65 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ

ಬೆಂಗಳೂರು, ಅ. 28: ಕೊರೊನಾ ಭೀತಿಯ ನಡುವೆಯೂ ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ಈ ವರ್ಷ ಕರ್ನಾಟಕವು 65ನೇ ರಾಜ್ಯೋತ್ಸವ ಆಚರಿಸುತ್ತಿದ್ದು,

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 65 ಮಂದಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಪ್ರತಿವರ್ಷದಂತೆ ಈ ವರ್ಷ ರಾಜ್ಯೋತ್ಸವ ದಿನವಾದ ನ.1ರಂದು ಪ್ರಶಸ್ತಿ ಪ್ರದಾನ ಮಾಡುತ್ತಿಲ್ಲ. ನವೆಂಬರ್ 7ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಸರಳ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಚಿವ ಸಿ.ಟಿ ರವಿ ತಿಳಿಸಿದರು.

ಕ್ರೀಡಾ ಕ್ಷೇತ್ರ ಹೊರತುಪಡಿಸಿ ಉಳಿದ ಎಲ್ಲ ಕಡೆ 60 ವರ್ಷ ಮೇಲ್ಪಟ್ಟವರಿಗೆ ಪ್ರಶಸ್ತಿ ನೀಡಲಾಗಿದೆ ಹಾಗೂ ಸಾಮಾಜಿಕ ನ್ಯಾಯ ಒದಗಿಸಲಾಗಿದೆ. 26 ವಿವಿಧ ಕ್ಷೇತ್ರಗಳನ್ನು ಗುರುತಿಸಿಲಾಗಿದ್ದು, ಅನೇಕ ಶಿಫಾರಸ್ಸುಗಳು ಬಂದಿದ್ದರೂ ಅರ್ಹತೆ ಗಮನಿಸಿ ಪ್ರಶಸ್ತಿ ನೀಡಲಾಗಿದೆ. ಪ್ರತಿ ಜಿಲ್ಲೆಗೂ ಒಂದಾದರೂ ರಾಜ್ಯೋತ್ಸವ ಪ್ರಶಸ್ತಿ ಇರಬೇಕು ಎಂಬುದನ್ನು ಪರಿಗಣಿಸಲಾಗಿದೆ ಎಂದರು.

ಬಿಜೆಪಿ ಮತ್ತು ಆರ್ ಎಸ್ ಎಸ್ ಪೋಷಿತವಾದ ಯುವ ಬ್ರಿಗೇಡ್‌ ಕೂಡ ಪ್ರಶಸ್ತಿಗೆ ಆಯ್ಕೆಯಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸಿ.ಟಿ. ರವಿ, ಸಂಘ ಸಂಸ್ಥೆ ಕ್ಷೇತ್ರದಲ್ಲಿ ಸಾಧನೆ ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಯಾವುದೇ ನೀತಿ ನಿಯಮಗಳನ್ನು ಮೀರಿಲ್ಲ. ಆರ್ ಎಸ್ ಎಸ್ ಪೋಷಿತ ಆಗಿರುವುದಕ್ಕೆ ಪ್ರಶಸ್ತಿ ಕೊಡಬಾರದು ಎಂದೇನೂ ಇಲ್ಲ. ಸಂಘದ ಸೇವೆಯನ್ನು ಪರಿಗಣಿಸಿ ಕೊಟ್ಟಿದ್ದೇವೆ. ಈ ವಿಚಾರವಾಗಿ ಯಾರಿಂದಲೂ ಒತ್ತಡ ಬಂದಿರುವುದಿಲ್ಲ ಎಂದು ತಿಳಿಸಿದ್ದಾರೆ.

