• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ಕರ್ನಾಟಕದಲ್ಲಿ ಜಾನುವಾರುಗಳಿಗೂ ಡಿಜಿಟಲ್ ಗುರುತು: ದೇಶದಲ್ಲೇ ಮೊದಲ ಬಾರಿಗೆ ‘ಆಧಾರ್’ ಮಾದರಿ ವ್ಯವಸ್ಥೆ ಜಾರಿ

Teju Srinivas by Teju Srinivas
in ಪ್ರಮುಖ ಸುದ್ದಿ, ರಾಜ್ಯ, ವಿಜಯ ಟೈಮ್ಸ್‌
ಕರ್ನಾಟಕದಲ್ಲಿ ಜಾನುವಾರುಗಳಿಗೂ ಡಿಜಿಟಲ್ ಗುರುತು: ದೇಶದಲ್ಲೇ ಮೊದಲ ಬಾರಿಗೆ ‘ಆಧಾರ್’ ಮಾದರಿ ವ್ಯವಸ್ಥೆ ಜಾರಿ
0
SHARES
11
VIEWS
Share on FacebookShare on Twitter

ವಂಚನೆ ತಡೆಗೆ ಮತ್ತು ಪಾರದರ್ಶಕತೆಗೆ (aadhaar identification system for cattle) ರಾಜ್ಯ ಸರ್ಕಾರದ ಹೈಟೆಕ್ ಯೋಜನೆ

ಮೂಗಿನ ಬಯೋಮೆಟ್ರಿಕ್ ಸ್ಕ್ಯಾನ್ ಮೂಲಕ ಹಸು-ಎಮ್ಮೆಗಳಿಗೆ ವಿಶಿಷ್ಟ ಐಡಿ

ಕಿವಿ ಟ್ಯಾಗ್‌ಗೆ ಗುಡ್‌ಬೈ: ಜಾನುವಾರುಗಳಿಗೆ ಬಯೋಮೆಟ್ರಿಕ್ ಗುರುತು

Bengaluru : ಕರ್ನಾಟಕ ಸರ್ಕಾರ ಪಶುಸಂಗೋಪನಾ ಕ್ಷೇತ್ರದಲ್ಲಿ ಮಹತ್ವದ ಡಿಜಿಟಲ್ ಪರಿವರ್ತನೆಗೆ (aadhaar identification system for cattle) ಮುಂದಾಗಿದೆ. ದೇಶದಲ್ಲೇ ಮೊದಲ ಬಾರಿಗೆ ಜಾನುವಾರುಗಳಿಗೆ ‘ಆಧಾರ್’ ಮಾದರಿಯ ಬಯೋಮೆಟ್ರಿಕ್ ಗುರುತು ವ್ಯವಸ್ಥೆ ಜಾರಿಗೆ ತರಲು ಸಿದ್ಧತೆ ನಡೆಸಲಾಗಿದೆ.

ಈ ಯೋಜನೆಯಡಿ ಹಸು, ಎಮ್ಮೆ ಹಾಗೂ ಕರುಗಳಿಗೆ ವಿಶಿಷ್ಟ ಡಿಜಿಟಲ್ ಐಡಿ ನೀಡಲಾಗುತ್ತದೆ. ರೈತರ ಆಸ್ತಿಯಾದ ಜಾನುವಾರುಗಳ ಸಂಪೂರ್ಣ ಮಾಹಿತಿಯನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸುವ ಈ ಹೊಸ ಯೋಜನೆ ಪಶುಸಂಗೋಪನಾ ಕ್ಷೇತ್ರದಲ್ಲಿ ಹೊಸ ಅಧ್ಯಾಯ ಆರಂಭಿಸಲಿದೆ.

aadhaar identification system for cattle

ಇದುವರೆಗೆ ಜಾನುವಾರುಗಳನ್ನು ಗುರುತಿಸಲು ಕಿವಿಗೆ ಪ್ಲಾಸ್ಟಿಕ್ ಟ್ಯಾಗ್ ಹಾಕುವ ವಿಧಾನವನ್ನು (aadhaar identification system for cattle) ಬಳಸಲಾಗುತ್ತಿತ್ತು. ಆದರೆ ಈ ಪದ್ಧತಿಗೆ ಈಗ ಪರ್ಯಾಯವಾಗಿ ಬಯೋಮೆಟ್ರಿಕ್ ತಂತ್ರಜ್ಞಾನ ಬಳಸಲಾಗುತ್ತಿದೆ.

ಮನುಷ್ಯರ ಬೆರಳಚ್ಚಿನಂತೆ ಪ್ರತಿಯೊಂದು ಜಾನುವಾರದ ಮೂಗಿನ ಮೇಲಿನ ರೇಖೆಗಳು ಮತ್ತು ಮಡಿಕೆಗಳು ವಿಭಿನ್ನವಾಗಿರುವುದರಿಂದ, ಅವುಗಳ ಮೂಗಿನ ಭಾಗವನ್ನು

ಸ್ಕ್ಯಾನ್ ಮಾಡಿ ಡಿಜಿಟಲ್ ದಾಖಲೆ ಸೃಷ್ಟಿಸಲಾಗುತ್ತದೆ. ಈ ತಂತ್ರಜ್ಞಾನದಿಂದ ಜಾನುವಾರುಗಳ ನಿಖರ ಗುರುತು ಪತ್ತೆ ಮಾಡುವುದು ಇನ್ನಷ್ಟು ಸುಲಭವಾಗಲಿದೆ.

