ಲಂಡನ್, ಜು. 31: ದತ್ತಾಂಶ ಸಂರಕ್ಷಣಾ ನಿಯಮವನ್ನು (ಜಿಡಿಪಿಆರ್) ಉಲ್ಲಂಘಿಸಿ ವೈಯಕ್ತಿಕ ದತ್ತಾಂಶ ಬಳಸಿದ್ದಕ್ಕಾಗಿ ಯುರೋಪಿಯನ್ ಒಕ್ಕೂಟವು ‘ಅಮೆಜಾನ್ ಡಾಟ್ ಕಾಂ’ಗೆ 886.6 ದಶಲಕ್ಷ ಡಾಲರ್ (ಸುಮಾರು ₹6,500 ಕೋಟಿ) ದಂಡ ವಿಧಿಸಿದೆ.
ಲಕ್ಸೆಂಬರ್ಗ್ನ ರಾಷ್ಟ್ರೀಯ ದತ್ತಾಂಶ ಸಂರಕ್ಷಣಾ ಆಯೋಗವು (ಸಿಎನ್ಪಿಡಿ) ಕಂಪನಿಯ ಯುರೋಪ್ ಘಟಕಕ್ಕೆ ದಂಡ ವಿಧಿಸಿ ಜುಲೈ 16ರಂದು ಆದೇಶಿಸಿತ್ತು ಎಂದು ಅಮೆಜಾನ್ ತಿಳಿಸಿದೆ.
‘ಆಯೋಗದ ನಿರ್ಧಾರವು ಸರಿಯಾದ ಕ್ರಮವಲ್ಲ ಎಂದು ಭಾವಿಸುತ್ತೇವೆ. ಈ ವಿಚಾರದಲ್ಲಿ ಬಲವಾಗಿ ನಮ್ಮನ್ನು ನಾವು ರಕ್ಷಿಸಿಕೊಳ್ಳುವ ಉದ್ದೇಶ ಹೊಂದಿದ್ದೇವೆ’ ಎಂದೂ ಕಂಪನಿ ತಿಳಿಸಿದೆ.