ಸಾಹಿತ್ಯ ಕ್ಷೇತ್ರದ ಸಾಧನೆಗೆ, ಪ್ರೋ ಸಿಪಿ ಸಿದ್ಧಾಶ್ರಮ, ಧಾರವಾಡ, ವಿ. ಮುನಿ ವೆಂಕಟಪ್ಪ, ಕೋಲಾರ, ರಾಮಣ್ಣ ಬ್ಯಾಟಿ ( ವಿಶೇಷ ಚೇತನ), ಗದಗ, ವಲೇರಿಯನ್ ಡಿಸೋಜ (ವಲ್ಲಿವಗ್ಗ), ದಕ್ಷಿಣ ಕನ್ನಡ, ಡಿ ಎನ್ ಅಕ್ಕಿ, ಯಾದಗಿರಿ ಅವರಿಗೆ.

ಸಂಗೀತ ಕ್ಷೇತ್ರದ ಸಾಧನೆಗೆ ಹಂಬಯ್ಯ ನೂಲಿ, ರಾಯಚೂರು, ಅನಂತ ತೇರದಾಳ, ಬೆಳಗಾವಿ, ಬಿ.ವಿ ಶ್ರೀನಿವಾಸ್ , ಬೆಂಗಳೂರು ನಗರ, ಗಿರಿಜಾ ನಾರಾಯಣ , ಬೆಂಗಳೂರು ನಗರ, ಕೆ ಲಿಂಗಪ್ಪ ಶೇರಿಗಾರ ಕಟೀಲು, ದಕ್ಷಿಣ ಕನ್ನಡ ಅವರಿಗೆ ಲಭಿಸಿದೆ.

ನ್ಯಾಯಾಂಗ ಕ್ಷೇತ್ರದ ಸಾಧನೆಗೆ ಕೆ.ಎನ್. ಭಟ್, ಬೆಂಗಳೂರು, ಎಂಕೆ ವಿಜಯಕುಮಾರ್, ಉಡುಪಿ ಅವರು ಆಯ್ಕೆಗೊಂಡಿದ್ದಾರೆ.

ಮಾಧ್ಯಮ ಕ್ಷೇತ್ರದ ಸಾಧನೆಗೆ ಸಿ. ಮಹೇಶ್ವರನ್, ಮೈಸೂರು, ಟಿ. ವೆಂಕಟೇಶ್ (ಈ ಸಂಜೆ), ಬೆಂಗಳೂರು ಅವರು ಆಯ್ಕೆಗೊಂಡಿದ್ದಾರೆ.

ಯೋಗ ಕ್ಷೇತ್ರದಲ್ಲಿನ ಸಾಧನೆಗೆ ಡಾ. ಎ.ಎಸ್. ಚಂದ್ರಶೇಖರ್, ಮೈಸೂರು ಅವರು ಆಯಕ್ಎಗೊಂಡಿದ್ದು, ಶಿಕ್ಷಣ ಕ್ಷೇತ್ರದ ಸಾಧನೆಗೆ ಎಂ.ಎನ್. ಷಡಕ್ಷರಿ, ಚಿಕ್ಕಮಗಳೂರು, ಡಾ. ಆರ್ ರಾಮಕೃಷ್ಣ, ಚಾಮರಾಜನಗರ, ಡಾ. ಎಂಜಿ ಈಶ್ವರಪ್ಪ, ದಾವಣಗೆರೆ,  ಡಾ. ಪುಟ್ಟಸಿದ್ದಯ್ಯ, ಮೈಸೂರು, ಅಶೋಕ್ ಶೆಟ್ಟರ್, ಬೆಳಗಾವಿ, ಡಿಎಸ್ ದಂಡಿನ್, ಗದಗ ಅವರಿಗೆ ಲಭಿಸಲಿದೆ.

