ಕಳೆದ ವರ್ಷಗಳಿಂದ ಯಾವುದೇ ಸಿನಿಮಾಗಳಲ್ಲಿಯೂ ಕಾಣಿಸಿಕೊಳ್ಳದ ನಟ(Actor)ರಕ್ಷಿತ್ ಶೆಟ್ಟಿ(Rakshit Shetty), ಮೌನದಲ್ಲೇ ಹೆಚ್ಚು ಉತ್ತರ ನೀಡಿದ್ದರು.

ರಕ್ಷಿತ್ ಶೆಟ್ಟಿ ಮೌನವಾಗಿರುವುದನ್ನು ಕಂಡು ಸಿನಿಪ್ರೇಕ್ಷಕರು ರಕ್ಷಿತ್ ಶೆಟ್ಟಿ ಬಹುಶಃ ಸಿನಿಮಾಗಳಿಂದ ಕೊಂಚ ಬ್ರೇಕ್ ತೆಗೆದುಕೊಂಡಿರಬೇಕು ಎಂದು ಊಹಿಸಿದ್ದರು. ಆದ್ರೆ, ಅದೆಲ್ಲದ್ದಕ್ಕೂ ಅಸಲಿ ಬ್ರೇಕ್ ಕೊಟ್ಟು, ಮೌನದಿಂದಲೇ ಶ್ರದ್ಧೆವಹಿಸಿ, ಶ್ರಮವಹಿಸಿ ಪ್ಯಾನ್ ಇಂಡಿಯಾ ಸಿನಿಮಾವಾಗಿ 777 ಚಾರ್ಲಿಯನ್ನು ಸಿನಿಪ್ರೇಕ್ಷಕರಿಗೆ ಪರಿಚಯಿಸಲು ಸಜ್ಜಾಗಿದ್ದಾರೆ.
ಹೌದು, ಕಳೆದ ವರ್ಷ ಡಿಸೆಂಬರ್ ತಿಂಗಳ ಅಂತ್ಯದಲ್ಲೇ 777 ಚಾರ್ಲಿ ಬಿಡುಗಡೆಯಾಗಬೇಕಿತ್ತು! ಆದ್ರೆ ಕೆಲ ತಾಂತ್ರಿಕ ತೊಂದರೆಗಳಿಂದ `ಚಾರ್ಲಿ’ ಮುಂದಕ್ಕೆ ಓಡಿತು.
ರಕ್ಷಿತ್ ಶೆಟ್ಟಿ ಅಭಿನಯದ ಅಷ್ಟು ಸಿನಿಮಾಗಳಿಗಿಂತ ಈ ಸಿನಿಮಾ ವಿಭಿನ್ನ, ವಿಶೇಷತೆ, ಅಭಿನಯದ ಛಾಪು, ಭಾವನೆಗಳ ಬುತ್ತಿಯನ್ನು ಹೊತ್ತು ಪ್ರೇಕ್ಷಕರ ಮುಂದಿಡಲಿದೆ ಎಂಬುದನ್ನು ಇಂದು ಮೇ 16 12 :12ಕ್ಕೆ ಬಿಡುಗಡೆಗೊಂಡ ಟ್ರೇಲರ್ ಖಾತರಿಪಡಿಸಿದೆ. ಈಗಾಗಲೇ ರಕ್ಷಿತ್ ಶೆಟ್ಟಿ ಮತ್ತು ಚಿತ್ರತಂಡದ ನಿರ್ಮಾಪಕರು ಹೇಳಿರುವಂತೆ ಜೂನ್ 10 ರಂದು 777 ಚಾರ್ಲಿ ಸಿನಿಮಾವನ್ನು ಪ್ರೇಕ್ಷಕರ ಮುಂದಿಡಲು ದಿನಾಂಕವನ್ನು ಪ್ರಕಟಿಸಿದೆ.

ಸಿನಿಮಾಗಾಗಿ ಕಾತುರ ವ್ಯಕ್ತಪಡಿಸುತ್ತಿದ್ದ ಸಿನಿಪ್ರೇಕ್ಷಕರಿಗೆ ದಿನಾಂಕ ಗೊತ್ತು ಮಾಡುವ ಮೂಲಕ ಕೊಂಚ ನಿರಾಳ ಮಾಡಿದ ರಕ್ಷಿತ್ ಶೆಟ್ಟಿ ಹಾಗೂ ತಂಡಕ್ಕೆ, ಟ್ರೇಲರ್ ಯಾವಾಗ ತೋರಿಸುತ್ತೀರಿ ಎಂದು ಪ್ರೇಕ್ಷಕರು ಪಟ್ಟುಹಿಡಿದು ಕುಳಿತರು. ಈ ನಡುವೆಯೇ ರಕ್ಷಿತ್ ಶೆಟ್ಟಿ, ಮೇ 16 ರಂದು ಚಿತ್ರದ ಟ್ರೇಲರ್ ಬಿಡುಗಡೆಗೊಳಿಸಲಿದ್ದೇವೆ ಎಂದು ಹೇಳಿದಂತೆಯೇ ಮುಂದೂಡದೇ ಇಂದು ಅನಾವರಣಗೊಳಿಸಿದರು. 777 ಚಾರ್ಲಿ ಸಿನಿಮಾದ ಟ್ರೇಲರ್ನಲ್ಲಿ ವಿಶೇಷ ಹಾಗೂ ಪ್ರಮುಖ ಪಾತ್ರದಲ್ಲಿ ಶ್ವಾನ ನಟಿಸಿರುವುದು ಗಮನಾರ್ಹ ಮತ್ತು ಈ ಸಿನಿಮಾದ ಕಥಾಹಂದರ ಎಂದೇ ಹೇಳಬಹುದು.