- 2026ರ ವೇಳೆಗೆ 500 ರೂಪಾಯಿ (500 note ban fakenews) ನೋಟುಗಳು ಬ್ಯಾನ್
- ಜನರ ಮನದಲ್ಲಿ ಗೊಂದಲ ಮೂಡಿಸಿದ ಯೂಟ್ಯೂಬ್ ವಿಡಿಯೋಗಳು
- ನೋಟ್ ಬ್ಯಾನ್ ಕುರಿತಾಗಿ ಸ್ಪಷ್ಟನೆ ನೀಡಿದ ಕೇಂದ್ರ ಸರ್ಕಾರ
New delhi: 2026ರ ವೇಳೆಗೆ 500 ರೂಪಾಯಿ ನೋಟುಗಳು ಬ್ಯಾನ್ ಆಗುತ್ತವೆ ಎಂದು ಯೂಟ್ಯೂಬ್‌ನಲ್ಲಿ ವೀಡಿಯೋವೊಂದು ಹರಿದಾಡುತ್ತಿದೆ.
ಈ ವೀಡಿಯೋ ಈಗ ಸಾಕಷ್ಟು ವೈರಲ್ (Viral) ಆಗಿದ್ದು, ಜನರಲ್ಲಿ ಗೊಂದಲ ಸೃಷ್ಟಿಸಿದೆ. 500 ರೂಪಾಯಿ ನೋಟುಗಳು ಬ್ಯಾನ್ (Note ban) ಆಗುತ್ತವೆ ಎಂದು ಜನ ಮಾತನಾಡಿಕೊಳ್ಳಲು ಆರಂಭಿಸಿದ್ದಾರೆ.

ಆದರೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರ (Indian Government) ಈಗ ಸ್ಪಷ್ಟನೆ ನೀಡಿದೆ. ಸಾಮಾಜಿಕ ಜಾಲತಾಣದಲ್ಲಿ (Social Media Post) ಹರಿದಾಡುತ್ತಿರುವ ಈ ವಿಚಾರ ಸುಳ್ಳು ಎಂದು ಹೇಳಿದೆ.
ಇದು ಸಂಪೂರ್ಣ ಸುಳ್ಳು ವರದಿಯಾಗಿದ್ದು, ಭಾರತದ ರಿಸರ್ವ್ ಬ್ಯಾಂಕ್ ಮುಂದೆ ಅಂತಹ ಯಾವುದೇ ಪ್ರಸ್ತಾಪವೂ ಇಲ್ಲ (500 note ban fakenews) ಎಂದು ಸರ್ಕಾರವೂ ಸ್ಪಷ್ಟನೆ ನೀಡಿದೆ.
ಜೂನ್ 2 ರಂದು ಕ್ಯಾಪಿಟಲ್ ಟಿವಿ (Capital TV) ಎಂಬ ಯೂಟ್ಯೂಬ್ ಚಾನೆಲ್ ಪೋಸ್ಟ್ (Youtube post)ಮಾಡಿದ ವೀಡಿಯೊದಲ್ಲಿ, ಮುಂದಿನ ವರ್ಷದ ಮಾರ್ಚ್ ನಿಂದ 500 ರೂಪಾಯಿಯ ನೋಟುಗಳು ಹಂತಹಂತವಾಗಿ ರದ್ದಾಗಲಿವೆ ಎಂದು ಹೇಳಲಾಗಿದೆ.
ಸುಮಾರು 12 ನಿಮಿಷಗಳ ಈ ವೀಡಿಯೊವನ್ನು ಐದು ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಅಷ್ಟೇ ಅಲ್ಲ ಹಲವಾರು ಜನ ಶೇರ್ ಮಾಡಿರೋದು ಮಾತ್ರವಲ್ಲ ಕೆಲವರ ಮನದಲ್ಲಿ 500 ರೂಪಾಯಿ ನೋಟಿನ ಬಗ್ಗೆ ಗೊಂದಲ ಮೂಡಿಸಿದೆ.
ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಕೇಂದ್ರ ಸರ್ಕಾರ, 500 ರೂ. ನೋಟುಗಳನ್ನು ಸ್ಥಗಿತಗೊಳಿಸಲಾಗಿಲ್ಲ ಮತ್ತು ಅವು ಕಾನೂನುಬದ್ಧವಾಗಿ ಚಲಾವಣೆಯಲ್ಲಿ ಉಳಿಯಲಿವೆ ಎಂದು ಹೇಳಿದೆ.
ಇದನ್ನು ಓದಿ : ಕ್ಷಮೆ ಕೇಳದ ಕಮಲ್ ಹಾಸನ್: ಕರ್ನಾಟಕದಲ್ಲಿ ಬಿಡುಗಡೆಯಾಗದ ಥಗ್ ಲೈಫ್
ಈ ಬಗ್ಗೆ ಭಾರತ ಸರ್ಕಾರದ ಅಧಿಕೃತ ಸತ್ಯ-ಪರಿಶೀಲನಾ ಸಂಸ್ಥೆ(fact-checking agency)ಯಾಗಿರುವ ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ (ಪಿಐಬಿ)ನ ಸತ್ಯ ಪರಿಶೀಲನಾ ವಿಭಾಗವು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿ ಪೋಸ್ಟ್ ಮಾಡಿದೆ.
ನಾಗರಿಕರು ಈ ತಪ್ಪು ಮಾಹಿತಿಗೆ ಬಲಿಯಾಗಬಾರದು ಎಂದು ಅದು ಜನರಿಗೆ ಸಲಹೆ ನೀಡಿದೆ. ಯಾವುದೇ ಸುದ್ದಿಗಳನ್ನು ನಂಬುವ ಅಥವಾ ಹಂಚಿಕೊಳ್ಳುವ ಮೊದಲು ಯಾವಾಗಲೂ ಅಧಿಕೃತ ಮೂಲಗಳಿಂದ ಬಂದ ಸುದ್ದಿಗಳನ್ನು ಪರಿಶೀಲಿಸಿ ಎಂದು ಪಿಐಬಿ ಹೇಳಿದೆ.