ಹೊರನಾಡು ಕನ್ನಡಿಗರಾದ ಕುಸುಮೋದರ ದೇರಣ್ಣ ಶೆಟ್ಟಿ ಕೇಲ್ತಡ್ಕ, ದಕ್ಷಿಣ ಕನ್ನಡ, ವಿದ್ಯಾ ಸಿಂಹಾಚಾರ್ಯ ಮಾಹುಲಿ, ಮಹಾರಾಷ್ಟ್ರ ಮಾಲುಂಡ, ಮುಂಬೈ ಇವರು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಕ್ರೀಡಾ ಕ್ಷೇತ್ರದಲ್ಲಿ ಎಚ್‌ಬಿ ನಂಜೇಗೌಡ, ತುಮಕೂರು, ಉಷಾರಾಣಿ, ಬೆಂಗಳೂರು ಸಂಕೀರ್ಣ, ಡಾ.ಕೆವಿ ರಾಜು, ಕೋಲಾರ, ನಂ. ವೆಂಕೋಬರಾವ್, ಹಾಸನ, ಡಾ. ಕೆಎಸ್ ರಾಜಣ್ಣ (ವಿಕಲಚೇತನ), ಮಂಡ್ಯ,  ವಿ. ಲಕ್ಷ್ಮೀನಾರಾಯಣ (ನಿರ್ಮಾಣ್) ಮಂಡ್ಯ ಇವರಿಗೆ ಲಭಿಸಲಿದೆ.

ಯೂತ್‌ ಫಾರ್ ಸೇವಾ, ಬೆಂಗಳೂರು, ದೇವದಾಸಿ ಸ್ವಾವಲಂಬನ ಕೇಂದ್ರ, ಬಳ್ಳಾರಿ, ಬೆಟರ್ ಇಂಡಿಯಾ, ಬೆಂಗಳೂರು, ಯುವ ಬ್ರಿಗೇಡ್, ಬೆಂಗಳೂರು ಗ್ರಾಮಾಂತರ, ಧರ್ಮೋತ್ಥಾನ ಟ್ರಸ್ಟ್‌, ಧರ್ಮಸ್ಥಳ, ದಕ್ಷಿಣ ಕನ್ನಡ ಈ ಸಂಘ ಸಂಸ್ಥೆಗಳಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಲಿದೆ.

ಸಮಾಜಸೇವಾ ಕ್ಷೇತ್ರದ ಸಾಧನೆಗೆ ಎನ್ ಎಸ್ (ಕುಂದರಗಿ) ಹೆಗಡೆ, ಉತ್ತರ ಕನ್ನಡ, ಪ್ರೇಮಾ ಕೋಮಂಡರಾಮ ಶ್ರೇಷ್ಠಿ, ಚಿಕ್ಕಮಗಳೂರು, ಮಣೆಗಾರ್ ಮೀರಾನ್ ಸಾಹೇಬ್, ಉಡುಪಿ, ಮೋಹಿನಿ ಸಿದ್ದೇಗೌಡ, ಚಿಕ್ಕಮಗಳೂರು ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಲಿವೆ.

ವೈದ್ಯಕೀಯ ಕ್ಷೇತ್ರದ ಸಾಧನೆಗೆ ಡಾ. ಅಶೋಕ್ ಸೊನ್ನದ್, ಬಾಗಲಕೋಟೆ, ಡಾ. ಬಿಎಸ್ ಶ್ರೀನಾಥ್, ಶಿವಮೊಗ್ಗ, ಡಾ. ಎ. ನಾಗರತ್ನ, ಬಳ್ಳಾರಿ, ಡಾ. ವೆಂಕಟಪ್ಪ ರಾಮನಗರ ಇವರಿಗೆ ಲಭಿಸಲಿದೆ.

ಕೃಷಿ ಕ್ಷೇತ್ರದ ಸಾಧನೆಗೆ ಸುರತ್ ಸಿಂಗ್ ಕನೂರ್ ಸಿಂಗ್ ರಜಪೂತ್, ಬೀದರ್, ಎಸ್‌ವಿ ಸುಮಂಗಲಮ್ಮ ವೀರಭದ್ರಪ್ಪ, ಚಿತ್ರದುರ್ಗ, ಡಾ. ಸಿದ್ರಾಮಪ್ಪ ಬಸವಂತರಾವ್ ಪಾಟೀಲ್, ಕಲಬುರಗಿ ಇವರಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.