ರಾಜ್ಯದ ಇ-ಆಡಳಿತ ಕೇಂದ್ರ (CeG) ಹಾಗೂ ಕೃತಕ ಬುದ್ಧಿಮತ್ತೆ ವಿಭಾಗದ ಸಹಯೋಗದಲ್ಲಿ ಈ ಯೋಜನೆ ರೂಪುಗೊಳ್ಳುತ್ತಿದೆ. ಎಐ ತಂತ್ರಜ್ಞಾನವನ್ನು ಬಳಸಿ ಜಾನುವಾರುಗಳ ಆರೋಗ್ಯ, ಲಸಿಕೆ, ವಿಮೆ ಮತ್ತು ಪರಿಹಾರ ಸಂಬಂಧಿತ ಮಾಹಿತಿಗಳನ್ನು ಸುಲಭವಾಗಿ ನಿರ್ವಹಿಸುವ ವ್ಯವಸ್ಥೆ ಸಿದ್ಧಪಡಿಸಲಾಗುತ್ತಿದೆ.

ಸರ್ಕಾರದ ವಿವಿಧ ಯೋಜನೆಗಳಲ್ಲಿ ನಡೆಯುವ ಅಕ್ರಮ, ನಕಲಿ ದಾಖಲೆ ಮತ್ತು ವಿಮೆ ವಂಚನೆಗಳನ್ನು ತಡೆಗಟ್ಟಲು ಈ ವ್ಯವಸ್ಥೆ ನೆರವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಡಿಜಿಟಲ್ ವ್ಯವಸ್ಥೆ ಪಶುಸಂಗೋಪನಾ ಇಲಾಖೆಯಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸುವ ನಿರೀಕ್ಷೆಯಿದೆ.

ಈ ಯೋಜನೆಯ ಪ್ರಮುಖ ವಿಶೇಷತೆ ಎಂದರೆ ರೈತರಿಗೆ ಮೊಬೈಲ್ ಮೂಲಕವೇ ಮಾಹಿತಿ ಲಭ್ಯವಾಗುವುದು.

ಜಾನುವಾರುಗಳಿಗೆ ಲಸಿಕೆ ಹಾಕುವ ದಿನಾಂಕ, ಆರೋಗ್ಯ ತಪಾಸಣೆ, ವಿಮೆ ನವೀಕರಣ ಹಾಗೂ ಇತರೆ ಸೇವೆಗಳ ಬಗ್ಗೆ ಎಸ್‌ಎಂಎಸ್ ಅಲರ್ಟ್ (SMS Alert) ಕಳುಹಿಸಲಾಗುತ್ತದೆ.

ಹೊಸದಾಗಿ ಹುಟ್ಟುವ ಕರುಗಳಿಗೂ ತಕ್ಷಣವೇ ಡಿಜಿಟಲ್ ದಾಖಲೆ ಸೃಷ್ಟಿಸುವ ವ್ಯವಸ್ಥೆ ಇರಲಿದೆ. ಮುಂದಿನ ದಿನಗಳಲ್ಲಿ ಮೂಗಿನ ಫೋಟೋ ಸ್ಕ್ಯಾನ್ (Photo Scan)

ಮೂಲಕವೇ ಜಾನುವಾರುಗಳ ಆರೋಗ್ಯ ಸಮಸ್ಯೆಗಳನ್ನು ಪತ್ತೆಹಚ್ಚುವ ತಂತ್ರಜ್ಞಾನ ಅಭಿವೃದ್ಧಿಪಡಿಸುವ ಯೋಜನೆಯೂ ಸರ್ಕಾರದ ಮುಂದಿದೆ.

ಪ್ರಸ್ತುತ ಕರ್ನಾಟಕದಲ್ಲಿ ಒಂದು ಕೋಟಿಗೂ ಅಧಿಕ ಜಾನುವಾರುಗಳಿದ್ದು, ಪ್ರತಿವರ್ಷ ಲಕ್ಷಾಂತರ ಹೊಸ ದನ-ಕರುಗಳು ಸೇರ್ಪಡೆಯಾಗುತ್ತಿವೆ.

ಇಂತಹ ಬೃಹತ್ ಪ್ರಮಾಣದ ಮಾಹಿತಿಯನ್ನು ಸಮರ್ಪಕವಾಗಿ ನಿರ್ವಹಿಸಲು ಎಐ ಆಧಾರಿತ ಡಿಜಿಟಲ್ ವ್ಯವಸ್ಥೆ ಬಹಳ ಸಹಕಾರಿಯಾಗಲಿದೆ.

