ಕಳೆದ ವಾರ ಮೂರು ಪಡೆಗಳ ಮುಖ್ಯಸ್ಥರು ಮತ್ತು ರಕ್ಷಣಾ ಸಚಿವ(Defence Minsiter) ರಾಜನಾಥ್ ಸಿಂಗ್(Rajnath Singh) ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ, ದೇಶದ ಸಶಸ್ತ್ರ ಪಡೆಗಳ ಇತಿಹಾಸದಲ್ಲೇ ಐತಿಹಾಸಿಕ ಕ್ರಮವೆಂದು ‘ಅಗ್ನಿಪಥ್’(Agnipath) ಎಂಬ ನೂತನ ಸೇನಾ ನೇಮಕಾತಿ(Defence Recruitment) ನೀತಿಯನ್ನು ಘೋಷಿಸಿದರು.

ನೂತನ ಸೇನಾ ನೇಮಕಾತಿ ನೀತಿಯನ್ನು ಘೋಷಿಸಿದ ಮರುದಿನವೇ ಯುವಕರಿಂದ ಬಿಹಾರದಲ್ಲಿ(Bihar) ಮೊದಲ ಪ್ರತಿರೋಧ ಕಂಡುಬಂದಿತು. ತದನಂತರ ಅದರ ಕಿಚ್ಚು ಹೆಚ್ಚುತ್ತಾ, ಉತ್ತರಪ್ರದೇಶ, ಮಧ್ಯಪ್ರದೇಶ, ಜಾರ್ಖಂಡ್ ಸೇರಿದಂತೆ ಉತ್ತರಭಾರತದ ರಾಜ್ಯಗಳಿಗೆ ವಿಸ್ತರಿಸಿ, ರೈಲುಗಳಿಗೆ ಬೆಂಕಿ, ಹೆದ್ದಾರಿ ತಡೆ, ಬಿಜೆಪಿ ಕಚೇರಿಗಳ ಮೇಲೆ ದಾಳಿ ಮಾಡುವ ಮೂಲಕ ಯುವಕರ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆಯಿತು. ಇದೀಗ ‘ಅಗ್ನಿಪಥ್’ ಯೋಜನೆಯ ಬಿಸಿ ದಕ್ಷಿಣ ಭಾರತದ ರಾಜ್ಯಗಳಿಗೆ ತಟ್ಟಿದೆ. ತೆಲಂಗಾಣದಲ್ಲಿ(Telangana) ತೀವ್ರ ಹಿಂಸಾಚಾರ(Voilence) ನಡೆದಿದ್ದು, ಒರ್ವ ಯುವಕ ಮೃತಪಟ್ಟಿದ್ದಾನೆ.
‘ಅಗ್ನಿಪಥ್’ ಯೋಜನೆಯನ್ನು ವಿರೋಧ ಪಕ್ಷಗಳು ಅನೇಕ ರೀತಿಯಲ್ಲಿ ವ್ಯಾಖ್ಯಾನಿಸಿ ವಿರೋಧಿಸಿದೆ. ಶ್ರೇಣಿ ಇಲ್ಲ, ಪಿಂಚಣಿ ಇಲ್ಲ, ಸ್ಥಿರ ಭವಿಷ್ಯವಿಲ್ಲ, ಸೇನೆಗೆ ಗೌರವವಿಲ್ಲ ಎಂದು ರಾಹುಲ್ ಗಾಂಧಿ(Rahul Gandhi) ಟೀಕಿಸಿದ್ದರೆ, ಇದೊಂದು ಚುನಾವಣೆ(Election) ಗಿಮಿಕ್ ಎಂದು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ(Mayavathi) ಟೀಕಿಸಿದ್ದಾರೆ. ಇನ್ನೊಂದೆಡೆ ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಸೇನೆಯಲ್ಲಿ ನರೇಗಾ ಯೋಜನೆ(Narega Yojana) ಜಾರಿಗೊಳಿಸಲಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.

