ಹಳೇ ಪೋಟೊಗಳ ಆಸೆಗೆ ಬಿದ್ದರೆ (80s style photo trend cyber risk) ನಿಮ್ಮ ಮೊಬೈಲ್ ಡೇಟಾ ಕಳವಾಗಲಿದೆ ಹುಷಾರ್
ಅಪರಿಚಿತ ಆ್ಯಪ್ಗಳನ್ನು ಡೌನ್ಲೋಡ್ ಮಾಡಿಕೊಳ್ಳಬೇಡಿ
ರಾಜ್ಯ ಸೈಬರ್ ಕಮಾಂಡ್ ಘಟಕದ ಡಿಐಜಿ ಎಚ್.ಡಿ.ಆನಂದ್ ಕುಮಾರ್ ಮನವಿ
Bengaluru : 80ರ ದಶಕದ ರೆಟ್ರೋ ಲುಕ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ (80s style photo trend cyber risk) ಭಾರೀ ಟ್ರೆಂಡ್ ಆಗಿದೆ.
ಹಳೆಯ ಕಾಲದ ಫ್ಯಾಷನ್, ಡೆನಿಮ್ ಜೀನ್ಸ್, ಕರ್ಲಿ ಹೇರ್‌ಸ್ಟೈಲ್ ಸೇರಿದಂತೆ ಹಲವು ವೈಶಿಷ್ಟ್ಯಗಳೊಂದಿಗೆ ತಮ್ಮ ಫೋಟೋಗಳನ್ನು ಎಡಿಟ್ ಮಾಡಿಸಿಕೊಂಡು ಹಂಚಿಕೊಳ್ಳುವುದು ಜನಪ್ರಿಯವಾಗಿದೆ.
ವಾಟ್ಸ್‌ಆ್ಯಪ್ ಸ್ಟೇಟಸ್‌ನಿಂದ ಹಿಡಿದು ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ವರೆಗೆ ರೆಟ್ರೋ (Retro) ಶೈಲಿಯ ಫೋಟೋಗಳು ಕಾಣಿಸಿಕೊಳ್ಳುತ್ತಿವೆ. ಸಿನಿಮಾ ತಾರೆಯರು, ರಾಜಕಾರಣಿಗಳು, ಕ್ರೀಡಾಪಟುಗಳು ಮಾತ್ರವಲ್ಲದೆ ಸಾಮಾನ್ಯ ಜನರೂ ಈ ಹೊಸ ಟ್ರೆಂಡ್‌ಗೆ ಆಕರ್ಷಿತರಾಗಿದ್ದಾರೆ.

ಆದರೆ, ಕೇವಲ ಮನರಂಜನೆಗಾಗಿ ಮಾಡಿಕೊಳ್ಳುತ್ತಿರುವ ಈ ಫೋಟೋ ಎಡಿಟಿಂಗ್ ಹಿಂದೆ ಸೈಬರ್ ಅಪಾಯಗಳು ಅಡಗಿರಬಹುದು ಎಂಬ ಎಚ್ಚರಿಕೆಯನ್ನು ಪೊಲೀಸರು ನೀಡಿದ್ದಾರೆ.
ರೆಟ್ರೋ ಫೋಟೋಗಳನ್ನು ಸಿದ್ಧಪಡಿಸಲು ಹಲವು ಮೊಬೈಲ್ ಆ್ಯಪ್‌ಗಳು (80s style photo trend cyber risk) ಹಾಗೂ ಆನ್‌ಲೈನ್ (Online) ಲಿಂಕ್‌ಗಳು ಲಭ್ಯವಿವೆ.
ಕೆಲವೇ ಕ್ಷಣಗಳಲ್ಲಿ ಸಾಮಾನ್ಯ ಫೋಟೋವನ್ನು 80ರ ದಶಕದ ಮಾದರಿಯ ಚಿತ್ರವನ್ನಾಗಿ ಪರಿವರ್ತಿಸುವುದರಿಂದ ಬಳಕೆದಾರರಿಗೆ ಇದು ಆಕರ್ಷಕವಾಗಿ ಕಾಣುತ್ತಿದೆ.
