India : ನಿಮ್ಮ ಆಧಾರ್ ಸಂಖ್ಯೆ ದುರ್ಬಳಕೆಯಾಗುತ್ತಿದ್ದೆಯೇ ಎಂದು ನಿಮಗೆ ಅನುಮಾನ ಅಥವಾ ಗೊಂದಲವಿದ್ದರೇ ಈ ಸರಳ ಹಂತಗಳನ್ನು ಅನುಸರಿಸುವ ಮೂಲಕ ತಿಳಿದುಕೊಳ್ಳಿ.
ಆಧಾರ್(Aadhaar Card) , ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದಿಂದ ನೀಡಲಾದ 12 ಅಂಕಿಯ ಸಂಖ್ಯೆಯನ್ನು ವಿವಿಧ ವೇದಿಕೆಗಳಲ್ಲಿ ಪರಿಶೀಲನೆಗಾಗಿ ಬಳಸಲಾಗುತ್ತದೆ. ಈ ಸೇವೆಗಳನ್ನು ಪಡೆದುಕೊಳ್ಳುವಾಗ ನಮ್ಮ ಗುರುತನ್ನು ಪರಿಶೀಲಿಸಲು ಸಹ ಇದನ್ನು ಬಳಸಲಾಗುತ್ತದೆ.
ಇದನ್ನೂ ಓದಿ: ಪ್ರ+ ಅದಾನಿ ಯಾವ ಸಂಧಿಯಾಗಲಿದೆ? ಟ್ವಿಟರ್‌ನಲ್ಲಿ ಪ್ರಶ್ನೆ ಹಾಕಿದ ಪ್ರಕಾಶ್ ರಾಜ್!
ಆದರೆ ನಿಮ್ಮ ಆಧಾರ್ ಸಂಖ್ಯೆಯನ್ನು ದುರುಪಯೋಗಪಡಿಸಿಕೊಂಡರೆ ಏನು ಮಾಡಬೇಕು? ನೀವು ಅದನ್ನು ಹೇಗೆ ಪರಿಶೀಲಿಸಬೇಕು? ಇದನ್ನು ಪರಿಶೀಲಿಸಲು, ಆಧಾರ್ ನೀಡುವ ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ಗೆ(Website) ಹೋಗಿ, UIDAI, ಆಧಾರ್ ದೃಢೀಕರಣ ಹಿಸ್ಟರಿಗೆ ಹೋಗಿ ಚೆಕ್ ಮಾಡಬೇಕು. ಅದು ನಿಮ್ಮ ಕಾರ್ಡ್ ಅನ್ನು ದುರುಪಯೋಗಪಡಿಸಿಕೊಂಡಿದೆಯೇ ಎಂದು ನಿಖರವಾಗಿ ತಿಳಿಸುತ್ತದೆ. ಆಧಾರ್ ದೃಢೀಕರಣ ಇತಿಹಾಸ ಪರಿಶೀಲಿಸಲು ಕೆಳಗೆ ತಿಳಿಸಲಾಗಿರುವ ಸರಳ ಮಾರ್ಗವನ್ನು ಅನುಸರಿಸಿ.

- uidai.gov.in ನಲ್ಲಿ ಅಧಿಕೃತ UIDAI ವೆಬ್‌ಸೈಟ್‌ಗೆ ಹೋಗಿ. ಮತ್ತು ವೆಬ್‌ಸೈಟ್ ಪ್ರವೇಶಿಸಲು ನಿಮ್ಮ ಬೇಕಾದ ಭಾಷೆಯನ್ನು ಆಯ್ಕೆ ಮಾಡಿ.
- ವೆಬ್‌ಸೈಟ್ ತೆರೆಯುತ್ತಿದ್ದಂತೆ ಎಡ ಮೇಲ್ಭಾಗದ ಮೂಲೆಯಲ್ಲಿರುವ ‘ನನ್ನ ಆಧಾರ್’ ವಿಭಾಗದ ಮೇಲೆ ಕ್ಲಿಕ್ ಮಾಡಿ. ಪರದೆಯ ಮೇಲೆ ಡ್ರಾಪ್-ಡೌನ್ ಮೆನು ಕಾಣಿಸುತ್ತದೆ.
- ಆಧಾರ್ ಸೇವೆಗಳ ವಿಭಾಗದ ಅಡಿಯಲ್ಲಿ ‘ಆಧಾರ್ ದೃಢೀಕರಣ ಹಿಸ್ಟರಿಗೆ ಹೋಗಿ. ನಿಮ್ಮನ್ನು ಹೊಸ ವೆಬ್‌ಪುಟಕ್ಕೆ ನಿರ್ದೇಶಿಸಲಾಗುತ್ತದೆ.
