Visit Channel

OTT ಪ್ರವೇಶ ಮಾಡಲು ಸಜ್ಜಾದ `777 ಚಾರ್ಲಿ ‘

Rakshit shetty

ಕೆಜಿಎಫ್ 2(KGF 2) ಬಳಿಕ ಸದ್ದು ಮಾಡಿದ ಮತ್ತೊಂದು ಸ್ಯಾಂಡಲ್‌ವುಡ್‌ನ(Sandalwood) ಪ್ಯಾನ್ ಇಂಡಿಯಾ ಸಿನಿಮಾ(Pan India Cinema) ಅಂದ್ರೆ ಅದು 777 ಚಾರ್ಲಿ. ನಾಲ್ಕು ವರ್ಷಗಳ ಬಳಿಕ ರಕ್ಷಿತ್ ಶೆಟ್ಟಿಯವರ(Rakshith Shetty) ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ(Boxoffice) ಸದ್ದು ಮಾಡಿದೆ. ಐದೂ ಭಾಷೆಯಲ್ಲಿ ಮೂಡಿಬಂದ ಈ ಸಿನಿಮಾಗೆ ಸಿನಿಪ್ರೇಕ್ಷಕರಿಂದ ಮೆಚ್ಚುಗೆಗಳ ಮಹಾಪೂರವೇ ಹರಿದುಬಂದಿದೆ. ನಮ್ಮ ಕನ್ನಡ ಸಿನಿಮಾಗಳ ಈ ಯಶಸ್ಸು, ಪರಭಾಷೆ ಚಿತ್ರರಂಗ ನಮ್ಮ ಚಿತ್ರರಂಗದ ಮೇಲೆ ಕಣ್ಣಿಡುವಂತೆ ಮಾಡಿದೆ.

kannada

777 ಚಾರ್ಲಿ ಕನ್ನಡದ ಮಟ್ಟಿಗೆ ವಿಶಿಷ್ಟ ಸಿನಿಮಾ. ಶ್ವಾನ ಹಾಗೂ ವ್ಯಕ್ತಿಯ ಬಾಂಧವ್ಯವನ್ನು ಚಿತ್ರೀಕರಿಸಿರುವ ಈ ಸಿನಿಮಾ, ಕರ್ನಾಟಕದಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಅವನೇ ಶ್ರೀಮನ್ನಾರಾಯಣ ಸಿನಿಮಾದ ಬಳಿಕ ರಕ್ಷಿತ್‌ಗೆ ಪ್ರೇಕ್ಷಕರು 777 ಚಾರ್ಲಿ ಮೂಲಕ ಮತ್ತೆ ಪ್ರೋತ್ಸಾಹ ನೀಡಿದ್ದಾರೆ. ಈಗ ಇದೇ ಸಿನಿಮಾ ಒಟಿಟಿ ವೇದಿಕೆಗೆ ಹಾಜರಾಗಲಿದೆ. ಇತ್ತೀಚೆಗಷ್ಟೇ 777 ಚಾರ್ಲಿ ಸಿನಿಮಾ 25 ದಿನಗಳನ್ನು ಮುಗಿಸಿ ಮುನ್ನುಗ್ಗುತ್ತಿದೆ. ಇದೇ ವೇಳೆ ಇಡೀ ಚಿತ್ರತಂಡ ಸಿನಿಮಾದ ಗಳಿಕೆ ಬಗ್ಗೆ ಸಂತಸದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ಸಿನಿಮಾ ಗಳಿಕೆ ಬಗ್ಗೆ ಮನಬಿಚ್ಚಿ ಮಾತಾಡಿದ್ದರು.

ಅಲ್ಲದೆ ಒಟಿಟಿಗೆ ಉತ್ತಮ ಮೊತ್ತಕ್ಕೆ ಸೇಲ್ ಆಗಿದೆ ಎಂಬುದು ಮತ್ತಷ್ಟು ಸಂತಸ ನೀಡಿದೆ. ಶೀಘ್ರದಲ್ಲಿಯೇ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಲಿದೆ ಎಂದು ಹೇಳಿದ್ದರು. ಸ್ಯಾಂಡಲ್‌ವುಡ್‌ನ(Sandalwood) ಮೂಲಗಳ ಪ್ರಕಾರ 777 ಚಾರ್ಲಿ ಇದೇ ಜುಲೈ 29 ರಂದು ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಚಾರ್ಲಿ ತಂಡಕ್ಕೆ ಇದೊಂದು ವಿಶೇಷ ದಿನವಾಗಿದ್ದು, ಅಂದೇ ಸಿನಿಮಾ ಒಟಿಟಿಗೆ ಲಗ್ಗೆ ಇಡುತ್ತಿದೆ. ಈ ವಿಷಯವನ್ನು ಅಧಿಕೃತವಾಗಿ ವೂಟ್ ಸೆಲೆಕ್ಟ್ ಅನೌನ್ಸ್ ಮಾಡಿದೆ. 50 ದಿನ ಪೂರೈಸಲಿರೋ 777 ಚಾರ್ಲಿ. 25ನೇ ದಿನವೇ ರಕ್ಷಿತ್ ಶೆಟ್ಟಿ ಭರವಸೆಯ ಮಾತುಗಳನ್ನು ಆಡಿದ್ದರು.

