು ಕರ್ನಾಟಕದಲ್ಲಿ ಸಾರ್ವಕಾಲಿಕ ಎರಡನೇ ಅತಿ ದೊಡ್ಡ ಗಳಿಕೆ ಕಂಡಿದೆ. ಮೂಲಗಳ ಪ್ರಕಾರ 168 ಕೋಟಿ ರೂಪಾಯಿ ಕನ್ನಡ ಆವೃತ್ತಿಯಿಂದ ಬಂದಿದೆ. ಇನ್ನು ಕಾಂತಾರ ರಾಜ್ಯದಲ್ಲಿ ಅತಿ ಹೆಚ್ಚು ಜನರು ವೀಕ್ಷಿಸಿದ ಚಲನಚಿತ್ರವಾಗಿದ್ದು, 90 ಲಕ್ಷಕ್ಕೂ ಹೆಚ್ಚು ಟಿಕೆಟ್ಗಳು ಮಾರಾಟವಾಗಿವೆ. ಈ ಮೂಲಕ 72 ಲಕ್ಷ ಟಿಕೆಟ್ ಮಾರಾಟ ಮಾಡಿದ್ದ ಕೆಜಿಎಫ್ 2 ಚಿತ್ರವನ್ನು ಹಿಂದಿಕ್ಕಿದೆ.
ಇದನ್ನೂ ಓದಿ : https://vijayatimes.com/its-not-kantara/
ಪ್ರಾದೇಶಿಕವಾರು ಕಾಂತಾರದ ಬಾಕ್ಸ್ ಆಫೀಸ್ ಕಲೆಕ್ಷನ್ :
- ಎಪಿ / ಟಿಎಸ್ – ರೂ. 56 ಕೋಟಿ
- ತಮಿಳುನಾಡು – ರೂ. 9.25 ಕೋಟಿ
- ಕೇರಳ – ರೂ. 17.25 ಕೋಟಿ
- ಉತ್ತರ ಭಾರತ – ರೂ. 93.50 ಕೋಟಿ
- ಒಟ್ಟು – ರೂ. 344 ಕೋಟಿ
- ಮಹೇಶ್.ಪಿ.ಎಚ್