Visit Channel

ಜನಸಾಮಾನ್ಯರಿಗೆ ಹೊರೆಯಾದ ಕೇಂದ್ರ ಬಜೆಟ್; ಪೆಟ್ರೋಲ್ ಮೇಲೆ 2.50 ರೂ, ಡೀಸೆಲ್ ಮೇಲೆ 4 ರೂ ಏರಿಕೆ

Petrol-Diesel

ನವದೆಹಲಿ, ಫೆ. 01: ಕೇಂದ್ರ ಸರ್ಕಾರ ಬಜೆಟ್​ ಮಂಡಿಸಿದ ಬೆನ್ನಲ್ಲೇ ತೆರಿಗೆ ಸಂಗ್ರಹದ ಉದ್ದೇಶದಿಂದಾಗಿ ಮತ್ತೆ ಪೆಟ್ರೋಲ್ ಮತ್ತು ಡೀಸೆಲ್​ ಬೆಲೆಯಲ್ಲಿ ಭಾರೀ ಏರಿಕೆ ಮಾಡಿದೆ. ಪೆಟ್ರೋಲ್​ ಮೇಲೆ 2.50 ರೂ ಹಾಗೂ ಡೀಸೆಲ್​ ಮೇಲೆ ಬರೋಬ್ಬರಿ 4 ರೂಪಾಯಿಯನ್ನು ಏರಿಸಿದೆ. ಈ ದರಗಳು ಇಂದು ಮಧ್ಯರಾತ್ರಿಯಿಂದ ಜಾರಿಯಾಗಲಿದ್ದು, ಈ ಮೂಲಕ ಮಧ್ಯಮ ವರ್ಗದ ಜನರ ಉಳಿತಾಯಕ್ಕೆ ಸರ್ಕಾರ ಭಾರಿ ಹೊಡೆತ ನೀಡಿದೆ. ಕಳೆದ ಕೆಲ ವರ್ಷಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿನಿತ್ಯ ಏರಿಕೆಯಾಗುತ್ತಲೇ ಇದೆ. ಆದರೆ, ಪೈಸೆ ಲೆಕ್ಕದಲ್ಲಿ ಏರಿಕೆಯಾಗುತ್ತಿದ್ದ ಕಾರಣ ಜನ ಸಾಮಾನ್ಯರು ಅಸಮಾಧಾನವಿದ್ದರೂ ತೋರಿಸಿಕೊಂಡಿರಲಿಲ್ಲ. ಆದರೆ, ಈ ಬಜೆಟ್​ನಲ್ಲಿ ಏಕಾಏಕಿ ರೂಪಾಯಿ ಲೆಕ್ಕದಲ್ಲಿ ತೈಲ ಬೆಲೆಯನ್ನು ಏರಿಕೆ ಮಾಡಲಾಗಿದೆ. ಈ ಮೂಲಕ ದೇಶದಾದ್ಯಂತ ತೈಲದ ಬೆಲೆ 1 ಲೀಟರ್​ಗೆ 92 ರೂ ಗಿಂತ ಅಧಿಕವಾಗಿದೆ. ಇನ್ನೂ ದೆಹಲಿ ಮುಂಬೈನಲ್ಲಿ ಈ ಬೆಲೆ ಮತ್ತಷ್ಟು ಅಧಿಕವಾಗಲಿದೆ. ಆರ್ಥಿಕ ತಜ್ಞರು ಇದು ಮಧ್ಯಮ ವರ್ಗಕ್ಕೆ ಕೇಂದ್ರ ಸರ್ಕಾರ ನೀಡಿದ ಮರ್ಮಾಘಾತ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ತಮ್ಮ ಎರಡನೇ ಪೂರ್ಣಾವಧಿ ಕೇಂದ್ರ ಯುನಿಯನ್‌ ಬಜೆಟ್​ ಮಂಡಿಸಿದ್ದಾರೆ. ಈ ಬಜೆಟ್​ನಲ್ಲಿ ಕೃಷಿ ವಲಯಕ್ಕೆ 2 ಲಕ್ಷ ಕೋಟಿ ಹಣವನ್ನು ಮೀಸಲಿಡಲಾಗಿದೆ. ಹೀಗಾಗಿ ಕೃಷಿ ವಲಯದ ಖರ್ಚಿಗೆ ಹಣವನ್ನು ಕ್ರೋಢೀಕರಣ ಮಾಡುವ ಕಾರಣಕ್ಕೆ “ಕೃಷಿ ಸೆಸ್​”  ಹೆಸರಿನಲ್ಲಿ ಕೇಂದ್ರ ಸರ್ಕಾರ ಇದೀಗ ತೈಲ ಬೆಲೆಯನ್ನು ಏರಿಕೆ ಮಾಡಲು ಮುಂದಾಗಿದೆ.

