ಚೆನ್ನೈ: ತಮಿಳುನಾಡಿನ ಕಡಲೂರು ಜಿಲ್ಲೆಯ ನೈವೇಲಿ ಲಿಗ್ನೈಟ್ ಕಾರ್ಪೊರೇಷನ್ ವಿದ್ಯುತ್ ಘಟಕದಲ್ಲಿ ಬಾಯ್ಲರ್ ಸ್ಫೋಟ ಮತ್ತೆ ಸಂಭವಿಸಿದ್ದು ಘಟನೆಯಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ.
ಮುಂಜಾನೆ ನಡೆದ ಘಟನೆಯಲ್ಲಿ 17 ಮಂದಿ ಗಾಯಗೊಂಡಿದ್ದು, ತೀವೃ ಒತ್ತಡದಿಂದ ಬಾಯ್ಲರ್ ಸ್ಪೋಟಗೊಂಡಿರುವುದಾಗಿ ವರದಿಯಾಗಿದೆ. ಅಲ್ಲದೇ ಗಾಯಗೊಂಡವರ ಆರೋಗ್ಯ ಸ್ಥಿತಿ ಕೂಡಾ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಇದೇ ಮೇ.7ರಂದು ಟಿಪಿಎಸ್‌ನ 6ನೇ ಘಟಕ ಸ್ಪೋಟಗೊಂಡಿತ್ತು, ಘಟನೆಯಲ್ಲಿ ಮೂವರು ಮೃತಪಟ್ಟು ಸಾಕಷ್ಟು ಮಂದಿ ಗಾಯಗೊಂಡಿದ್ದುರು. ಒಟ್ಟಾರೆ ಕಳೆದ 18 ತಿಂಗಲ್ಲಿ ಈ ವಿದ್ಯುತ್ ಘಟಕಲ್ಲಿ 5 ಬಾರಿ ಬಾಯ್ಲರ್ ಸ್ಪೋಟ ಸಂಭವಿಸಿದೆ.