ಪರಿಸರಕ್ಕೆ ಸಂಬಂಧಿಸಿದ ಸಾಧನೆಗೆ ಅಮರ ನಾರಾಯಣ, ಚಿಕ್ಕಬಳ್ಳಾಪುರ, ಎನ್‌ಡಿ ಪಾಟೀಲ್, ವಿಜಯಪುರ ಇವರಿಗೆ, ಹಾಗೂ ವಿಜ್ಞಾನ/ತಂತ್ರಜ್ಞಾನದ ಸಾಧನೆಗೆ ಪ್ರೊ. ಉಡುಪಿ ಶ್ರೀನಿವಾಸ, ಉಡುಪಿ, ಡಾ. ಚಿಂದಿ ವಾಸುದೇವಪ್ಪ, ಶಿವಮೊಗ್ಗ ಇವರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಲಭಿಸಲಿದೆ.

ಸಹಕಾರ ಸಂಬಂಧಿತ ಸಾಧನೆಗೆ ಡಾ. ಸಿಎನ್ ಮಂಜೇಗೌಡ, ಬೆಂಗಳೂರು, ಬಯಲಾಟದ ಸಾಧನೆಗೆ ಕೆಂಪವ್ವ ಹರಿಜನ, ಬೆಳಗಾವಿ, ಚೆನ್ನಬಸಪ್ಪ ಬೆಂಡಿಗೇರಿ, ಹಾವೇರಿ, ಯಕ್ಷಗಾನದ ಸಾಧನೆಗೆ ಬಂಗಾರ್ ಆಚಾರಿ, ಚಾಮರಾಜನಗರ, ಎಂ.ಕೆ ರಮೇಶ್ ಆಚಾರ್ಯ, ಶಿವಮೊಗ್ಗ, ರಂಗಭೂಮಿಯ ಸಾಧನೆಗೆ ಅನಸೂಯಮ್ಮ, ಹಾಸನ, ಎಚ್. ಷಡಾಕ್ಷರಪ್ಪ, ದಾವಣಗೆರೆ, ತಿಪ್ಪೇಸ್ವಾಮಿ, ಚಿತ್ರದುರ್ಗ ಇವರಿಗೆ ಲಭಿಸಲಿದೆ.

ಚಲನಚಿತ್ರ ಬಿಎಸ್ ಬಸವರಾಜ್, ತುಮಕೂರು, ಎ.ಟಿ. ರಘು, ಕೊಡಗು ಇವರಿಗೆ, ಚಿತ್ರಕಲಾ ಕ್ಷೇತ್ರದ ಸಾದನೆಗೆ ಎಂಜೆ ವಾಚೇದ್ ಮಠ, ಧಾರವಾಡ, ಜಾನಪದ ಗುರುರಾಜ ಹೊಸಕೋಟೆ, ಬಾಗಲಕೋಟೆ, ಡಾ. ಹಂಪನಹಳ್ಳಿ ತಿಮ್ಮೇಗೌಡ, ಹಾಸನ, ಶಿಲ್ಪಕಲಾ ಕ್ಷೇತ್ರದ ಸಾಧನೆಗೆ ಎನ್‌ಎಸ್ ಜನಾರ್ದನ ಮೂರ್ತಿ, ಮೈಸೂರು ಇವರಿಗೆ.

ನೃತ್ಯ ಕ್ಷೇತ್ರದ ಸಾಧನೆಗೆ ನಾಟ್ಯ ವಿದುಷಿ ಜ್ಯೋತಿ ಪಟ್ಟಾಭಿರಾಮ್ ಇವರಿಗೆ, ಜಾನಪದ/ತೊಗಲು ಗೊಂಬೆಯಾಟದ ಸಾದನೆಗೆ ಕೇಶಪ್ಪ ಶಿಳ್ಳೆಕ್ಯಾತರ, ಕೊಪ್ಪಳ ಇವರಿಗೆ ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.