ರೈತರಿಗೆ ಅನುಕೂಲ ಕಲ್ಪಿಸುವ ಜೊತೆಗೆ ಪಶುಸಂಗೋಪನಾ ಕ್ಷೇತ್ರವನ್ನು ಆಧುನಿಕ ತಂತ್ರಜ್ಞಾನದತ್ತ ಕೊಂಡೊಯ್ಯುವ ಈ ಯೋಜನೆ ರಾಜ್ಯಕ್ಕೆ ಮಾದರಿಯಾಗಲಿದೆ.

ತಂತ್ರಜ್ಞಾನದ ನೆರವಿನಿಂದ ಜಾನುವಾರುಗಳ ಆರೈಕೆ ಮತ್ತು ನಿರ್ವಹಣೆಯಲ್ಲಿ ಕರ್ನಾಟಕ ಮತ್ತೊಂದು ಹೊಸ ಹೆಜ್ಜೆ ಇಟ್ಟಂತಾಗಿದೆ.

ಇದನ್ನು ಓದಿ : https://vijayatimes.com/petrol-diesel-cng-prices-increase/

Tags: adharanimalscattleDigital identificationKarnataka

Related News

ಕೇರಳದಲ್ಲಿ ಶಿಗೆಲ್ಲಾ ಸೋಂಕಿನ ಆತಂಕ: 443 ಮಂದಿಗೆ ಸೋಂಕಿನ ಶಂಕೆ, ಆರೋಗ್ಯ ಇಲಾಖೆ ಹೈ ಅಲರ್ಟ್
ಪ್ರಮುಖ ಸುದ್ದಿ

ಕೇರಳದಲ್ಲಿ ಶಿಗೆಲ್ಲಾ ಸೋಂಕಿನ ಆತಂಕ: 443 ಮಂದಿಗೆ ಸೋಂಕಿನ ಶಂಕೆ, ಆರೋಗ್ಯ ಇಲಾಖೆ ಹೈ ಅಲರ್ಟ್

June 9, 2026
ಇನ್ಮುಂದೆ ಐಡಿ ಕಾರ್ಡ್ ಇಲ್ಲದಿದ್ದರೆ ಪಬ್, ಬಾರ್, ಕ್ಲಬ್‌ಗಳಿಗೆ ಪ್ರವೇಶ ಇಲ್ಲ: ಅಪ್ರಾಪ್ತರ ಮದ್ಯಪಾನ ತಡೆಗೆ ರಾಜ್ಯ ಸರ್ಕಾರದ ಕಟ್ಟುನಿಟ್ಟಿನ ಕ್ರಮ
ಪ್ರಮುಖ ಸುದ್ದಿ

ಇನ್ಮುಂದೆ ಐಡಿ ಕಾರ್ಡ್ ಇಲ್ಲದಿದ್ದರೆ ಪಬ್, ಬಾರ್, ಕ್ಲಬ್‌ಗಳಿಗೆ ಪ್ರವೇಶ ಇಲ್ಲ: ಅಪ್ರಾಪ್ತರ ಮದ್ಯಪಾನ ತಡೆಗೆ ರಾಜ್ಯ ಸರ್ಕಾರದ ಕಟ್ಟುನಿಟ್ಟಿನ ಕ್ರಮ

June 9, 2026
ಟಾಟಾ ಮ್ಯೂಚುವಲ್ ಫಂಡ್‌ನಿಂದ ಗೋಲ್ಡ್ ಇಟಿಎಫ್ ಹೂಡಿಕೆಗೆ ತಾತ್ಕಾಲಿಕ ನಿರ್ಬಂಧ: ಎಸ್‌ಐಪಿ ಹೂಡಿಕೆದಾರರಿಗೆ ಯಾವುದೇ ಬದಲಾವಣೆಗಳಿಲ್ಲ
ಪ್ರಮುಖ ಸುದ್ದಿ

ಟಾಟಾ ಮ್ಯೂಚುವಲ್ ಫಂಡ್‌ನಿಂದ ಗೋಲ್ಡ್ ಇಟಿಎಫ್ ಹೂಡಿಕೆಗೆ ತಾತ್ಕಾಲಿಕ ನಿರ್ಬಂಧ: ಎಸ್‌ಐಪಿ ಹೂಡಿಕೆದಾರರಿಗೆ ಯಾವುದೇ ಬದಲಾವಣೆಗಳಿಲ್ಲ

June 9, 2026
H-1B ವೀಸಾ ಅರ್ಜಿದಾರರಿಗೆ ಮಹತ್ವದ ಜಯ: ಟ್ರಂಪ್ ಹೇರಿದ್ದ ₹83 ಲಕ್ಷ ‘ಫಾಸ್ಟ್-ಟ್ರ್ಯಾಕ್’ ಶುಲ್ಕ ರದ್ದು
ದೇಶ-ವಿದೇಶ

H-1B ವೀಸಾ ಅರ್ಜಿದಾರರಿಗೆ ಮಹತ್ವದ ಜಯ: ಟ್ರಂಪ್ ಹೇರಿದ್ದ ₹83 ಲಕ್ಷ ‘ಫಾಸ್ಟ್-ಟ್ರ್ಯಾಕ್’ ಶುಲ್ಕ ರದ್ದು

June 9, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.