ವಿರೋಧ ಪಕ್ಷಗಳು ಮತ್ತು ಯುವಜನತೆಯಿಂದ ತೀವ್ರ ಪ್ರತಿರೋಧ ವ್ಯಕ್ತವಾಗುತ್ತಿದ್ದಂತೆ ಕೆಲ ಬಿಜೆಪಿ(BJP) ರಾಜ್ಯಗಳು ಯುವಕರನ್ನು ಸಂತೈಸುವ ನಿಟ್ಟಿನಲ್ಲಿ ಹೊಸ ಘೋಷಣೆಗಳನ್ನು ಮಾಡಿವೆ. ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್(Yogi Adityanath) ಅಗ್ನಿವೀರರಿಗೆ ಪೊಲೀಸ್ ಮತ್ತು ಇತರೆ ಕ್ಷೇತ್ರಗಳಲ್ಲಿ ಆದ್ಯತೆ ನೀಡಲಾಗುವುದು ಎಂದು ಘೋಷಿಸಿದ ನಂತರ ಅನೇಕ ಬಿಜೆಪಿ ಆಡಳಿತವಿರುವ ರಾಜ್ಯಗಳು ಪೊಲೀಸ್ ಇಲಾಖೆಯಲ್ಲಿ ಅಗ್ನಿವೀರರಿಗೆ ಆದ್ಯತೆ ನೀಡಲು ಮುಂದೆ ಬಂದಿವೆ.
ತದನಂತರ ‘ಅಗ್ನಿಪಥ್’ ಯೋಜನೆ ಮೂಲಕ ಸೇನೆಗೆ ಆಯ್ಕೆಯಾಗಲು 21 ಗರಿಷ್ಠ ವಯಸ್ಸಿನ ಮೀತಿಯನ್ನು ನಿಗದಿಪಡಿಸಲಾಗಿತ್ತು. ನಂತರ ಕೇಂದ್ರ ಸರ್ಕಾರ ಇದನ್ನು 23ಕ್ಕೆ ಹೆಚ್ಚಿಸಿ ಆದೇಶ ಹೊರಡಿಸಿತು. ಇಷ್ಟಾದರೂ ದೇಶಾದ್ಯಂತ ಪ್ರತಿಭಟನೆ ಬಿಸಿ ಕಡಿಮೆಯಾಗಿಲ್ಲ. ಹೀಗಾಗಿ ಇಂದು ಕೇಂದ್ರ ಗೃಹ ಇಲಾಖೆ ತನ್ನ ಅಡಿಯಲ್ಲಿರುವ ಅಸ್ಸಾಂ ರೈಫಲ್ಸ್(Assam Rifiles) ಮತ್ತು ಇತರೆ ಪಡೆಗಳಲ್ಲಿ ಶೇ.10ರಷ್ಟು ಮೀಸಲಾತಿಯನ್ನು ಅಗ್ನಿವೀರರಿಗೆ(Agniveer) ನೀಡುವುದಾಗಿ ಘೋಷಿಸಿದೆ. ಒಟ್ಟಾರೆಯಾಗಿ ಈ ಯೋಜನೆಯ ಪರ-ವಿರೋಧ ಚರ್ಚೆಗೆ ಅನೇಕ ಆಯಾಮಗಳಿವೆ. ]

ಸಶಸ್ತ್ರ ಪಡೆಗಳ ಆಧುನೀಕರಣ ದೃಷ್ಟಿಯಿಂದ ಇದೊಂದು ಮಹತ್ವದ ಕ್ರಮ. ಸಶಸ್ತ್ರ ಪಡೆಗಳು ಉದ್ಯೋಗ ಖಾತರಿ ಕಾರ್ಯಕ್ರಮಗಳಾಗಬಾರದು. ಇಸ್ರೇಲ್, ಅಮೇರಿಕಾ, ರಷ್ಯಾದಂತ ಬಲಿಷ್ಠ ದೇಶಗಳು ಇದೇ ಮಾದರಿಯ ಯೋಜನೆಯ ಮೂಲಕ ಯಶಸ್ಸು ಸಾಧಿಸಿವೆ ಎಂದು ಕೇಂದ್ರ ಸರ್ಕಾರ ಹೇಳಿದ್ದರೆ, ಇದರಿಂದ ಸೇನೆಯ ಸಾಮಥ್ರ್ಯ ಕುಸಿಯುತ್ತದೆ, ಯುವಕರ ಭವಿಷ್ಯ ಅತಂತ್ರವಾಗುತ್ತದೆ ಎಂದು ವಿರೋಧ ಪಕ್ಷಗಳು ಟೀಕಿಸಿವೆ.