- ನಿಮ್ಮ ಆಧಾರ್ ಸಂಖ್ಯೆ ಮತ್ತು ಭದ್ರತಾ ಕೋಡ್ ಅನ್ನು ಬಳಸಿಕೊಂಡು ಲಾಗ್ ಇನ್ ಮಾಡಿ ಮತ್ತು Send OTP ಕ್ಲಿಕ್ ಮಾಡಿ.
- ಯಶಸ್ವಿ ಪರಿಶೀಲನೆಗಾಗಿ ಓಟಿಪಿ(OTP) ಅನ್ನು ಭರ್ತಿ ಮಾಡಿ ಮತ್ತು ಪ್ರೊಸೀಡ್’ ಆಯ್ಕೆಯನ್ನು ಕ್ಲಿಕ್ ಮಾಡಿ.
- ನಿಮ್ಮ ಆಧಾರ್ ಕಾರ್ಡ್ ಮತ್ತು ಹಿಂದಿನ ದೃಢೀಕರಣ ವಿನಂತಿಗಳ ಎಲ್ಲಾ ವಿವರಗಳು ಪರದೆಯ ಮೇಲೆ ಬರುತ್ತದೆ.
ಇದನ್ನೂ ಓದಿ: ಆರ್‌ಸಿಬಿ ತಂಡಕ್ಕೆ ಬರುತ್ತಿದ್ದಂತೆ ‘ನಮಸ್ಕಾರ ಬೆಂಗಳೂರು’ ಎಂದು ಕೂಗಿದ ಸ್ಮೃತಿ ಮಂದಾನ
ದೃಢೀಕರಣ ವಹಿವಾಟು ಲಾಗ್‌ಗಳಲ್ಲಿ ನೀವು ಪಡೆಯುವ ಮಾಹಿತಿ : ನೀವು ದೃಢೀಕರಣ ಇತಿಹಾಸವನ್ನು ನಮೂದಿಸಿದಂತೆ, ದೃಢೀಕರಣ ಬಳಕೆದಾರ ಏಜೆನ್ಸಿ (AUA) ಅಥವಾ ವ್ಯಕ್ತಿಯಿಂದ ನಿರ್ವಹಿಸಲಾದ ಎಲ್ಲಾ ದೃಢೀಕರಣ ಚಟುವಟಿಕೆಗಳನ್ನು ಪ್ರದರ್ಶಿಸಲಾಗುತ್ತದೆ. ಇದು ತೀರಾ ಇತ್ತೀಚಿನ ಆರು ತಿಂಗಳುಗಳು ಮತ್ತು 50 ದಾಖಲೆಗಳನ್ನು ಹಿಂಪಡೆಯುತ್ತದೆ. ಆದಾಗ್ಯೂ, ಒಬ್ಬ ವ್ಯಕ್ತಿಯು ಹೆಚ್ಚಿನ ದಾಖಲೆಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಬಯಸಿದರೆ, ಅವರು ಕ್ಯಾಲೆಂಡರ್‌ನಲ್ಲಿ ದಿನಾಂಕ ಶ್ರೇಣಿಯನ್ನು ಆಯ್ಕೆ ಮಾಡಬೇಕಾಗುತ್ತದೆ ಮತ್ತು ನಂತರ ದೃಢೀಕರಣ ದಾಖಲೆಗಳನ್ನು ವೀಕ್ಷಿಸಬಹುದಾಗಿದೆ.

ಕೆಳಗಿನ ವಿವರಗಳನ್ನು ದೃಢೀಕರಣ ಇತಿಹಾಸದಲ್ಲಿ ನೀವು ಪರಿಶೀಲಿಸಬಹುದು :
- ದೃಢೀಕರಣ ವಿಧಾನ.
- ದೃಢೀಕರಣದ ದಿನಾಂಕ ಮತ್ತು ಸಮಯ.
- ಯುಐಡಿಎಐ ಪ್ರತಿಕ್ರಿಯೆ ಕೋಡ್.
- AUA ಹೆಸರು
- AUA ವಹಿವಾಟು ID (ಕೋಡ್‌ನೊಂದಿಗೆ)
- ದೃಢೀಕರಣ ಪ್ರತಿಕ್ರಿಯೆ (ಯಶಸ್ಸು/ವೈಫಲ್ಯ)
- ಯುಐಡಿಎಐ ದೋಷ ಕೋಡ್
ನಿಮ್ಮ ಆಧಾರ್ ಬಳಕೆಯ ಯಾವುದೇ ಶಂಕಿತ ದುರುಪಯೋಗ ಅಥವಾ ಅಕ್ರಮಗಳು ಪತ್ತೆಯಾದರೆ, UIDAI ಅನ್ನು ಅದರ ಟೋಲ್ ಫ್ರೀ ಸಂಖ್ಯೆ – 1947 ಅಥವಾ ಹೆಲ್ಪ್ ಡೆಸ್ಕ್ help@uidai.gov.in ಎಂಬ ಇಮೇಲ್ಗೆ ಮೇಲ್ ಮಾಡಿ.