ಬೆಂಗಳೂರು, ಫೆ. 11: ಹೋಂಡಾ ಆಕ್ಟಿವಾ 6 ಜಿ ಸ್ಟ್ಯಾಂಡರ್ಡ್ ಮತ್ತು ಡಿಎಲ್ಎಕ್ಸ್ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿದೆ. ಇದರ ಬೆಲೆ ಕ್ರಮವಾಗಿ 66,816 ರೂಪಾಯಿ ಮತ್ತು 68,316 ರೂಪಾಯಿ ಬೆಲೆಯಲ್ಲಿ ಹಾಗೂ ಈ ಸ್ಕೂಟರ್ 8 ಬಣ್ಣಗಳಲ್ಲಿ ಲಭ್ಯವಿದೆ.
ಹೋಂಡಾ ಆಕ್ಟಿವಾ, ಗ್ರಾಹಕರಿಗೆ ಖುಷಿ ಸುದ್ದಿಯೊಂದನ್ನು ಕೊಟ್ಟಿದೆ. ಹೋಂಡಾ ಆಕ್ಟಿವಾ ತನ್ನ 6ಜಿ ಆವೃತ್ತಿಗೆ ಫೆಬ್ರವರಿಯಲ್ಲಿ ಭರ್ಜರಿ ಕ್ಯಾಶ್ಬ್ಯಾಕ್ ನೀಡ್ತಿದೆ. ಫೆಬ್ರವರಿ ತಿಂಗಳಲ್ಲಿ ಈ ಸ್ಕೂಟರ್ ಖರೀದಿ ಮಾಡಿದವರಿಗೆ 5 ಸಾವಿರ ರೂಪಾಯಿ ಕ್ಯಾಶ್ಬ್ಯಾಕ್ ಪಡೆಯಬಹುದು.
ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಹಾಗೂ ಮಾಸಿಕ ಕಂತಿನಲ್ಲಿ ಸ್ಕೂಟರ್ ಖರೀದಿಸಿದರೆ ಮಾತ್ರ 5000 ರೂಪಾಯಿ ಕ್ಯಾಶ್ಬ್ಯಾಕ್ ಸಿಗಲಿದೆ. ಈ ಯೋಜನೆಯಡಿ ಸ್ಕೂಟರ್ ಖರೀದಿಸಲು ಕಂಪನಿಯು ಶೇಕಡಾ 100ರಷ್ಟು ಹಣಕಾಸಿನ ಸೌಲಭ್ಯವನ್ನು ಒದಗಿಸುತ್ತಿದೆ. ಇದಲ್ಲದೆ ಕಂಪನಿಯು ಹೆಚ್ಚು ಮಾರಾಟವಾಗುವ ಬೈಕ್ ಹೋಂಡಾ ಶೈನ್ 125 ಸಿಸಿ ಯಲ್ಲೂ ಇದೇ ಆಫರ್ ನೀಡುತ್ತಿದೆ. ಅಲ್ಲದೆ ಶೈನ್ ನಲ್ಲಿ 2499 ರೂಪಾಯಿ ಡೌನ್ಪೇಮೆಂಟ್ ಸೌಲಭ್ಯ ನೀಡ್ತಿದೆ.
ಹೋಂಡಾ ಆಕ್ಟಿವಾ 6 ಜಿ ಸ್ಟ್ಯಾಂಡರ್ಡ್ ಮತ್ತು ಡಿಎಲ್ಎಕ್ಸ್ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿದ. ಇದರ ಬೆಲೆ ಕ್ರಮವಾಗಿ 66,816 ರೂಪಾಯಿ ಹಾಗೂ 68,316 ರೂಪಾಯಿ.ಈ ಸ್ಕೂಟರ್ 8 ಬಣ್ಣಗಳಲ್ಲಿ ಗ್ರಾಹಕರ ಮನಸೆಳೆಯುತ್ತದೆ.