vijaya times advertisements
Visit Channel

Heart Health : ಹೃದಯದ ಆರೋಗ್ಯಕ್ಕಾಗಿ ಈ 7 ಸೂತ್ರಗಳನ್ನು ಅನುಸರಿಸಿ

Heart

Health : ಇತ್ತೀಚಿನ ದಿನಗಳಲ್ಲಿ ಹೃದ್ರೋಗದ (Heart) ಸಮಸ್ಯೆಗಳು ಹೆಚ್ಚಾಗುತ್ತಿದ್ದು, ಯುವಜನತೆ ಕೂಡಾ ಹೃದ್ರೋಗದಂತ ಗಂಭೀರ ರೋಗಗಳಿಗೆ ತುತ್ತಾಗುತ್ತಿದ್ದಾರೆ.

ಹೀಗಾಗಿ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತಿಮುಖ್ಯವಾಗಿದೆ. ಹೃದಯದ ಆರೈಕೆ ಸರಿಯಾಗಿದ್ದರೆ, ಆಗ ಯಾವುದೇ ರೀತಿಯ ಅನಾರೋಗ್ಯಗಳು ಕಾಡದು.

7 Tips for heart health

ಆಧುನಿಕ ಜೀವನಶೈಲಿ ಮತ್ತು ಆಹಾರ ಪದ್ದತಿ ಹೃದಯದ ಕಾಯಿಲೆಗಳು ಬರಲು ಕಾರಣವಾಗಿವೆ. ಇದನ್ನು ದೂರವಿಡಬೇಕಾದರೆ ಈ ಕೆಳಗಿನ ಸೂತ್ರಗಳನ್ನು ಅನುಸರಿಸುವುದು ಸೂಕ್ತ

ನಿದ್ರೆ : ಪ್ರತಿದಿನ ಎಂಟು ಗಂಟೆಗಳ ಕಾಲ ಸರಿಯಾಗಿ ನಿದ್ರೆ (Sleep) ಮಾಡಬೇಕು. ನಿದ್ರೆಯೂ ಹೃದಯದ ಆರೋಗ್ಯದಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ.

ಸರಿಯಾಗಿ ನಿದ್ರೆ ಮಾಡುವುದರಿಂದ ದೇಹವು ಸೆರೊಟೊನಿನ್ ಹಾರ್ಮೋನ್ ಅನ್ನು ಹೆಚ್ಚು ಬಿಡುಗಡೆ ಮಾಡುತ್ತದೆ. ಇದರಿಂದ ಒತ್ತಡ ಕಡಿಮೆಯಾಗುತ್ತದೆ. ಇನ್ನು ನಿದ್ರಾಹೀನತೆಯು ಹೃದ್ರೋಗ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳನ್ನು ಸೃಷ್ಟಿಸುತ್ತದೆ.

heart

ಒತ್ತಡ ನಿಯಂತ್ರಣ : ಅತಿಯಾದ ಒತ್ತಡವು ಹೃದಯದ ಸ್ನಾಯುಗಳಿಗೆ ಹಾನಿ ಉಂಟು ಮಾಡುವುದು. ಹೀಗಾಗಿ ಯೋಗ ಮತ್ತು ಧ್ಯಾನದ ಮೂಲಕ ಒತ್ತಡವನ್ನು ನಿಯಂತ್ರಿಸಬೇಕು.

ಇದನ್ನೂ ಓದಿ : https://vijayatimes.com/meesho-gives-11-day-leave/

ಸೋಡಿಯಂ : ಸಂಸ್ಕರಿಸಿದ, ಶೇಖರಿಸಿದ ಆಹಾರದ ಬದಲು ತಾಜಾ ಆಹಾರವನ್ನು (Food) ಹೆಚ್ಚಾಗಿ ಬಳಸಿ. ಸಂಸ್ಕರಿಸಿದ ಆಹಾರದಲ್ಲಿ ಸೋಡಿಯಂ ಮಟ್ಟ ಹೆಚ್ಚಾಗಿರುತ್ತದೆ. ಇದು ಹೃದಯ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.

ವ್ಯಾಯಾಮ : ಹೃದಯದ ಆರೋಗ್ಯಕ್ಕಾಗಿ ಪ್ರತಿದಿನ ವ್ಯಾಯಾಮ ಮಾಡುವುದು ಮುಖ್ಯ. ಅದರಿಂದ ದೇಹವು ಉಲ್ಲಾಸದಿಂದ ಇರುತ್ತದೆ. ಜೊತೆಗೆ ಹೃದಯಕ್ಕೆ ರಕ್ತ ಪೂರೈಕೆಯನ್ನು ಉತ್ತಮಗೊಳಿಸುತ್ತದೆ.

Food

ಇನ್ನು ಜಡ ಜೀವನಶೈಲಿಯು ಅನೇಕ ರೀತಿಯ ಸಮಸ್ಯೆಗೆ ಕಾರಣವಾಗುವುದು. ಮುಖ್ಯವಾಗಿ ಇದು ಹೃದಯದ ಕಾಯಿಲೆಗೆ ಕಾರಣವಾಗಬಹುದು. ವ್ಯಾಯಾಮದಿಂದ ಆರೋಗ್ಯಕಾರಿ ತೂಕ ಕಾಪಾಡಬಹುದು. ಅಧಿಕ ಕೊಲೆಸ್ಟ್ರಾಲ್, ರಕ್ತದಲ್ಲಿನ ಅಧಿಕ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು.

