ಕೊರೋನಾ…(Corona) ಮಹಾಮಾರಿ ಇಡೀ ವಿಶ್ವವನ್ನೇ (The whole world) ಬೆಚ್ಚಿಬೀಳಿಸಿದ ಕಾಯಿಲೆ.ಆ ಮಹಾಮಾರಿ ಮೂಲತಃ ಹುಟ್ಟಿಕೊಂಡಿದ್ದು ಚೀನಾ (China) ದೇಶದಲ್ಲಿ,ಚೀನಾದ ವುಹಾನ್ ನಗರದಲ್ಲಿ (Wuhan city) ಕಾಣಿಸಿಕೊಂಡಿದ್ದ ಕೊರೋನಾ ವೈರಸ್ (Corona virus) ಹೇಗೆ ಹುಟ್ಟಿಕೊಂಡಿತು ಎಂಬುದು ಇಂದಿಗೂ ರಹಸ್ಯವಾದ ಸಂಗತಿಯಾಗಿದೆ.ಕೊರೋನಾ ವೈರಸ್ ಬಂದಾಗ ಇಡೀ ವಿಶ್ವ ಹಾಗು ದೇಶ ಅಲ್ಲೊಲ್ಲ ಕಲ್ಲೊಲವಾಗಿತ್ತು. ಕೊರೋನಾ ವೈರಸ್ ಬಂದು ಮರಣ (Death) ಮೃದಂಗವಾಡಿತ್ತು,ಎಷ್ಟೋ ಜನರು ಕೂಡ ಇದರಿಂದ ಪ್ರಾಣವನ್ನು ಕಳೆದುಕೊಂಡಿದ್ದರು.ಅದೇ ರೀತಿಯ ಮತ್ತೊಂದು ಭಯಂಕರ ವೈರಸ್ (Terrible virus) ಚೀನಾ ದೇಶದಲ್ಲಿ ಹುಟ್ಟಿಕೊಂಡಿದೆ.

ಹೌದು ಚೀನಾದಲ್ಲಿ ಈಗ ಕೊರೋನಾ ವೈರಸ್ ನಂತೆ ಈಗ ಮತ್ತೊಂದು ಕಾಯಿಲೆ ಹುಟ್ಟಿಕೊಂಡು,ಆಸ್ಪತ್ರೆಗಳಲ್ಲಿ ರೋಗಿಗಳ (patients) ದಂಡೇ ತುಂಬಿಕೊಂಡಿರುವುದು ಸಾಮಾಜಿಕ ಜಾಲತಾಣದಲ್ಲಿ (Social media) ಹರಿದಾಡುತ್ತಿದೆ.ಚೀನಾದಲ್ಲಿ ಹ್ಯೂಮನ್ ಮೆಟಾಪ್ನ್ಯೂಮೋ ವೈರಸ್ (HMPV) (Human metapneumovirus) ಪತ್ತೆಯಾಗಿ ಜನರನ್ನು ಬೆಚ್ಚಿಬೀಳಿಸಿದೆ.ಈ ಹೊಸ ವೈರಸ್ ವೇಗವಾಗಿ ಹರಡುತ್ತಿದೆ. ಹ್ಯೂಮನ್ ಮೆಟಾಪ್ನ್ಯೂಮೋ ವೈರಸ್ (Human metapneumovirus) ಕೂಡ ಸಾಂಕ್ರಾಮಿಕ ರೋಗವಾಗಿದ್ದು (Infectious disease) ಮತ್ತೊಮ್ಮೆ ಹೆಲ್ತ್ ಎಮರ್ಜೆನ್ಸಿ (Health emergency) ಸೃಷ್ಟಿಯಾಗುವ ಸಾಧ್ಯತೆಯಿದೆ.ಇನ್ನು ಈ ಹೊಸ ವೈರಸ್ ಬಗ್ಗೆ ಚೀನಾ ಯಾವುದೇ ಸ್ಪಷ್ಟನೆ ನೀಡಿಲ್ಲ,ವಿಶ್ವ ಆರೋಗ್ಯ ಸಂಸ್ಥೆ (World Health Organization) ಕೂಡ ಮಾಹಿತಿ ನೀಡಿಲ್ಲ.

HMPV ವೈರಸ್ ಇದು ನ್ಯುಮೊವಿರಿಡೆ (Pneumoviridae) ಕುಟುಂಬದ ಮೆಟಾಪ್ನ್ಯೂಮೋ (Metapneumo) ವೈರಸ್ ವರ್ಗಕ್ಕೆ ಸೇರಿದ ವೈರಸ್ ಆಗಿದೆ.ಇದನ್ನು 2001 ರಲ್ಲಿ ಡಚ್ ಸಂಶೋಧಕರು (Dutch researchers) ಮೊದಲು ಕಂಡು ಹಿಡಿದಿದ್ದರು.ಉಸಿರಾಟದ ಸೋಂಕಿನಿಂದ (Respiratory infection) ಬಳಲುತ್ತಿರುವ ಮಕ್ಕಳ ಮಾದರಿಗಳನ್ನು ಸಂಶೋಧನೆ (Research) ಮಾಡುವಾಗ ಈ ವೈರಸ್ ಪತ್ತೆಯಾಗಿದೆ.ಈ ವೈರಸ್ ಕೆಮ್ಮಿನಿಂದ ಮತ್ತು ಸೀನುವಿಕೆಯಿಂದ ಉತ್ಪತ್ತಿಯಾಗುವ ಹನಿಗಳ ಮೂಲಕ ಹರಡುತ್ತದೆ. ಕೆಮ್ಮು, ಜ್ವರ, ಮೂಗು ಕಟ್ಟುವುದು, ಶೀತ ಈ ವೈರಸ್‌ನ ಲಕ್ಷಣಗಳಾಗಿವೆ. ಈ ವೈರಸ್ ಅವಧಿ ಮೂರರಿಂದ ಐದು ದಿನಗಳು.ಇನ್ನು ಈ ಹ್ಯೂಮನ್ ಮೆಟಾಪ್ನ್ಯೂಮೋ ವೈರಸ್ ಗೆ(Human metapneumovirus) (HMPV) ಯಾವುದೇ ರೀತಿಯ ಲಸಿಕೆ (Vaccine) ಲಭ್ಯವಿಲ್ಲ.ಇನ್ನು ಮುಂಜಾಗ್ರತಾ ಕ್ರಮವಾಗಿ (Precautionary measure) ಮಾಸ್ಕ್ ಧರಿಸುವುದು ಆಗಾಗ ಕೈಗಳನ್ನು ತೊಳೆಯುವುದು ಮತ್ತು ಜನ ಸಂದಣಿ ಇರುವ ಮಾಸ್ಕ್ (Mask) ಧರಿಸಿ ಸಾಮಾಜಿಕ ಅಂತರ (Social distance) ಕಾಯ್ದುಕೊಳ್ಳಬೇಕು.