ಕೇಂದ್ರ ಸರ್ಕಾರ ತೈಲ ಬೆಲೆಯನ್ನು ನಿರ್ಧರಿಸುವ ಹಕ್ಕನ್ನು ಈಗಾಗಲೇ ಆಯಾ ಖಾಸಗಿ ಕಂಪೆನಿಗೆ ನೀಡಿದೆ. ಹೀಗಾಗಿ ಈ ಕಂಪೆನಿಗಳು ಪ್ರತಿನಿತ್ಯ ತೈಲ ದರ ಏರಿಸುತ್ತಲೇ ಇದೆ. ಕೊರೋನಾ ಲಾಕ್​ಡೌನ್ ಸಂದರ್ಭದಲ್ಲಿ ಗಲ್ಫ್​ ರಾಷ್ಟ್ರದಲ್ಲಿ ತೈಲಗಳ ಬೆಲೆ ಶೇ.70 ರಷ್ಟು ಕುಸಿದಿತ್ತು. ಆದರೆ, ಈ ಸಂದರ್ಭದಲ್ಲೂ ಸಹ ಈ ಕಂಪೆನಿಗಳು ಭಾರತದಲ್ಲಿ 12 ರೂ ಗಿಂತ ಅಧಿಕ ಬೆಲೆ ಏರಿಕೆ ಮಾಡಿದ್ದವು. ಈ ಮೂಲಕ ತೈಲ ಬೆಲೆ ಇಳಿಕೆಯ ಲಾಭವನ್ನು ಜನರಿಗೆ ನೀಡದೆ ಮತ್ತಷ್ಟು ಹೊರ ನೀಡಲಾಗಿತ್ತು.

ಈ ನಡುವೆ ಕೇಂದ್ರ ಸರ್ಕಾರ ಇದೀಗ ಮತ್ತೆ ತೈಲದ ಮೇಲಿನ ಸೆಸ್​ ಏರಿಕೆ ಮಾಡುವ ಮೂಲಕ ಮಧ್ಯಮ ವರ್ಗದ ಜರಿಗೆ ಮತ್ತಷ್ಟು ಹೊರೆ ನೀಡಿದೆ. ಈ ಮೂಲಕ ದಿನ ನಿತ್ಯದ ಬೆಲೆಯೂ ಏರಿಕೆಯಾಗಲಿದ್ದು, ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ನೂಕಲಿದೆ ಎನ್ನಲಾಗುತ್ತಿದೆ.

Latest News

Dakshina Kannada
ರಾಜ್ಯ

ಎಚ್ಚರ! ಅಪಾಯದಲ್ಲಿದೆ ದ.ಕ ಜಿಲ್ಲೆಯ ಬಂಟ್ವಾಳ ಕಿಂಡಿ ಅಣೆಕಟ್ಟು ಸೇತುವೆ

ಕಿಂಡಿ ಅಣೆಕಟ್ಟು ಹಾಗೂ ಸೇತುವೆಯ ಕಾಮಗಾರಿಯ ಕರ್ಮಕಾಂಡ. ಕಾಮಗಾರಿ ಪೂರ್ಣ ಆಗುವ ಮೊದಲೇ ತಡೆಗೋಡೆಯ ಕಾಮಗಾರಿಯ ಅಡಿಪಾಯನೇ ಕಿತ್ತು ಹೊರಗೆ ಬಂದಿದೆ!

BJP
ರಾಜಕೀಯ

ಬಿಜೆಪಿ ನಾಯಕರು ನಮಗೆ ದೇಶಪ್ರೇಮದ ಪಾಠ ಮಾಡುವುದು ಆತ್ಮವಂಚನೆಯಾಗುತ್ತದೆ : ಸಿದ್ದರಾಮಯ್ಯ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಕರಾವಳಿಯಲ್ಲಿ ಹತ್ಯೆಗೀಡಾದ ಪ್ರವೀಣ್ ನೆಟ್ಟಾರು(Praveen Nettaru) ಮನೆಗೆ ಮಾತ್ರ ಹೋಗಿ ಪರಿಹಾರ ಕೊಟ್ಟಿದ್ದಾರೆ.

Malyalam
ಮನರಂಜನೆ

ನಟನೆಯಲ್ಲಿ ಸೋಲನ್ನು ಕಂಡರೂ ಕುಗ್ಗದೆ, ಇಂದು ಭಾರತ ಚಿತ್ರರಂಗವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ ನಟ ಫಹಾದ್ ಫಾಸಿಲ್!

ಫಹಾದ್ ಸಿನಿಮಾಗಳು ತಕ್ಕಮಟ್ಟಿಗೆ ಹಿಟ್ ಎನಿಸಿದರೂ, ಇವರ ಈಗಿನ ಸಿನಿಮಾ ಪ್ರಸಿದ್ಧಿಗೆ ಹೋಲಿಸಿದರೆ ಹಿಂದಿನ ಸಿನಿಮಾಗಳು ಏನೇನೂ ಆಗಿರಲಿಲ್ಲ.

Kabbadi Player
ದೇಶ-ವಿದೇಶ

ಪಲ್ಟಿ ಹೊಡೆಯುವ ಯತ್ನದಲ್ಲಿ ಕುಸಿದು ಬಿದ್ದು ಕಬಡ್ಡಿ ಆಟಗಾರ ಸಾವು! ; ವೀಡಿಯೋ ವೈರಲ್

ಕಬಡ್ಡಿ(Kabbadi) ಆಟಗಾರರೊಬ್ಬ ಸೋಮರ್ ಸಾಲ್ಟ್ ಹೊಡೆಯುತ್ತಿದ್ದಾಗ ಕುಸಿದು ಬಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ(Hospital) ಮೃತಪಟ್ಟಿದ್ದಾರೆ.