- ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡಲು ಹಲವು ಮಾರ್ಗ
- ವಾಟ್ಸ್ಆ್ಯಪ್ನಲ್ಲಿ ಕೂಡ ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡಬಹುದು
- ಅಧಿಕೃತ ವಾಟ್ಸ್‌ಆ್ಯಪ್ ಸಂಖ್ಯೆ +91-9013151515 ಅನ್ನು ಬಳಸಬಹುದಾಗಿದೆ
ಆಧಾರ್ ಕಾರ್ಡ್ (Aadhaar Card) ಈಗಿನ ಜನರ ಜೀವನದ ಒಂದು ಪ್ರಮುಖ ದಾಖಲೆಯಾಗಿದೆ. ಪ್ರತಿದಿನ ಒಂದಲ್ಲ ಒಂದು ಕೆಲಸಗಳಿಗೆ ನಮಗೆಲ್ಲರಿಗೂ ಆಧಾರ್ ಅಗತ್ಯವಿದೆ.
ಈಗಿನ ಎಲ್ಲಾ ಸರ್ಕಾರಿ ಸೇವೆಗಳು(Government services) ಮತ್ತು ಬ್ಯಾಂಕಿಂಗ್ ಸೇವೆಗಳಲ್ಲಿ(banking services) ಆಧಾರ್ ಅನ್ನು ಕಡ್ಡಾಯವಾಗಿ ಬಳಸಲಾಗುತ್ತಿದೆ.
ಅನೇಕ ಬಾರಿ ನಾವು ಮನೆಯಿಂದ ಹೊರಗಿರುವಾಗ ಇದ್ದಕ್ಕಿದ್ದಂತೆ ಆಧಾರ್ ಅಗತ್ಯವಿರುತ್ತದೆ. ಅನೇಕ ಜನರು ಆಧಾರ್ ಫೋಟೋವನ್ನು ತಮ್ಮ ಮೊಬೈಲ್‌ನಲ್ಲಿ ಇಟ್ಟುಕೊಳ್ಳುತ್ತಾರೆ,
ಆದರೆ ನಿಮ್ಮ ಬಳಿ ಅದು ಇಲ್ಲದಿದ್ದರೆ, ಚಿಂತಿಸಬೇಕಾಗಿಲ್ಲ ಈಗ ನೀವು ನಿಮ್ಮ ಆಧಾರ್ ಕಾರ್ಡ್ ಅನ್ನು ವಾಟ್ಸ್‌ಆ್ಯಪ್‌ನಿಂದ(WhatsApp) ಡೌನ್‌ಲೋಡ್ ಮಾಡಬಹುದು.
ನೀವು ವಾಟ್ಸ್‌ಆ್ಯಪ್‌ನಿಂದ ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡಿಕೊಳ್ಳಲು ಕೆಲ ನಿಯಮಗಳನ್ನು ಪಾಲಿಸಬೇಕು, ಮೊದಲಿಗೆ ನೀವು ಸರ್ಕಾರದ ಡಿಜಿಲಾಕರ್‌ನಲ್ಲಿ ನಿಮ್ಮ ಖಾತೆಯನ್ನು ತೆರೆಯಬೇಕು,
ಇದಕ್ಕೆ ನಿವು ಡಿಜಿಲಾಕರ್ ವೆಬ್‌ಸೈಟ್ ಅಥವಾ ಅಪ್ಲಿಕೇಶನ್‌ನ ಸಹಾಯದಿಂದ ಖಾತೆಯನ್ನು ರಚಿಸಬಹುದು. ಸಾಮಾನ್ಯವಾಗಿ ನಾವುಗಳು ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡಬೇಕು ಎಂದರೆ
UIDAI ವೆಬ್‌ಸೈಟ್‌ಗೆ ಅಥವಾ mAadhaar ಅಪ್ಲಿಕೇಶನ್ ಅನ್ನು ಬಳಸುತ್ತೇವೆ. ಅನೇಕರು DigiLocker ಅನ್ನು ಸಹ ಬಳಸುತ್ತಾರೆ. ಈಗ ವಾಟ್ಸ್‌ಆ್ಯಪ್ ಮೂರನೇಯ ಆಯ್ಕೆ ಎನ್ನಬಹುದು.
