ದೆಹಲಿ, ಏ. 22: ಭಾರತ ಫ್ರಾನ್ಸ್ ಜೊತೆ ಮಾಡಿಕೊಂಡಿರುವ ಯುದ್ಧ ವಿಮಾನಗಳ ಖರೀದಿ ಒಪ್ಪಂದದ ಪ್ರಕಾರ 5ನೇ ಬ್ಯಾಚ್ನ ರಫೇಲ್ ಯುದ್ಧ ವಿಮಾನಗಳು 8,000 ಕಿಲೋ ಮೀಟರ್ ಸಂಚರಿಸಿ ಫ್ರಾನ್ಸ್ನಿಂದ ಭಾರತಕ್ಕೆ ಬಂದಿಳಿದಿವೆ. ಈ ಕುರಿತಂತೆ ಭಾರತೀಯ ವಾಯುಪಡೆ ಮಾಹಿತಿ ಹಂಚಿಕೊಂಡಿದೆ.
ಭಾರತಕ್ಕೆ ಬಂದಿಳಿದ ಯುದ್ಧ ವಿಮಾನಗಳ ಪೈಕಿ ನಾಲ್ಕು ರಫೇಲ್ ವಿಮಾನಗಳು ಹೊಸ ಬ್ಯಾಚ್ನ ಭಾಗವಾಗಿದೆ ಎಂದು ಭಾರತೀಯ ವಾಯುಪಡೆ ತಿಳಿಸಿದೆ. ಆದರೆ, ಫ್ರಾನ್ಸ್ನಿಂದ ಭಾರತಕ್ಕೆ ಬಂದಿಳಿದ ಒಟ್ಟು ಯುದ್ಧ ವಿಮಾನಗಳ ಸಂಖ್ಯೆ ಇನ್ನೂ ತಿಳಿದು ಬಂದಿಲ್ಲ. ಫ್ರಾನ್ಸ್ನಿಂದ ಯುದ್ಧ ವಿಮಾನಗಳು ಹೊರಟಾಗ ದಾರಿ ಮಧ್ಯದಲ್ಲಿ ಬೇಕಾದ ಇಂಧನದ ಪೂರೈಕೆಯನ್ನು ಫ್ರಾನ್ಸ್ನ ವಾಯಪಡೆ ಮತ್ತು ಯುನೈಟೆಡ್ ಅರಬ್ ಎಮೀರೇಟ್ಸ್ (ಯುಎಇ) ನೆರವು ನೀಡಿದೆ ಎಂದು ತಿಳಿಸಿದೆ.
ಏಪ್ರಿಲ್ ತಿಂಗಳ ಮೊದಲನೇಯ ದಿನ 4ನೇ ಬ್ಯಾಚ್ನ 3 ರಫೇಲ್ ಯುದ್ಧ ವಿಮಾಗಳು ಭಾರತಕ್ಕೆ ಬಂದಿದ್ದವು.