Andra Pradesh : ಆಂಧ್ರಪ್ರದೇಶದ ಮಹಿಳೆಯೊಬ್ಬರು ರಸ್ತೆಯಲ್ಲಿ ಅಂಟಿಸಿದ್ದ ಪೋಸ್ಟರ್ ಅನ್ನು ಬೀದಿ ಶ್ವಾನವೊಂದು ಹರಿದು ಹಾಕಿದೆ. ಈ ಕಾರಣ ಮಹಿಳೆ ಶ್ವಾನದ ವಿರುದ್ಧ ಪೋಲಿಸ್ ಠಾಣೆಯಲ್ಲಿ ಕೇಸ್ (A woman filed a case against a dog) ದಾಖಲಿಸಿದ್ದಾರೆ. ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ (Andhra CM Jagan Mohan Reddy) ಅವರ ಪೋಸ್ಟರ್ ಹರಿದು ಹಾಕಿದ ಶ್ವಾನದ ವಿರುದ್ಧ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.
ಆಂಧ್ರಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಅವರ ಪೋಸ್ಟರ್ ಅನ್ನು ಹರಿದು ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ (A woman filed a case against a dog) ವೈರಲ್
ಆದ ಬೆನ್ನಲ್ಲೇ ಮಹಿಳೆಯರ ಗುಂಪೊಂದು ಆ ಶ್ವಾನದ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸದ್ಯ ಇದೊಂದು ವಿಚಿತ್ರ ಘಟನೆಯಾಗಿದ್ದು, ಹಿಂದೆಂದೂ ಕೇಳಿರದ ಘಟನೆಯಾಗಿದೆ.
ಹಲವರು ಸಾಮಾಜಿಕ ಜಾಲತಾಣದಲ್ಲಿ ಇದೊಂದು ವಿಚಿತ್ರ ಘಟನೆ, ಶ್ವಾನದ ವಿರುದ್ಧ ಕೇಸ್ ದಾಖಲಿಸಿರುವ ಮಹಿಳೆಯರಿಗೆ ಬುದ್ಧಿ ಇಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಇನ್ನು ಕೆಲವರು ಶ್ವಾನದ ವಿರುದ್ಧ ಕೇಸ್ ದಾಖಲಿಸಿದ ಮಹಿಳೆ ವಿರುದ್ಧ ಕಿಡಿಕಾರಿದ್ದಾರೆ.
ವಿಜಯವಾಡದಲ್ಲಿ ಈ ಘಟನೆ ನಡೆದಿದ್ದು,
ಇದನ್ನೂ ಓದಿ : https://vijayatimes.com/1-crore-seized-from-the-auto/
ವಿರೋಧ ಪಕ್ಷ ತೆಲುಗು ದೇಶಂ ಪಕ್ಷದ (TDP) ಕಾರ್ಯಕರ್ತೆ ಎನ್ನಲಾದ ದಾಸರಿ ಉದಯಶ್ರೀ ವ್ಯಂಗ್ಯವಾಗಿ ಪೊಲೀಸರಿಗೆ ದೂರು ನೀಡಿದ್ದಾರೆ.
ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರಿಗೆ ಅವಮಾನ ಮಾಡಿರುವ ಶ್ವಾನ ಹಾಗೂ ಅದರ ಹಿಂದಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಇತರ ಕೆಲ ಮಹಿಳೆಯರೊಂದಿಗೆ ಒತ್ತಾಯಿಸಿದ್ದಾರೆ.
ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷದ (YSRCP) ಮುಖ್ಯಸ್ಥ ಮತ್ತು ಆಂಧ್ರಪ್ರದೇಶದ ಸಿಎಂ ಜಗನ್ ಮೋಹನ್ ರೆಡ್ಡಿ ವಿರುದ್ಧ ಅಪಹಾಸ್ಯ ಮಾಡಿರುವವರ ವಿರುದ್ಧ
ವೀಡಿಯೊದಲ್ಲಿ ಮಹಿಳೆ ತನ್ನ ದೂರನ್ನು ಮುಂದಿಟ್ಟಿದ್ದಾರೆ. ಮಹಿಳೆ ಲಿಖಿತ ರೂಪದಲ್ಲಿ ನೀಡಿದ ದೂರಿನಲ್ಲಿ ಈ ವಿಷಯವನ್ನು ಪ್ರತ್ಯೇಕವಾಗಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ : https://vijayatimes.com/fasal-bima-yojana/
ನಮ್ಮ ಪ್ರೀತಿಯ ಮುಖ್ಯಮಂತ್ರಿಯನ್ನು ಅವಮಾನಿಸಿದ ಶ್ವಾನ ಮತ್ತು ಶ್ವಾನದ ಹಿಂದಿರುವವರನ್ನು ಬಂಧಿಸುವಂತೆ ನಾವು ಪೊಲೀಸರಿಗೆ ಮನವಿ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಇದಕ್ಕೂ ಮುನ್ನ ಜಗನ್ ಮೋಹನ್ ರೆಡ್ಡಿ ಅವರ ಫೋಟೋ ಇರುವ ಸ್ಟಿಕ್ಕರ್ ಅನ್ನು ಶ್ವಾನವೊಂದು ಕಿತ್ತು ಹಾಕುತ್ತಿರುವ ವಿಡಿಯೋ ವ್ಯಾಪಕವಾಗಿ ಹರಿದಾಡಿತ್ತು.
ಸ್ಟಿಕ್ಕರ್‌ನಲ್ಲಿ ಜಗನಣ್ಣ ಮಾ ಭವಿಷ್ಯತ್ತು (ಜಗನ್ ಅಣ್ಣ ನಮ್ಮ ಭವಿಷ್ಯ) ಎಂಬ ಘೋಷಣೆಯನ್ನು ಹೊಂದಿದ್ದು, ಆಡಳಿತಾರೂಢ ವೈಎಸ್‌ಆರ್ ಕಾಂಗ್ರೆಸ್ ಪಕ್ಷ (ವೈಎಸ್‌ಆರ್‌ಸಿಪಿ) ನಡೆಸುತ್ತಿರುವ ರಾಜ್ಯಾದ್ಯಂತ ನಡೆಯುತ್ತಿರುವ ಸಮೀಕ್ಷೆಯ ಭಾಗವಾಗಿ ಮನೆಯೊಂದಕ್ಕೆ ಅಂಟಿಸಲಾಗಿದೆ. ಇದನ್ನು ಸಹಿಸಲಾಗದೆ ಈ ರೀತಿ ಮಾಡಲಾಗಿದೆ ಎಂದು ಹಲವು ಮಹಿಳೆಯರು ಆರೋಪಿಸಿದ್ದಾರೆ.