charlie

ಈ ಸಿನಿಮಾ 50 ದಿನಗಳನ್ನು ಪೂರೈಸುತ್ತೆ ಎಂಬ ಭರವಸೆಯಿದೆ. ಅಂದು ಸಿನಿಮಾ ಯಶಸ್ಸನ್ನು ಸಂಭ್ರಮಿಸುತ್ತೇವೆ ಎಂದು ಹೇಳಿದ್ದರು. ಅಂತೆಯೇ ಜುಲೈ 29 ರಂದು 777 ಚಾರ್ಲಿ ಸಿನಿಮಾ 50 ದಿನಗಳನ್ನು ಪೂರೈಸಲಿದೆ. ಹೀಗಾಗಿ ಇದೇ ದಿನ ವೂಟ್ ಸೆಲೆಕ್ಟ್‌ನಲ್ಲಿ 777 ಚಾರ್ಲಿ ಬಿಡುಗಡೆಯಾಗುತ್ತೆ ಎಂದು ಹೇಳಲಾಗುತ್ತಿದೆ. 777 ಚಾರ್ಲಿ ಎಲ್ಲಾ ಭಾಷೆಯಿಂದ ಥಿಯೇಟರ್ ಹಾಗೂ ಒಟಿಟಿಯಿಂದ ಸುಮಾರು 150 ಕೋಟಿ ರೂ. ಬ್ಯುಸಿನೆಸ್ ಮಾಡಿದೆ ಎಂದು ರಕ್ಷಿತ್ ಶೆಟ್ಟಿ ಹೇಳಿದ್ದರು. ಅಲ್ಲದೆ ಸುಮಾರು 90 ರಿಂದ 100 ಕೋಟಿ ನಿರ್ಮಾಪಕರಿಗೆ ಬಂದಿದೆ ಎಂದು ಹೇಳಿದ್ದಾರೆ.

ಇದೇ ಮೊದಲ ಬಾರಿಗೆ ನಿರ್ಮಾಪಕರೊಬ್ಬರು ಕನ್ನಡದಲ್ಲಿ ಧೈರ್ಯವಾಗಿ ಇಷ್ಟು ಕಲೆಕ್ಷನ್ ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಈ ಲೆಕ್ಕಾಚಾರದ ಪ್ರಕಾರ, ಸಿನಿಮಾ ಬ್ಲಾಕ್‌ ಬಸ್ಟರ್ ಲಿಸ್ಟ್ ಸೇರಿದೆ ಎಂದೇ ಹೇಳಬಹುದು.

Latest News

Assam
ದೇಶ-ವಿದೇಶ

500 ರೂ. ಬೆಟ್ಟಿಂಗ್ ಸೋಲಿಗೆ ಸ್ನೇಹಿತನ ಶಿರಚ್ಛೇದ ; 25 ಕಿ.ಮೀ ದೂರದ ಪೊಲೀಸ್ ಠಾಣೆಗೆ ಹೋಗಿ ಶರಣು!

ಆತನ ತಲೆಯನ್ನು ಹಿಡಿದುಕೊಂಡು ರಾತ್ರಿಯ ವೇಳೆ 25 ಕಿ.ಮೀ ದೂರವಿರುವ ಪೊಲೀಸ್ ಠಾಣೆಗೆ(Police Station) ನಡೆದು ಶರಣಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

atm
ಮಾಹಿತಿ

ATM ಬಳಕೆದಾರರು ಓದಲೇಬೇಕಾದ ಸುದ್ದಿ ; RBI ನಿಯಮಗಳ ಬಗ್ಗೆ ಸರಳವಾಗಿ ತಿಳಿಯಿರಿ

ಇನ್ನು ನಿಮ್ಮ ಬ್ಯಾಂಕ್ ಹೊರತುಪಡಿಸಿ, ಬೇರೆ ಬ್ಯಾಂಕ್ ನ ಎಟಿಎಂಗಳಲ್ಲಿ ಮೆಟ್ರೋ ಸಿಟಿಗಳಲ್ಲಿ ಮೂರು ಬಾರಿ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಐದು ಬಾರಿ ಉಚಿತ ಟ್ರಾನ್ಸಾಕ್ಷನ್ ಮಾಡಬಹುದು.

BJP
ರಾಜಕೀಯ

ಮುಸ್ಲಿಂ ಏರಿಯಾದಲ್ಲಿ ಸಾವರ್ಕರ್ ಫೋಟೋ ಹಾಕಬಾರದಿತ್ತು ಎನ್ನಲು ಸಿದ್ದರಾಮಯ್ಯ ಯಾರು? : ಬಿಜೆಪಿ

ಮತ್ತೊಮ್ಮೆ ದೇಶ ವಿಭಜಿಸುವ ಕಾಂಗ್ರೆಸ್ ಪಕ್ಷದ(Congress Party) ಹಿಡನ್ ಅಜೆಂಡಾ ಸಿದ್ದರಾಮಯ್ಯ ಬಾಯಿಂದ ಬಹಿರಂಗವಾಗಿದೆ ಎಂದಿದೆ.

Fruit
ಮಾಹಿತಿ

ಬಿಪಿ, ಮದುಮೇಹ ಸೇರಿದಂತೆ ಅನೇಕ ಖಾಯಿಲೆಗಳಿಗೆ ರಾಮಬಾಣ ನೇರಳೆ ಹಣ್ಣು ; ಓದಿ ಈ ಉಪಯುಕ್ತ ಮಾಹಿತಿ

ಮಧುಮೇಹ, ಹೃದಯದ ಕಾಯಿಲೆ, ಸಂಧಿವಾತ, ಹೊಟ್ಟೆಯ ಖಾಯಿಲೆಗಳ ನಿಯಂತ್ರಣ ಮತ್ತು ನಿವಾರಣೆಗೂ ಇದು ರಾಮಬಾಣ ಎನ್ನುತ್ತದೆ ಆಯುರ್ವೇದ(Ayurveda).