ಮುಂಬೈ, ಆ. 13: ಕೊರೊನಾ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಈಗ ಇದರ ರೂಪಾಂತರಿ ವೈರೆಸ್ ಡೆಲ್ಟಾದ ಪ್ರಭಾವ ಹೆಚ್ಚುತ್ತಿದ್ದು ಈ ವೈರೆಸ್ ಗೆ 2 ಡೋಸ್ ಲಸಿಕೆ ಪಡೆದುಕೊಂಡಿದ್ದ ಮಹಿಳೆಕೂಡ ಬಲಿಯಾಗಿದ್ದು ಜನರಲ್ಲಿ ಮತ್ತಷ್ಟು ಆತಂಕವನ್ನುಂಟುಮಾಡಿದೆ.
ಮಹಾರಾಷ್ಟ್ರದಲ್ಲಿ ಡೆಲ್ಟಾ ಪ್ಲಸ್ ವೈರಸ್ಗೆ ಎರಡನೇ ಬಲಿಯಾಗಿದೆ. ಮುಂಬೈನಲ್ಲಿ ಜುಲೈ 27ರಂದು ಮೃತಪಟ್ಟಿದ್ದ 63 ವರ್ಷದ ಮಹಿಳೆಗೆ ಡೆಲ್ಟಾ ವೈರಸ್ ಸೋಂಕು ಇದ್ದದ್ದು ದೃಢಪಟ್ಟಿದೆ. ಆದರೆ, ಈ ಮಹಿಳೆ ಎರಡು ಡೋಸ್ ಲಸಿಕೆ ಹಾಕಿಸಿಕೊಂಡಿದ್ದರೆನ್ನಲಾಗಿದೆ. ಹೀಗೆ ಎರಡೂ ಡೋಸ್ ಲಸಿಕೆ ಹಾಕಿಸಿಕೊಂಡೂ ಡೆಲ್ಟಾ ಪ್ಲಸ್ ಸೋಂಕಿಗೆ ಮುಂಬೈ ವ್ಯಕ್ತಿ ಬಲಿಯಾಗಿರುವ ಮೊದಲ ಪ್ರಕರಣ ಇದಾಗಿದೆ. ಇದಕ್ಕೂ ಮೊದಲು ಮಹರಾಷ್ಟ್ರದಲ್ಲಿ 80 ವರ್ಷದ ಮಹಿಳೆಯೊಬ್ಬರು ಡೆಲ್ಟಾಗೆ ಬಲಿಯಾಗಿದ್ದರು ಆದರೆ ಅವರು ಯಾವುದೇ ಲಸಿಕೆ ಪಡೆದಿರಲಿಲ್ಲ.
ಕರ್ನಾಟಕದಲ್ಲಿ ಕೂಡ ಈ ಡೆಲ್ಟಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಆಗಸ್ಟ್ 15 ರ ನಂತರ ಇನ್ನಷ್ಟು ಬಿಗಿ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.