UIDAI ಅಥವಾ DigiLocker ಅನ್ನು ಬಳಸಲು ಬಯಸದಿದ್ದಾಗ ವಾಟ್ಸ್‌ಆ್ಯಪ್ ಉಪಯೋಗವಾಗುತ್ತದೆ.

ವಾಟ್ಸ್‌ಆ್ಯಪ್‌ನಿಂದ ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡುವ ವಿದಾನ:
ಹಂತ 1: MyGov ಹೆಲ್ಪ್‌ಡೆಸ್ಕ್‌ನ ಅಧಿಕೃತ ವಾಟ್ಸ್‌ಆ್ಯಪ್ ಸಂಖ್ಯೆ +91-9013151515 ಅನ್ನು ಸೇವ್ ಮಾಡಿ, ಇದು ಭಾರತ ಸರ್ಕಾರದಿಂದ ಒದಗಿಸಲ್ಪಟ್ಟಿದ್ದು,
ಆಧಾರ್ ಕಾರ್ಡ್ ಡೌನ್‌ಲೋಡ್ ಸೇರಿದಂತೆ ವಿವಿಧ ಸೇವೆಗಳಿಗೆ ಸಹಾಯ ಒದಗಿಸುತ್ತದೆ.
ಹಂತ 2: ಸಂಖ್ಯೆಯನ್ನು ಸೇವ್ ಮಾಡಿದ ನಂತರ, ವಾಟ್ಸ್‌ಆ್ಯಪ್‌ನಿಂದ ಈ ಸಂಖ್ಯೆಗೆ “ಹಾಯ್” ಎಂದು ಟೈಪ್ ಮಾಡಿ ಕಳುಹಿಸಿ.
ನೀವು “ಹಾಯ್” ಎಂದು ಕಳುಹಿಸಿದ ನಂತರ, MyGov ಚಾಟ್‌ಬಾಕ್ಸ್‌ನಿಂದ ಪ್ರತಿಕ್ರಿಯೆಯು ಬರುತ್ತದೆ. ಇದರಲ್ಲಿ ಡಿಜಿಲಾಕರ್ ಸೇವೆಗಳು ಸೇರಿದಂತೆ ಹಲವು ಆಯ್ಕೆಗಳನ್ನು ತೋರಿಸುತ್ತದೆ.
ಹಂತ 3: ಚಾಟ್‌ಬಾಕ್ಸ್‌ನಿಂದ ತೋರಿಸಲಾದ ಆಯ್ಕೆಗಳಲ್ಲಿ “ಡಿಜಿಲಾಕರ್ ಸೇವೆಗಳು” ಎಂಬ ಆಯ್ಕೆಯನ್ನು ಸೆಲೆಟ್ಟ್ ಮಾಡಿ. ನಿಮ್ಮ 12 ಅಂಕಿಗಳ ಆಧಾರ್ ಸಂಖ್ಯೆಯನ್ನು ಟೈಪ್ ಮಾಡಿ ಕಳುಹಿಸಿ.
ಇದಕ್ಕಾಗಿ ಡಿಜಿಲಾಕರ್ ಖಾತೆಯಲ್ಲಿ ಆಧಾರ್ ಲಿಂಕ್ ಆಗಿರಬೇಕು.
ಹಂತ 4: ನಂತರದಲ್ಲಿ ನಿಮ್ಮ ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಒಂದು OTP (ಒನ್-ಟೈಮ್ ಪಾಸ್‌ವರ್ಡ್) ಬರುತ್ತದೆ. ಈ OTP ಯನ್ನು ವಾಟ್ಸ್‌ಆ್ಯಪ್ ಚಾಟ್‌ಬಾಕ್ಸ್‌ನಲ್ಲಿ ಟೈಪ್ ಮಾಡಿ ಕಳುಹಿಸಿ.
