53 drugs including Paracetamol of poor quality: Shocking report by CDSCO reveals
Bengaluru: ಸಾಮಾನ್ಯವಾಗಿ ಜ್ವರ ಬಂದರೆ ಪ್ಯಾರಾಸಿಟಮಾಲ್ ಮಾತ್ರೆ (Paracetamol) ನುಂಗಿ ಸುಮ್ಮನಾಗ್ತಿದ್ದೀರಾ! ಹಲವು ಸಲ ಪ್ಯಾರಾಸಿಟಮಾಲ್ ಮಾತ್ರೆ ನುಂಗಿದಾಗ ಜ್ವರ ಕಡಿಮೆ ಆದಂತೆ ಅನ್ನಿಸಿದರೂ ಕೂಡ ನಮಗೆ ಗೊತ್ತಿಲ್ಲದ ರೀತಿಯಲ್ಲಿ ಸೈಡ್ ಎಫೆಕ್ಟ್ಸ್ ಆಗಿರುತ್ತದೆ. ಏಕೆಂದರೆ ನಾವು ಬಳಸುವ ಪ್ಯಾರಾಸಿಟಮಾಲ್, ಮಧುಮೇಹ, ರಕ್ತದೊತ್ತಡ, ವಿಟಮಿನ್ ಸೇರಿದಂತೆ 53 ಔಷಧಗಳು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾಗಿದೆ. ಈ ಪೈಕಿ ಕೆಲವು ಔಷಧಗಳ ವಿಷಪೂರಿತವಾಗಿದೆ ಎಂದು ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣಾ ಸಂಘಟನೆ (CDSCO) ತನ್ನ ಮಾಸಿಕ ವರದಿಯಲ್ಲಿ ಎಚ್ಚರಿಸಿದೆ.
ಪ್ಯಾರಾಸಿಟಮಾಲ್ ಮಾತ್ರೆಯನ್ನು ಕರ್ನಾಟಕದ ಆ್ಯಂಟಿಬಯೋಟಿಕ್ಸ್ ಆ್ಯಂಡ್ ಫಾರ್ಮಸುಟಿಕಲ್ಸ್ ಲಿ. (Karnataka Antibiotics and Pharmaceuticals Ltd.)ಎಂಬ ಕಂಪನಿ ಸಿದ್ಧಪಡಿಸುತ್ತಿತ್ತು. ಪ್ರತಿದಿನ ಮೈ ಕೈ ನೋವು, ಜ್ವರ ಎಂದು ಹಲವಾರು ಮಂದಿ ಇದ ನ್ನು ಸೇವಿಸುತ್ತಿದ್ದರು. ಆದರೆ ಇದನ್ನು ಹೆಚ್ಚಾಗಿ ಸೇವಿಸುವುದರಿಂದ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದಾಗಿ ತಿಳಿದು ಬಂದಿದೆ.
CDSCO ಪ್ರತಿ ತಿಂಗಳು ದೇಶದ ವಿವಿಧ ಭಾಗಗಳಲ್ಲಿ ವಿವಿಧ ಔಷಧಗಳ ಮಾದರಿ ಪರೀಕ್ಷೆ ನಡೆಸಿ ಅವುಗಳ ಗುಣಮಟ್ಟದ ಕುರಿತ ವರದಿ ಬಿಡುಗಡೆ ಮಾಡುತ್ತದೆ. ಇದೀಗ ಬಿಡುಗಡೆಯಾದ ಹೊಸ ವರದಿ ಅನ್ವಯ, ವಿಟಮಿನ್ ಸಿ, ವಿಟಮಿನ್ (Vitamin) 3 ಗುಳಿಗೆಗಳಾದ ಶೇಲ್‌ಕಾಲ್, ವಿಟಮಿನ್ ಬಿ ಕಾಂಪ್ಲೆಕ್ಸ್, ವಿಟಮಿನ್ ಸಿ ಸಾಫ್ಟ್‌ಜೆಲ್ಸ್, ಆ್ಯಂಟಿಆ್ಯಸಿಡ್ ಪಾನ್ ಡಿ (Anti Acid Pan-D), ಪ್ಯಾರಾಸಿಟಮಾಲ್ ಐಪಿ 500 ಎಂಜಿ, ಮಧುಮೇಹ ನಿಯಂತ್ರಣಕ್ಕೆ ಬಳಸುವ ಗ್ಲಿಮ್‌ಪಿರೈಡ್, ಅಧಿಕ ರಕ್ತದೊತ್ತಡಕ್ಕೆ ಬಳಸುವ ಟೆಲ್ಮಿಸಾರ್ಟಾನ್ ಸೇರಿದಂತೆ 53 ಔಷಧಗಳು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾಗಿದೆ.
ಈ ಔಷಧಗಳನ್ನು ಹೆಟಿರೋ ಡ್ರಗ್ಸ್, ಆಲ್ಕೆಮ್ ಲ್ಯಾಬ್, ಹಿಂದೂಸ್ತಾನ್ ಆ್ಯಂಟಿಬಯಾಟಿಕ್ಸ್ (Hindustan Antibiotics), ಕರ್ನಾಟಕ ಆ್ಯಂಟಿಬಯಾಟಿಕ್ಸ್ ಆ್ಯಂಡ್ ಫಾರ್ಮಾ ಲಿ., ಮೇಲ್ ಲೈಫ್ ಸೈನ್ಸೆಸ್, ಪ್ಯೂರ್ ಆ್ಯಂಡ್ ಕ್ಯೂರ್ ಹೆಲ್ತ್‌ಕೇರ್ ಮೊದಲಾದ ಸಂಸ್ಥೆಗಳು ಉತ್ಪಾದಿಸುತ್ತಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇನ್ನು ಅತಿ ಹೆಚ್ಚು ಬಳಸಲಾಗುವ ಆಲ್ಕೆಂ ಲ್ಯಾಬ್‌ನ (Alkem Lab) ಕ್ಲಾವಂ 625 ಮತ್ತು ಪಾನ್ ಡಿ ಔಷಧಗಳು ಕೂಡ ವಿಷಪೂರಿತವಾಗಿದೆ ಎಂದು ವರದಿ ಹೇಳಿದೆ. ಆದರೆ ವರದಿಯಲ್ಲಿ ವಿಷಪೂರಿತ ಎಂದು ಕಂಡುಬಂದ ಬ್ಯಾಚ್‌ನ ಔಷಧಗಳನ್ನು ತಾನು ಉತ್ಪಾದಿಸಿಲ್ಲ ಎಂದು ಕಂಪನಿ ಹೇಳಿಕೊಂಡಿದೆ.