Kerala : ಕೇರಳದಲ್ಲಿ(Kerala) ಆರು ವರ್ಷದ ಬಾಲಕನೊಬ್ಬ ನಿಂತಿದ್ದ ಕಾರಿಗೆ ಒರಗಿಕೊಂಡು ನಿಂತಿದ್ದ, ಇದನ್ನು ನೋಡಿದ ಕಾರು ಮಾಲಿಕ ಕೋಪಗೊಂಡು ಆ ಬಾಲಕನಿಗೆ ಒದ್ದಿರುವ ದ್ರಶ್ಯ ಸಿಸಿಟಿವಿಯಲ್ಲಿ(6 year boy was kicked) ಸೆರೆಯಾಗಿದೆ.
ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು,

ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆದ ಬಳಿಕ ಆರೋಪಿಯನ್ನು ಇಂದು ಬೆಳಗ್ಗೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
27 ಸೆಕೆಂಡ್‌ಗಳ ವೀಡಿಯೊದಲ್ಲಿ ಆರು ವರ್ಷದ(6 year boy was kicked) ಬಾಲಕನೊಬ್ಬ ಜನನಿಬಿಡ ರಸ್ತೆಯಲ್ಲಿ ನಿಲ್ಲಿಸಿದ ಕಾರಿನ ಮೇಲೆ ಒರಗಿಕೊಂಡು ನಿಂತಿದ್ದನ್ನು ಗಮನಿಸಿದ ಕಾರಿನ ಮಾಲಿಕ,
ಇದ್ದಕ್ಕಿದ್ದಂತೆ ಕಾರಿನ ಡ್ರೈವರ್ ಸೀಟಿನಿಂದ ಎದ್ದು ಹೊರಬಂದು, ಹುಡುಗನಿಗೆ ರಭಸವಾಗಿ ಒದ್ದಿದ್ದಾನೆ. ದಿಗ್ಭ್ರಮೆಗೊಂಡ ಬಾಲಕ, ತಾನು ಏನು ಮಾಡಿದೆ? ಎಂಬ ಗೊಂದಲದಿಂದಲೇ ಅತ್ತ-ಇತ್ತ ನೋಡಿ ಸುಮ್ಮನೆ ನಿಂತಿದ್ದಾನೆ.
ಬಾಲಕ ಹೆದರಿ, ಬೇಸರದಿಂದ ಕಾರಿನಿಂದ ದೂರ ಸರಿದು ನಿಂತಿರುವುದು ದೃಶ್ಯದಲ್ಲಿ ಕಾಣಬಹುದು.
ಈ ಒಂದು ವೀಡಿಯೋ ನೋಡಿದ ಬಿಜೆಪಿ ಪಕ್ಷ(BJP Party), ದೇವರ ನಾಡು ಕೇರಳ ಈಗ ದೆವ್ವದ ನಾಡಾಗಿ ಮಾರ್ಪಟ್ಟಿದೆ ಎಂದು ಅಪಹಾಸ್ಯ ಮಾಡಿದೆ.
ಕಾರಿನ ಮೇಲೆ ಒರಗಿದ್ದಕ್ಕಾಗಿ ಆರು ವರ್ಷದ ರಾಜಸ್ಥಾನ ಮೂಲದ ಬಾಲಕನನ್ನು ಒದ್ದಿರುವ ಆರೋಪಿಗೆ ಪೊಲೀಸರು ತಕ್ಕ ಶಿಕ್ಷೆ ವಿಧಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಈ ಅಮಾನವೀಯ ಘಟನೆ ಕಣ್ಣೂರಿನ ತಲಶ್ಶೇರಿಯಲ್ಲಿ ನಡೆದಿದ್ದು, ವರದಿಗಳ ಪ್ರಕಾರ, ಬಾಲಕ ರಾಜಸ್ಥಾನದಿಂದ ವಲಸೆ ಬಂದ ಕಾರ್ಮಿಕರ ಕುಟುಂಬಕ್ಕೆ ಸೇರಿದವನು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಆರೋಪಿಯನ್ನು ಕೇರಳದ ಪೊನ್ಯಂಪಾಲಂ ಮೂಲದ ಶಿಹಶಾದ್ ಎಂದು ಗುರುತಿಸಲಾಗಿದ್ದು, ಈ ಘಟನೆ ಬಗ್ಗೆ ಪೊಲೀಸರು ಪ್ರಶ್ನಿಸಿದಾಗ,
ಆತ ಬಾಲಕ ತನ್ನ ವಾಹನದ ಬಳಿ ತುಂಬ ಸಮಯ ಒರಗಿ ನಿಂತಿದ್ದ, ಹೀಗಾಗಿ ನಾನು ಕಾಲಿನಲ್ಲಿ ಆತನನ್ನು ಥಳಿಸಿದೆ ಎಂದು ಹೇಳುವ ಮೂಲಕ ತನ್ನ ಅಮಾನವೀಯ ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾನೆ.
ಪೊಲೀಸರು ಘಟನೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ ಎಂದು ಪಿಟಿಐ ವರದಿ(PTI Report) ಮಾಡಿದೆ.
ವೀಡಿಯೋ ವೀಕ್ಷಿಸಲು ಕ್ಲಿಕ್ ಮಾಡಿ : https://twitter.com/surendranbjp/status/1588395265978834949?s=20&t=aeat5K3-w2O3E_0iU6gBOA
ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ವಿಧಾನಸಭಾ ಸ್ಪೀಕರ್ ಮತ್ತು ತಲಶ್ಶೇರಿ ಶಾಸಕ ಎಎನ್ ಶಂಸೀರ್, ಶೀಘ್ರದಲ್ಲೇ ಪ್ರಕರಣ ದಾಖಲಿಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.