Latest News

ದೇಶ-ವಿದೇಶ

ರೇಷನ್ ಕಾರ್ಡ್ ಹೊಂದಿರುವ ಬಡವರಿಗೆ ರಾಷ್ಟ್ರಧ್ವಜ ಖರೀದಿಸುವಂತೆ ಒತ್ತಾಯಿಸುತ್ತಿದ್ದಾರೆ : ರಾಹುಲ್ ಗಾಂಧಿ

ಇದು ಬಿಜೆಪಿ ಸರ್ಕಾರದ ಪ್ರಚಾರ ಪಿತೂರಿ. ಈ ರೀತಿ ಮಾಡುವ ಮೂಲಕ ಬಿಜೆಪಿಯು “ರಾಷ್ಟ್ರೀಯತೆ”ಯನ್ನು ಮಾರಾಟ ಮಾಡುತ್ತಿದೆ ಮತ್ತು ಬಡವರ ಆತ್ಮಗೌರವಕ್ಕೆ ಧಕ್ಕೆ ತಂದಿದೆ ಎಂದು ಆರೋಪಿಸಿದ್ದಾರೆ.

ರಾಜಕೀಯ

`ಬ್ಲ್ಯಾಕ್‌ ಮೇಲ್‌ ಕುಮಾರಸ್ವಾಮಿʼ ; ಕಣ್ಣೀರ ಕೋಡಿಯಿಂದ ಕುಟುಂಬಕ್ಕೆ ಲಾಭವೇ ಹೊರತು ಜನತೆಗೇನು ಲಾಭ? : ಅಶ್ವಥ್ ನಾರಾಯಣ್‌

ನೀವು ಈವರೆಗೆ ಹೇಳಿದ ಸುಳ್ಳುಗಳನ್ನು ಎಣಿಸಲು ಸಾಧ್ಯವೇ? ಎಂದು ಸಚಿವ(Minister) ಅಶ್ವಥ್‌ ನಾರಾಯಣ್(Ashwath Narayan) ಪ್ರಶ್ನಿಸಿದ್ದಾರೆ.

ದೇಶ-ವಿದೇಶ

ಇಬ್ಬರು ಭಯೋತ್ಪಾದಕರನ್ನು ಹತ್ಯೆಗೈದ ಭಾರತೀಯ ಸೇನೆ ; ದಾಳಿಯಲ್ಲಿ ಮೂವರು ಯೋಧರು ಹುತಾತ್ಮ!

ಸ್ವಾತಂತ್ರ್ಯ ದಿನಾಚರಣೆ(Independence Day) ಸಂದರ್ಭದಲ್ಲಿ ಉಗ್ರರು ದೇಶದ ವಿವಿಧ ಭಾಗಗಳಲ್ಲಿ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.

ದೇಶ-ವಿದೇಶ

‘ಡಾನಿ’ ಬುಡಕಟ್ಟು ಜನಾಂಗದಲ್ಲಿ ಬೆರಳನ್ನು ಕತ್ತರಿಸುವುದೇ ಸಂಪ್ರದಾಯವಂತೆ!

ಇಂಡೋನೇಷ್ಯಾದ, ಪಪುವಾ ಗಿನಿಯಾ ದ್ವೀಪದಲ್ಲಿ ವಾಸಿಸುವ ಎಲ್ಲಾ ಡಾನಿ ಬುಡಕಟ್ಟಿನ ಮಹಿಳೆಯರನ್ನು ಕತ್ತರಿಸಿದ ಬೆರಳುಗಳಿಂದ ಬದುಕಲು ಒತ್ತಾಯಿಸಲಾಗುತ್ತದೆ.