ಆರೋಗ್ಯಕಾರಿ ತೂಕ : ಅಧಿಕ ತೂಕವು ಹೃದಯದ ಕಾಯಿಲೆಯ ಅಪಾಯ ವೃದ್ಧಿಸುವುದು. ಹೀಗಾಗಿ ದೇಹದ ತೂಕವನ್ನು ಆರೋಗ್ಯಕಾರಿಯಾಗಿ ಕಾಪಾಡಬೇಕು.

ದೇಹದ ಎತ್ತರಕ್ಕೆ ಅನುಗುಣವಾಗಿ ದೇಹದ ತೂಕ ಕಾಪಾಡಬೇಕು. ಅಧಿಕ ತೂಕವು ರಕ್ತನಾಳಗಳ ಮೇಲೆ ಪರಿಣಾಮ ಬೀರುತ್ತದೆ.

ಇದನ್ನೂ ಓದಿ : https://vijayatimes.com/bjp-point-out-congress/

ಉತ್ತಮ ಆಹಾರ : ಕರಿದ ಆಹಾರಕ್ಕಿಂತ ಜೀರಿಗೆ, ಕೊತ್ತಂಬರಿ, ಶುಂಠಿ ಇತ್ಯಾದಿಗಳು ಹೃದಯಕ್ಕೆ ತುಂಬಾ ಒಳ್ಳೆಯದು. ಈ ಪದಾರ್ಥಗಳನ್ನು ಸಾಧ್ಯವಾದಷ್ಟು ಮನೆಯಲ್ಲೇ ತಯಾರಿಸಿ ಬಳಸಿ.

ಅದೇ ರೀತಿ ತರಕಾರಿ(Vegetables) ಮತ್ತು ಹಣ್ಣುಗಳು(Fruits) ಹೃದಯದ ಆರೋಗ್ಯಕ್ಕೆ ಸೂಕ್ತ ಆಹಾರಗಳಾಗಿವೆ.

  • ಮಹೇಶ್.ಪಿ.ಎಚ್

Latest News

Paneer
ಆರೋಗ್ಯ

ರುಚಿಯಷ್ಟೇ ಅಲ್ಲ, ಆರೋಗ್ಯಕ್ಕೂ ವರದಾನ ನಾವು ಪ್ರತಿದಿನ ಬಳಸುವ ಪನೀರ್

ಪನೀರ್ ಕೇವಲ ಇಷ್ಟಕ್ಕೆ ಮಾತ್ರ ಸೀಮಿತವಾಗಿಲ್ಲ, ನಮ್ಮ ಆರೋಗ್ಯದ ರಕ್ಷಣೆಯಲ್ಲಿ ಕೂಡ ಇದರ ಪ್ರಯೋಜನಗಳು ಅಪಾರ. ಆದರೆ ಹೆಚ್ಚಿನವರಿಗೆ ಇದರ ಬಗ್ಗೆ ಅರಿವೇ ಇಲ್ಲ.

ದೇಶ-ವಿದೇಶ

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಬೆಂಗಾವಲಿಗೆ 42 ಕಾರುಗಳು‌ ; ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು

ಜನಸಾಮಾನ್ಯರ ಪಕ್ಷ ಎಂದೇ ಹೇಳಿಕೊಳ್ಳುವ ಆಮ್‌ ಆದ್ಮಿ ಪಕ್ಷದ ನಾಯಕರು ಈ ರೀತಿಯಾಗಿ ಸಾಮಾನ್ಯ ಜನರ ತೆರಿಗೆ(Tax) ಹಣವನ್ನು ದುಂದುವೆಚ್ಚ ಮಾಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

Mallikarjun Kharge
ರಾಜಕೀಯ

ಮಲ್ಲಿಕಾರ್ಜುನ ಖರ್ಗೆ ಚಿತ್ತ ಕಾಂಗ್ರೆಸ್ ಅಧ್ಯಕ್ಷ ಸ್ಥಾನದತ್ತ ; ಅಧ್ಯಕ್ಷ ಸ್ಥಾನ ಬಹುತೇಕ ಖಚಿತ

ಈ ರಾಜೀನಾಮೆಯನ್ನು ಸೋನಿಯಾ ಗಾಂಧಿ ಅವರು ಅಂಗೀಕರಿಸುವ ಸಾಧ್ಯತೆ ಇದ್ದು, ಹೊಸ ರಾಜ್ಯಸಭಾ ವಿರೋಧ ಪಕ್ಷದ ನಾಯಕನ ಆಯ್ಕೆ ಸಂಬಂಧ ಮುಂದಿನ ದಿನಗಳಲ್ಲಿ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.

PFI
ದೇಶ-ವಿದೇಶ

ಬಂಧಿತ PFI ಕಾರ್ಯಕರ್ತರನ್ನು 21 ದಿನಗಳ ಕಸ್ಟಡಿಗೆ ಕಳುಹಿಸಿದ NIA ಕೋರ್ಟ್!

ಬಂಧಿತರ ಮೇಲೆ ಭಯೋತ್ಪಾದನೆಗೆ ಹಣಕಾಸಿನ ನೆರವು ಒದಗಿಸಿರುವ ಮತ್ತು ಹಿಂದೂ ಕಾರ್ಯಕರ್ತರನ್ನು ಹತ್ಯೆ(Murder) ಮಾಡಿರುವ ಆರೋಪವನ್ನು ಹೊರಿಸಲಾಗಿದೆ.