OTP ಪರಿಶೀಲನೆಯ ನಂತರ, ಡಿಜಿಲಾಕರ್‌ನಲ್ಲಿ ಲಭ್ಯವಿರುವ ಎಲ್ಲಾ ದಾಖಲೆಗಳ ಪಟ್ಟಿಯನ್ನು ಚಾಟ್‌ಬಾಕ್ಸ್ ತೋರಿಸುತ್ತದೆ. ಈ ಪಟ್ಟಿಯಿಂದ “ಆಧಾರ್ ಕಾರ್ಡ್” ಆಯ್ಕೆಮಾಡಿ.
ಹಂತ 5: ಆಧಾರ್ ಕಾರ್ಡ್ ಆಯ್ಕೆಮಾಡಿದ ಕೆಲವೇ ಕ್ಷಣಗಳಲ್ಲಿ, ನಿಮ್ಮ ಆಧಾರ್ ಕಾರ್ಡ್‌ನ PDF ಫೈಲ್ ವಾಟ್ಸ್‌ಆ್ಯಪ್ ಚಾಟ್‌ನಲ್ಲಿ ಕಾಣಿಸಿಕೊಳ್ಳುತ್ತದೆ.
ಇದನ್ನು ಡೌನ್‌ಲೋಡ್ ಮಾಡಿಕೊಂಡು ನಿಮ್ಮ ಫೋನ್‌ನಲ್ಲಿ ಉಳಿಸಿಕೊಳ್ಳಬಹುದು.
ಈ ಸೌಲಭ್ಯದಿಂದ ಬೇರೆ ಯಾವುದೇ ವೆಬ್‌ಸೈಟ್‌ಗೆ ಭೇಟಿ ನೀಡುವ ಅಥವಾ ಆಪ್ ಡೌನ್‌ಲೋಡ್ ಮಾಡುವ ಅಗತ್ಯವಿಲ್ಲ. ಕೆಲವೇ ನಿಮಿಷಗಳಲ್ಲಿ ನಿಮ್ಮ ಆಧಾರ್ ಕಾರ್ಡ್ ಲಭ್ಯವಾಗುತ್ತದೆ.
ಮತ್ತು MyGov ಹೆಲ್ಪ್‌ಡೆಸ್ಕ್ ಮತ್ತು ಡಿಜಿಲಾಕರ್‌ನಿಂದ ಒದಗಿಸಲಾದ ಈ ಸೇವೆ ಸಂಪೂರ್ಣವಾಗಿ ಸುರಕ್ಷಿತವಾಗಿದೆ. ನೀವು ಇನ್ನು ಮುಂದೆ ಎಲ್ಲಿಯಾದರೂ,
ಯಾವುದೇ ಸಮಯದಲ್ಲಾದರೂ ಆಧಾರ್ ಕಾರ್ಡ್ ಪಡೆಯಬಹುದಾಗಿದೆ.
ಇದನ್ನು ಓದಿ : ವೈದ್ಯಕೀಯ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ: ಕರ್ನಾಟಕಕ್ಕೆ 400 ಹೆಚ್ಚುವರಿ MBBS ಸೀಟು ನೀಡಲು NMC ಅನುಮೋದನೆ
ನಿಮ್ಮ ಸುರಕ್ಷತೆಗಾಗಿ +91-9013151515 ಈ ಸಂಖ್ಯೆಯು MyGov ನ ಅಧಿಕೃತ ಸಂಖ್ಯೆಯಾಗಿದ್ದು ಇತರ ಯಾವುದೇ ಸಂಖ್ಯೆಗಳಿಗೆ ಆಧಾರ್ ವಿವರಗಳನ್ನು ಶೇರ್ ಮಾಡಬೇಡಿ. ಆಧಾರ್ ಸಂಖ್ಯೆ ಮತ್ತು OTP ಯನ್ನು ಯಾರೊಂದಿಗೂ ಶೇರ್ ಮಾಡಬೇಡಿ.