ವಿಶೇಷವಾಗಿ ಯುವಜನತೆ ಮತ್ತು ಜೆನ್‌ಝಡ್ ಈ ಟ್ರೆಂಡ್‌ನಲ್ಲಿ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ಆದರೆ, ಅಪರಿಚಿತ ಆ್ಯಪ್ಗಳನ್ನು ಡೌನ್‌ಲೋಡ್ ಮಾಡುವುದು ಅಥವಾ ಪರಿಶೀಲನೆ ಇಲ್ಲದ ಲಿಂಕ್‌ಗಳನ್ನು ತೆರೆಯುವುದು ಅಪಾಯಕ್ಕೆ ಕಾರಣವಾಗಬಹುದು.
ಫೋಟೋ ಎಡಿಟಿಂಗ್ (Photo Editing) ಹೆಸರಿನಲ್ಲಿ ಸೈಬರ್ ವಂಚಕರು ಜನರನ್ನು ಸೆಳೆಯುವ ಸಾಧ್ಯತೆ ಇರುವುದರಿಂದ ಯಾವುದೇ ಅಪರಿಚಿತ ಮೂಲವನ್ನು ನಂಬುವ ಮುನ್ನ ಎಚ್ಚರಿಕೆ ವಹಿಸುವಂತೆ ಪೊಲೀಸರು ಸೂಚಿಸಿದ್ದಾರೆ.
ಇದರ ಮತ್ತೊಂದು ಪ್ರಮುಖ ಅಪಾಯವೆಂದರೆ ಮೊಬೈಲ್ ಅನುಮತಿಗಳು. ಯಾವುದೇ ಆ್ಯಪ್ ಅನ್ನು ಡೌನ್‌ಲೋಡ್ ಮಾಡುವಾಗ ಕ್ಯಾಮೆರಾ, ಫೋಟೋ, ವಿಡಿಯೋ, ಸ್ಟೋರೇಜ್
ಸೇರಿದಂತೆ ಹಲವು ಅನುಮತಿಗಳನ್ನು ಕೇಳಬಹುದು. ಟ್ರೆಂಡ್‌ನ ಆಕರ್ಷಣೆಗೆ ಒಳಗಾಗಿ ಬಳಕೆದಾರರು ಈ ಅನುಮತಿಗಳನ್ನು ಪರಿಶೀಲಿಸದೆ ಒಪ್ಪಿಕೊಳ್ಳುವ ಸಾಧ್ಯತೆ ಇದೆ.
ಇದರಿಂದ ಮೊಬೈಲ್‌ನಲ್ಲಿರುವ ವೈಯಕ್ತಿಕ ಫೋಟೋಗಳು, ವಿಡಿಯೋಗಳು ಹಾಗೂ ಇತರ ಖಾಸಗಿ ಮಾಹಿತಿಗಳು ಸೋರಿಕೆಯಾಗುವ ಅಪಾಯವಿದೆ. ವಿಶೇಷವಾಗಿ ಕೃತಕ ಬುದ್ಧಿಮತ್ತೆ
ಆಧಾರಿತ ಫೋಟೋ ಸೃಷ್ಟಿಸಲು ಮುಖದ ಚಿತ್ರಗಳನ್ನು ಬಳಸುವ ಸಂದರ್ಭದಲ್ಲಿ, ಆ ಮಾಹಿತಿಯ ದುರ್ಬಳಕೆಯ ಸಾಧ್ಯತೆಯ ಬಗ್ಗೆಯೂ ಸೈಬರ್ ತಜ್ಞರು ಎಚ್ಚರಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನು ಹಂಚಿಕೊಳ್ಳುವುದರಿಂದಲೂ ಅಪಾಯ ಹೆಚ್ಚಾಗಬಹುದು. ಒಮ್ಮೆ ವೈಯಕ್ತಿಕ ಫೋಟೋ ಆನ್‌ಲೈನ್‌ಗೆ ಹೋದ ನಂತರ ಅದರ ಮೇಲೆ ಸಂಪೂರ್ಣ ನಿಯಂತ್ರಣ ಉಳಿಸಿಕೊಳ್ಳುವುದು ಕಷ್ಟ.
