Bengaluru : ರಾಯಲ್ ಚಾಲೆಂಜರ್ಸ್(Royal Challengers) ಬೆಂಗಳೂರು ತಂಡ 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್(Indian Premier League) ಟೂರ್ನಿಗೆ ಈಗ ಸಂಪೂರ್ಣ ಸಜ್ಜಾಗಿದೆ.
2022 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಆಟಗಾರರ ಕೊರತೆ ಇದ್ದ ಕಾರಣ ಟ್ರೋಫಿ ಗೆಲ್ಲಲಾಗಲಿಲ್ಲ ಎಂಬ ಕಾರಣಕ್ಕಾಗಿ ತನ್ನಲ್ಲಿನ ಕೊರತೆಗಳನ್ನು ನೀಗಿಸಿಕೊಳ್ಳುವ ನಿಟ್ಟಿನಲ್ಲಿ ಐಪಿಎಲ್ 2023 ಟೂರ್ನಿ ಸಲುವಾಗಿ ನಡೆದ ಮಿನಿ ಆಕ್ಷನ್‌ನಲ್ಲಿ ಕೆಲ ಅಗತ್ಯದ ಆಟಗಾರರನ್ನು ಸೇರ್ಪಡೆ ಮಾಡಿಕೊಂಡಿದೆ.
ಎಂಟೂವರೆ ಕೋಟಿ ರೂ. ದೊಡ್ಡ ಮೊತ್ತದೊಂದಿಗೆ ಹರಾಜಿನಲ್ಲಿ ಪಾಲ್ಗೊಂಡಿದ್ದ ಚಾಲೆಂಜರ್ಸ್‌ನಲ್ಲಿ , 7 ಕೋಟಿ ರೂ. ಖರ್ಚು ಮಾಡಿ 7 ಆಟಗಾರರನ್ನು ಆಯ್ಕೆ ಮಾಡಿದೆ. ಹರಾಜಿಗೂ ಮೊದಲು ಆರ್‌ಸಿಬಿ ತನ್ನ ಪ್ರಮುಖ ಆಟಗಾರರನ್ನು ಉಳಿಸಿಕೊಂಡು ಅವರಲ್ಲಿ 5 ಆಟಗಾರರನ್ನು ಬಿಡುಗಡೆ ಮಾಡಿ ಇದೀಗಾ ಹೊಸದಾಗಿ 7 ಆಟಗಾರರನ್ನು ತಮ್ಮ ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದೆ.
ಇದನ್ನೂ ಓದಿ : https://vijayatimes.com/statement-on-k-sudhakar/
16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಸಲುವಾಗಿ ನಡೆದ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಐಪಿಎಲ್ 2023 ಟೂರ್ನಿಯ ಮಿನಿ ಹರಾಜಿನಲ್ಲಿ 7 ಆಟಗಾರರನ್ನು ತಮ್ಮದಾಗಿಸಿಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು. ಅದಲ್ಲದೆ ಇಂಗ್ಲೆಂಡ್‌ನ ಆಲ್‌ರೌಂಡರ್ ವಿಲ್ ಜಾಕ್ಸ್ ಖರೀದಿಗೆ 3.2 ಕೋಟಿ ರೂ.ಗಳನ್ನು ಖರ್ಚು ಆರ್‌ಸಿಬಿ ಮಾಡಿದೆ. ಒಟ್ಟಾರೆಯಾಗಿ 8.75 ಕೋಟಿ ರೂ. ಮೊತ್ತದೊಂದಿಗೆ ಆರ್‌ಸಿಬಿ ಹರಾಜಿನಲ್ಲಿ ಪಾಲ್ಗೊಂಡಿತ್ತು.
