download app

FOLLOW US ON >

Monday, August 8, 2022
Breaking News
ನೋಯ್ಡಾ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಬಿಜೆಪಿ ಕಾರ್ಯಕರ್ತನ ವಿರುದ್ಧ ಬುಲ್ಡೋಜರ್ ಕ್ರಮ!“ರಮೇಶ್ ಕುಮಾರ್‍ಗೆ ಸ್ವಂತ ಶಕ್ತಿಯಿಂದ ರಾಜಕೀಯ ಮಾಡುವ ಯೋಗ್ಯತೆ ಇಲ್ಲ” : ಬಿಜೆಪಿಹೆಣ ಕಂಡರೆ ಓಡೋಡಿ ಬರುವ ಶೋಭಾ ಕರಂದ್ಲಾಜೆ, ಸಮಸ್ಯೆಗಳಿಗೆ ಬಾಯಿ ಬಿಡದಿರುವುದೇಕೆ? : ಕಾಂಗ್ರೆಸ್‌ಆಮ್ಲಜನಕ ಕೊರತೆ ; ಮಾರ್ಗಸೂಚಿ ಪಾಲಿಸುವಲ್ಲಿ ಸಿಬ್ಬಂದಿಯ ವಿಫಲವೆಂದ ಬಿ.ಎ ಪಾಟೀಲ್ ವರದಿ : `ದ ಫೈಲ್ಸ್’ಹಿಟ್ಲರ್ ಕೂಡಾ ಚುನಾವಣೆಗಳನ್ನು ಗೆಲ್ಲುತ್ತಿದ್ದ : ರಾಹುಲ್‌ ಗಾಂಧಿಅರ್ಪಿತಾ ಮುಖರ್ಜಿ ಪ್ರಾಣಕ್ಕೆ ಅಪಾಯವಿದೆ ; ಆಹಾರ ಮತ್ತು ನೀರನ್ನು ಪರೀಕ್ಷಿಸಬೇಕು : ನ್ಯಾಯಾಲಯಕ್ಕೆ ಇ.ಡಿ ಮನವಿಕಾಮನ್ ವೆಲ್ತ್ ಗೇಮ್ಸ್ 2022 : ಕೇವಲ 1 ಗಂಟೆ ಅಂತರದಲ್ಲಿ ಹ್ಯಾಟ್ರಿಕ್ ಚಿನ್ನ ಗೆದ್ದ ಕುಸ್ತಿ ವೀರರುಜ್ಯೂಸ್ ಬಾಟಲಿಯನ್ನೇ ಮೈಕ್ ಮಾಡಿಕೊಂಡು ಶಾಲೆಯ ದುಸ್ಥಿತಿಯನ್ನು ವರದಿ ಮಾಡಿದ ಬಾಲಕ ; ವೀಡಿಯೋ ವೈರಲ್ಸಚಿವ ಸುನೀಲ್‌ ಕುಮಾರ್‌ಗೆ ಇಂಥಾ ಗುಲಾಮಿ ಮನಸ್ಥಿತಿ ಬರಬಾರದಿತ್ತು : ಸಿದ್ದರಾಮಯ್ಯಮೋದಿ-ಮಮತಾ ಬ್ಯಾನರ್ಜಿ ಭೇಟಿ : ಪಶ್ಚಿಮ ಬಂಗಾಳಕ್ಕೆ ಹಣ ಬಿಡುಗಡೆಗೆ ಒತ್ತಾಯ!
English English Kannada Kannada

ಜಮೀನಿಗೆ ತಗುಲಿದ್ದ ಬೆಂಕಿ ನಂದಿಸಲು ಹೋಗಿ ರೈತ ಸಾವು

ಗ್ರಾಮದ ಮಹದೇವನಾಯಕ (63) ಬೆಂಕಿ ಆಘಾತದಿಂದ ಮೃತಪಟ್ಟವರು. ಸೋಮವಾರ ಸಂಜೆ ಜಮೀನಿನ ಮೂಲೆಯಲ್ಲಿ ಹಾಕಲಾಗಿದ್ದ ಬೆಂಕಿಯು ಪಕ್ಕದ ಜಮೀನಿನಲ್ಲಿ ಬೆಳೆದಿದ್ದ ಹುರುಳಿ ಹಾಗೂ ತಮ್ಮ ಜಮೀನಿನ ಬೆಳೆಯನ್ನು ಆವರಿಸಿಕೊಳ್ಳುವುದನ್ನು ತಪ್ಪಿಸಲು ಹೋದ ವೇಳೆ ಈ ಅವಘಡ ನಡೆದಿದೆ.

ಚಾಮರಾಜನಗರ, ಫೆ. 02: ತ್ಯಾಜ್ಯಕ್ಕೆ ಹಾಕಲಾಗಿದ್ದ ಬೆಂಕಿ ಪಕ್ಕದ ಜಮೀನಿನಲ್ಲಿದ್ದ ಬೆಳೆಗೆ ಹೊತ್ತಿಕೊಳ್ಳುತ್ತಿರುವುದನ್ನು ತಪ್ಪಿಸಲು ಹೋಗಿ ರೈತರೊಬ್ಬರು ಬೆಂಕಿಗೆ ಆಹುತಿಯಾದ ಘಟನೆ ತಾಲ್ಲೂಕಿನ ಅಮಚವಾಡಿಯಲ್ಲಿ ಸೋಮವಾರ ನಡೆದಿದೆ.

ಗ್ರಾಮದ ಮಹದೇವನಾಯಕ (63) ಬೆಂಕಿ ಆಘಾತದಿಂದ ಮೃತಪಟ್ಟವರು. ಸೋಮವಾರ ಸಂಜೆ ಜಮೀನಿನ ಮೂಲೆಯಲ್ಲಿ ಹಾಕಲಾಗಿದ್ದ ಬೆಂಕಿಯು ಪಕ್ಕದ ಜಮೀನಿನಲ್ಲಿ ಬೆಳೆದಿದ್ದ ಹುರುಳಿ ಹಾಗೂ ತಮ್ಮ ಜಮೀನಿನ ಬೆಳೆಯನ್ನು ಆವರಿಸಿಕೊಳ್ಳುವುದನ್ನು ತಪ್ಪಿಸಲು ಹೋದ ವೇಳೆ ಈ ಅವಘಡ ನಡೆದಿದೆ. ರಭಸವಾದ ಬೆಂಕಿಯ ಕೆನ್ನಾಲಿಗೆಯು ಮಹದೇವನಾಯಕ ಅವರಿಗೆ ಬಡಿದಿದೆ. ಬೆಂಕಿಯ ಶಾಖದ ಆಘಾತದಿಂದ ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತ್ಯಾಜ್ಯಕ್ಕೆ ಹಾಕಿದ್ದ ಬೆಂಕಿಯು ಜಮೀನಿಗೆ ಆವರಿಸಿಕೊಂಡು ಬೆಳೆಯೆಲ್ಲ ನಾಶವಾಗಿದೆ. ಸಂಜೆಯಾದರೂ ಮಹದೇವನಾಯಕ ಅವರು ಮನೆಗೆ ಬಾರದ್ದನ್ನು ತಿಳಿದು ಜಮೀನಿಗೆ ಕುಟುಂಬದವರು ಹೋದಾಗ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಚಾಮರಾಜನಗರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share News on

Share on facebook
Facebook
Share on google
Google+
Share on twitter
Twitter
Share on linkedin
LinkedIn
Share on whatsapp
WhatsApp
error: Content is protected !!

Submit Your Article