ಫೇಸ್‌ಬುಕ್, ಇನ್‌ಸ್ಟಾಗ್ರಾಮ್ (Instagram) ಸೇರಿದಂತೆ ವಿವಿಧ ವೇದಿಕೆಗಳಲ್ಲಿ ಹೆಚ್ಚು ವೈಯಕ್ತಿಕ ಚಿತ್ರಗಳನ್ನು ಹಂಚಿಕೊಳ್ಳುವುದರಿಂದ ಸೈಬರ್ ಅಪರಾಧಿಗಳಿಗೆ ಅವುಗಳನ್ನು ಬಳಸಿಕೊಳ್ಳಲು ಹೆಚ್ಚಿನ ಅವಕಾಶ ಸಿಗಬಹುದು.
ಟ್ರೆಂಡಿಂಗ್ (Trending) ವಿಷಯಗಳನ್ನೇ ನೆಪವಾಗಿಸಿಕೊಂಡು ಜನರನ್ನು ಸೆಳೆಯುವ ಸೈಬರ್ ವಂಚನೆಗಳು ನಡೆಯುವ ಸಾಧ್ಯತೆ ಇರುವುದರಿಂದ, ಯಾವುದೇ ಆ್ಯಪ್ ಅಥವಾ ಲಿಂಕ್ ಬಳಸುವ ಮುನ್ನ ಅದರ ವಿಶ್ವಾಸಾರ್ಹತೆಯನ್ನು ಪರಿಶೀಲಿಸುವುದು ಅಗತ್ಯ.
ಹೀಗಾಗಿ ರೆಟ್ರೋ ಫೋಟೋ ಟ್ರೆಂಡ್ ಅನ್ನು ಸಂಪೂರ್ಣವಾಗಿ ತಪ್ಪಿಸಬೇಕೆಂದಲ್ಲ; ಆದರೆ ಅದಕ್ಕಾಗಿ ವೈಯಕ್ತಿಕ ಮಾಹಿತಿಯನ್ನು ಅಪಾಯಕ್ಕೆ ಸಿಲುಕಿಸುವುದು ಬೇಡ.
ಅಪರಿಚಿತ ಆ್ಯಪ್ಗಳನ್ನು ಡೌನ್‌ಲೋಡ್ ಮಾಡದಿರುವುದು, ಅನುಮಾನಾಸ್ಪದ ಲಿಂಕ್‌ಗಳನ್ನು ತೆರೆಯದಿರುವುದು ಮತ್ತು ಆ್ಯಪ್ ಕೇಳುವ ಅನುಮತಿಗಳನ್ನು ಎಚ್ಚರಿಕೆಯಿಂದ ಪರಿಶೀಲಿಸುವುದು ಮುಖ್ಯ.
ಅಗತ್ಯವಿಲ್ಲದ ಮಾಹಿತಿಗೆ ಪ್ರವೇಶ ನೀಡದಿರುವುದರ ಜೊತೆಗೆ, ಸಾಮಾಜಿಕ ಜಾಲತಾಣಗಳಲ್ಲಿ ವೈಯಕ್ತಿಕ ಫೋಟೋಗಳನ್ನು ಹಂಚಿಕೊಳ್ಳುವಾಗಲೂ ಮಿತಿ ಕಾಯ್ದುಕೊಳ್ಳಬೇಕು.
ಕೆಲವೇ ನಿಮಿಷಗಳ ಟ್ರೆಂಡ್‌ಗಾಗಿ ನಮ್ಮ ಖಾಸಗಿ ಮಾಹಿತಿ ಮತ್ತು ಡಿಜಿಟಲ್ ಸುರಕ್ಷತೆಯನ್ನು ಪಣಕ್ಕಿಡಬಾರದು. ರೆಟ್ರೋ ಲುಕ್ ಎಷ್ಟೇ ಆಕರ್ಷಕವಾಗಿದ್ದರೂ, ಸೈಬರ್ ಸುರಕ್ಷತೆಯ ವಿಚಾರದಲ್ಲಿ ಎಚ್ಚರಿಕೆಯೇ ಮೊದಲ ಆದ್ಯತೆ.
ಇದನ್ನು ಓದಿ : https://vijayatimes.com/jet-patcher-treatment-for-potholes/