- ಐಪಿಎಲ್ 2023 ಟೂರ್ನಿಯ ಮಿನಿ ಆಕ್ಷನ್ ಬಳಿಕ ಆರ್‌ಸಿಬಿ ತಂಡ(ಬೆಲೆ ರೂ.ಗಳಲ್ಲಿ) ಈ ಕೆಳಗಿನಂತಿವೆ :
- ದಿನೇಶ್ ಕಾರ್ತಿಕ್, ಬ್ಯಾಟ್ಸ್‌ಮನ್/ವಿಕೆಟ್ ಕೀಪರ್: 5.5 ಕೋಟಿ
- ಶಹಬಾಜ್ ಅಹಮದ್, ಆಲ್ ರೌಂಡರ್: 2.4 ಕೋಟಿ
- ರಜತ್ ಪಾಟಿದಾರ್, ಬ್ಯಾಟ್ಸ್‌ಮನ್: 20 ಲಕ್ಷ
- ಅನುಜ್ ರಾವತ್, ಬ್ಯಾಟ್ಸ್‌ಮನ್/ವಿಕೆಟ್ ಕೀಪರ್: 3.4 ಕೋಟಿ
- ಆಕಾಶ್ ದೀಪ್, ಬೌಲರ್: 20 ಲಕ್ಷ
- ವಿರಾಟ್ ಕೊಹ್ಲಿ, ಬ್ಯಾಟ್ಸ್‌ಮನ್: 15 ಕೋಟಿ
- ಗ್ಲೆನ್ ಮ್ಯಾಕ್ಸ್‌ವೆಲ್, ಆಲ್ ರೌಂಡರ್: 11 ಕೋಟಿ
- ಮೊಹಮ್ಮದ್ ಸಿರಾಜ್, ಬೌಲರ್: 7 ಕೋಟಿ
- ಫಾಫ್ ಡು’ಪ್ಲೆಸಿಸ್, ಬ್ಯಾಟ್ಸ್‌ಮನ್: 7 ಕೋಟಿ
- ಹರ್ಷಲ್ ಪಟೇಲ್, ಬೌಲರ್: 10.75 ಕೋಟಿ
- ವನಿಂದು ಹಸರಂಗ, ಬೌಲರ್: 10.75 ಕೋಟಿ
- ಡೇವಿಡ್ ವಿಲ್ಲೀ, ಬೌಲರ್: 2 ಕೋಟಿ
- ರೀಸ್ ಟಾಪ್ಲಿ, ಬೌಲರ್: 1.9 ಕೋಟಿ
- ಹಿಮಾಂಶು ಶರ್ಮಾ, ಬೌಲರ್: 20 ಲಕ್ಷ
- ವಿಲ್ ಜಾಕ್ಸ್, ಬ್ಯಾಟ್ಸ್‌ಮನ್: 3.2 ಕೋಟಿ
- ಮನೋಜ್ ಭಾಂಡಗೆ, ಆಲ್ ರೌಂಡರ್: 20 ಲಕ್ಷ
- ರಾಜನ್ ಕುಮಾರ್, ಬೌಲರ್: 70 ಲಕ್ಷ
- ಅವಿನಾಶ್ ಸಿಂಗ್, ಬೌಲರ್: 60 ಲಕ್ಷ
ಇದನ್ನೂ ನೋಡಿ : https://youtu.be/k0c1QubEByI ಯಾರಾಗ್ತಾರೆ ಸಿ ಎಂ ? ಈ ಬಾರಿ ಸಿ ಎಂ ಸೀಟ್ ಯಾರಿಗೇ?? ಜನಸಾಮಾನ್ಯರ ಅಭಿಪ್ರಾಯ ಕೇಳೋಣ ಬನ್ನೀ.
- ಸೋನು ಯಾದವ್, ಆಲ್ ರೌಂಡರ್: 20 ಲಕ್ಷ
- ಜೋಶ್ ಹ್ಯಾಜಲ್‌ವುಡ್, ಬೌಲರ್: 7.75 ಕೋಟಿ
- ಮಹಿಪಾಲ್ ಲೊಮ್ರೋರ್, ಆಲ್ ರೌಂಡರ್: 95 ಲಕ್ಷ
- ಫಿನ್ ಆಲೆನ್, ಬ್ಯಾಟ್ಸ್‌ಮನ್/ವಿಕೆಟ್ ಕೀಪರ್: 80 ಲಕ್ಷ
- ಸುಯಶ್ ಪ್ರಭುದೇಸಾಯ್, ಬ್ಯಾಟ್ಸ್‌ಮನ್: 30 ಲಕ್ಷ
- ಕರ್ಣ್ ಶರ್ಮಾ, ಬ್ಯಾಟ್ಸ್‌ಮನ್: 50 ಲಕ್ಷ
- ಸಿದ್ಧಾರ್ಥ್ ಕೌಲ್, ಬ್ಯಾಟ್ಸ್‌ಮನ್: 75 ಲಕ್ಷ
- ಪಂಕಜಾ.ಎಸ್